ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಹಿಮಾಚಲ ಪ್ರದೇಶದಲ್ಲಿ ನಮೋ ಟೀ ಸ್ಟಾಲ್‌

|

Updated on: Dec 26, 2023 | 5:51 PM

ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಪ್ರಾರಂಭಿಸಲಾದ ಅಭಿವೃದ್ಧಿ ಯೋಜನೆಗಳು ಮತ್ತು ಉಪಕ್ರಮಗಳ ಕುರಿತು "ಗುಪ್-ಶುಪ್ ಔರ್ ಚಾಯ್" ಹೊಂದುವ ಆಲೋಚನೆ ಇದೆ ಎಂದು ಜಿಲ್ಲಾ BJYM ವಕ್ತಾರರು ತಿಳಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ 'ನಮೋ' ಟೀ ಸ್ಟಾಲ್‌ಗಳು ಪ್ರಮುಖ ಪಾತ್ರವಹಿಸಲಿವೆ ಎಂದು ಬಿಜೆವೈಎಂ ಜಿಲ್ಲಾ ಪದಾಧಿಕಾರಿಗಳು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಹಿಮಾಚಲ ಪ್ರದೇಶದಲ್ಲಿ ನಮೋ ಟೀ ಸ್ಟಾಲ್‌
ನಮೋ ಟೀ ಸ್ಟಾಲ್
Follow us on

ಹಮೀರ್‌ಪುರ, ಹಿಮಾಚಲ ಪ್ರದೇಶ ಡಿಸೆಂಬರ್ 26: ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾ (BJYM) ಕೇಂದ್ರ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಈ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿ “ನಮೋ” ಟೀ ಸ್ಟಾಲ್‌ಗಳನ್ನು ಸ್ಥಾಪಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ, “ಪ್ರಸ್ತುತ ಭಾರತದ ವಾಸ್ತುಶಿಲ್ಪಿ” ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಹೆಸರಿನ ‘ನಮೋ’ ಟೀ ಸ್ಟಾಲ್‌ಗಳನ್ನು(Namo Tea Stalls) ಹಮೀರ್‌ಪುರದ ಗಾಂಧಿ ಚೌಕ್, ನಾದೌನ್‌ನ ಇಂದ್ರಪಾಲ್ ಚೌಕ್, ಭೋರಂಜ್‌ನ ಮುಖ್ಯ ಮಾರುಕಟ್ಟೆ, ಬದ್ಸರ್ ಬಜಾರ್‌ ಮತ್ತು ಸುಜನಪುರ ಬಜಾರ್ ನಲ್ಲಿ ಮಂಗಳವಾರ ಸ್ಥಾಪಿಸಲಾಯಿತು ಎಂದು ಬಿಜೆವೈಎಂ ಪ್ರಕಟಣೆಯಲ್ಲಿ ತಿಳಿಸಿದೆ.

ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಪ್ರಾರಂಭಿಸಲಾದ ಅಭಿವೃದ್ಧಿ ಯೋಜನೆಗಳು ಮತ್ತು ಉಪಕ್ರಮಗಳ ಕುರಿತು “ಗುಪ್-ಶುಪ್ ಔರ್ ಚಾಯ್” (ಚಹಾ ಮತ್ತು ಚರ್ಚೆ) ಹೊಂದುವ ಆಲೋಚನೆ ಇದೆ ಎಂದು ಜಿಲ್ಲಾ BJYM ವಕ್ತಾರರು ತಿಳಿಸಿದ್ದಾರೆ.


2024ರ ಲೋಕಸಭೆ ಚುನಾವಣೆಯಲ್ಲಿ ‘ನಮೋ’ ಟೀ ಸ್ಟಾಲ್‌ಗಳು ಪ್ರಮುಖ ಪಾತ್ರವಹಿಸಲಿವೆ ಎಂದು ಬಿಜೆವೈಎಂ ಜಿಲ್ಲಾ ಪದಾಧಿಕಾರಿಗಳು ಹೇಳಿದ್ದು, ಬಿಜೆಪಿಯ ಯುವ ಘಟಕವು ಈ ಮಳಿಗೆಗಳಲ್ಲಿ ಹಲವಾರು ಚಟುವಟಿಕೆಗಳನ್ನು ಆಯೋಜಿಸುತ್ತದೆ ಎಂದಿದ್ದಾರೆ.

2014 ರ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ, ಬಿಜೆಪಿ “ಚಾಯ್ ಪೇ ಚರ್ಚಾ” ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು, ಇದರಲ್ಲಿ ಅಂದಿನ ಪ್ರಧಾನಿ ಅಭ್ಯರ್ಥಿ ಮೋದಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ನೂರಾರು ಸ್ಥಳಗಳಲ್ಲಿ ಜನರೊಂದಿಗೆ ಚಹಾ ಸೇವಿಸಿ ಸಭೆ ನಡೆಸಿದ್ದರು. ಮತಗಳಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ