ದೆಹಲಿ: ಕೃಷಿ ಕಾಯ್ದೆ ಪರ ಒಲವುಳ್ಳ ತಜ್ಞರ ಸಮಿತಿಯ ಈಗಿನ ಸದಸ್ಯರನ್ನು ತೆಗೆದು ಪರಸ್ಪರ ಸಾಮರಸ್ಯ ಭಾವನೆ ಮೂಡಿಸಬಲ್ಲ ಹೊಸ ಸದಸ್ಯರನ್ನು ನೇಮಿಸಬೇಕು ಎಂದು ರೈತ ಚಳವಳಿಯಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ ಲೋಕಶಕ್ತಿ ಸಂಘಟನೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.
ಸಮಿತಿಯಲ್ಲಿರುವ ಈಗಿನ ಸದಸ್ಯರು ಈಗಾಗಲೇ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದಾರೆ. ಈ ಸಮಿತಿಯ ತಜ್ಞರಿಂದ ನಮಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ರೈತ ಸಂಘಟನೆ ದೂರಿದೆ. ಸಮಿತಿಗೆ ಒಮ್ಮತ ಮೂಡಿಸಬಹುದಾದ ತಜ್ಞರನ್ನು ನೇಮಿಸುವಂತೆ ಮಾಡಿದೆ. ರೈತ ನಾಯಕ ರಾಕೇಶ್ ಟಿಕಾಯತ್ ಸಹ ತಜ್ಞರ ಸಮಿತಿಯೆದುರು ಹೋಗುವುದಿಲ್ಲ ಎಂದಿದ್ದರು.
ಭಾರತೀಯ ಕಿಸಾನ್ ಯೂನಿಯನ್ ಲೋಕಶಕ್ತಿ ಸಂಘಟನೆ ಮಾಡಿರುವ ಮನವಿಯಲ್ಲಿ ಕೇಂದ್ರ ಸರ್ಕಾರ ಟ್ರ್ಯಾಕ್ಟರ್ ಪರೇಡ್ ನಡೆಸದಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರದ್ದುಗೊಳಿಸುವಂತೆಯೂ ಕೋರಲಾಗಿದೆ. ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಟ್ರ್ಯಾಕ್ಟರ್ ಪರೇಡ್ ಧಕ್ಕೆ ತರುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ರದ್ದುಗೊಳಿಸಲು ಕೋರಿ ಅರ್ಜಿ ಸಲ್ಲಿಸಿತ್ತು. ಜನವರಿ 18ರಂದು ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತ್ತು.
ಸರ್ಕಾರದ ಜತೆಯೇ ಚರ್ಚಿಸುತ್ತೇವೆ, ತಜ್ಞರ ಸಮಿತಿಯೆದುರು ಹೋಗುವುದಿಲ್ಲ: ರೈತ ನಾಯಕ ರಾಕೇಶ್ ಟಿಕಾಯತ್