AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RD Chief Guest: ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲು ನಿರಾಕರಿಸಿದ ನಾಯಕರು ಯಾರು ಯಾರು ಗೊತ್ತಾ?

ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕಿದ್ದ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ತಮ್ಮ ಪ್ರವಾಸ ರದ್ದು ಮಾಡಿದ್ದರು. ಈ ಮೊದಲು ಕೂಡ ಸಾಕಷ್ಟು ಪ್ರಮುಖ ನಾಯಕರು ಭಾರತ ಪ್ರವಾಸ ರದ್ದು ಮಾಡಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ.

RD Chief Guest: ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲು ನಿರಾಕರಿಸಿದ ನಾಯಕರು ಯಾರು ಯಾರು ಗೊತ್ತಾ?
ಸಾಂಕೇತಿಕ ಚಿತ್ರ
ರಾಜೇಶ್ ದುಗ್ಗುಮನೆ
|

Updated on: Jan 16, 2021 | 6:48 PM

Share

ನವದೆಹಲಿ: ಜನವರಿ 26ರಂದು ವಿದೇಶದ ಪ್ರಮುಖ ನಾಯಕರು ದೆಹಲಿಗೆ ಆಗಮಿಸಿ, ಭವ್ಯ ಗಣರಾಜ್ಯೋತ್ಸವ ಪರೇಡ್​ ಕಾರ್ಯಕ್ರಮ ಕಣ್ತುಂಬಿಕೊಂಡು ಹೋಗುವುದು ಈ ಮೊದಲಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಆದರೆ, ಈ 55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾರೊಬ್ಬರೂ ಅತಿಥಿಯಾಗಿ ಬರುತ್ತಿಲ್ಲ.

ಬ್ರಿಟನ್​ನಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಕಾಣಿಸಿಕೊಂಡಿದೆ. ಹೀಗಾಗಿ, ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕಿದ್ದ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ತಮ್ಮ ಪ್ರವಾಸ ರದ್ದು ಮಾಡಿದ್ದರು. ಹೀಗಾಗಿ ಮುಖ್ಯ ಅತಿಥಿ ಇಲ್ಲದೆ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.

ಬೋರಿಸ್​ ಜಾನ್ಸನ್​ ಮಾದರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬರಲು ಅನೇಕ ನಾಯಕರು ಈ ಮೊದಲು ನಿರಾಕರಿಸಿದ್ದರು. ಆ ಬಗ್ಗೆ ಇಲ್ಲಿದೆ ವಿವರ..

1966ರ ಜನವರಿ 11ರಂದು ಪ್ರಧಾನಿ ಲಾಲ್​ ಬಹದ್ಧೂರ್​ ಶಾಸ್ತ್ರಿ ಮೃತಪಟ್ಟಿದ್ದರು. ಈ ವೇಳೆ ಇಂದಿರಾ ಗಾಂಧಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಬೆಳವಣಿಗೆ ನಡುವೆ ಗಣರಾಜ್ಯೋತ್ಸವಕ್ಕೆ ಯಾರೊಬ್ಬರೂ ಮುಖ್ಯ ಅತಿಥಿಯಾಗಿ ಆಗಮಿಸಿರಲಿಲ್ಲ.

ಡೊನಾಲ್ಡ್​ ಟ್ರಂಪ್​: 2019ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಆಹ್ವಾನ ನೀಡಿತ್ತು. ಆದರೆ, ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ಕಾರ್ಯಕ್ರಮಕ್ಕೆ ಬರಲು ಅವರು ನಿರಾಕರಿಸಿದ್ದರು.

ಒಮನ್​ ಸುಲ್ತಾನ: ಒಮನ್​ ಸುಲ್ತಾನ ಖಬೂಸ್​ ಬಿಸ್​ ಸಯೀದ್​ ಅಲ್​ 2013ರಲ್ಲಿ ಗಣ ರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ, ಸಂವಹನ ಸಮಸ್ಯೆಯಿಂದಾಗಿ ಅವರು ಆಗಮನ ನಿರಾಕರಿಸಿದ್ದರು.

ಬಿಲ್​ ಕ್ಲಿಂಟನ್​: 1995ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬಿಲ್​ ಕ್ಲಿಂಟನ್​ಗೆ ಭಾರತ ಸರ್ಕಾರ ಆಹ್ವಾನ ನೀಡಿತ್ತು. ಆದರೆ, ಈ ಆಹ್ವಾನವನ್ನು ಅವರು ತಿರಸ್ಕರಿಸಿದ್ದರು.

Army Day 2021 | ‘ನೆಲದ ಋಣಕ್ಕೆ ಗಂಡು-ಹೆಣ್ಣು ಭೇದವುಂಟೇ’-ಇಲ್ಲಿದೆ ಗಣರಾಜ್ಯೋತ್ಸವ ಪರೇಡ್ ಮುನ್ನಡೆಸಿದ ಕ್ಯಾಪ್ಟನ್ ತಾನಿಯಾ ಶೇರ್ಗಿಲ್ ಕಥೆ

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?