ಬಿಹಾರ: ದುರ್ಗಾಪೂಜೆ ವೇಳೆ ಕಾಲ್ತುಳಿತದಲ್ಲಿ ಮೂರು ಮಂದಿ ಸಾವು, ಹಲವರಿಗೆ ಗಾಯ

|

Updated on: Oct 24, 2023 | 7:55 AM

ಬಿಹಾರದ ಗೋಪಾಲ್​ಗಂಜ್​ನಲ್ಲಿ ನಡೆದ ದುರ್ಗಾಪೂಜೆ ವೇಳೆ ಕಾಲ್ತುಳಿತದಲ್ಲಿ 3 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದುರ್ಗಾಪೂಜೆ ಆಚರಣೆಯಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಒರ್ವ ಬಾಲಕ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬಿಹಾರ: ದುರ್ಗಾಪೂಜೆ ವೇಳೆ ಕಾಲ್ತುಳಿತದಲ್ಲಿ ಮೂರು ಮಂದಿ ಸಾವು, ಹಲವರಿಗೆ ಗಾಯ
ಬಿಹಾರ ದೇವಸ್ಥಾನ
Image Credit source: Business Standard
Follow us on

ಬಿಹಾರದ ಗೋಪಾಲ್​ಗಂಜ್​ನಲ್ಲಿ ನಡೆದ ದುರ್ಗಾಪೂಜೆ ವೇಳೆ ಕಾಲ್ತುಳಿತದಲ್ಲಿ 3 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ದುರ್ಗಾಪೂಜೆ ಆಚರಣೆಯಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಒರ್ವ ಬಾಲಕ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಸದರ್​ ಆಸ್ಪತ್ರೆಗೆ ದಾಖಲಿಸಲಾಗಿದೆ, ಜನಸಂದಣಿಯನ್ನು ನಿರ್ವಹಿಸಲು ಪೂಜೆ ವೇಳೆ ಯಾವುದೇ ಭದ್ರತಾ ನಿಯೋಜನೆ ಇರಲಿಲ್ಲ, ಇದು ಕಾಲ್ತುಳಿತಕ್ಕೆ ಕಾರಣವಾಯಿತು.

ಗೋಪಾಲ್‌ಗಂಜ್ ಎಸ್‌ಪಿ ಮಾತನಾಡಿ, ರಾತ್ರಿ 8.30 ರ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ಬಾಲಕ ನೆಲಕ್ಕೆ ಬಿದ್ದು ತುಳಿತಕ್ಕೊಳಗಾಗಿದ್ದ, ಆತನನ್ನು ರಕ್ಷಿಸಲು ಹೋದ ಇನ್ನೂ ಇಬ್ಬರು ಕೂಡ ಸಾವನ್ನಪ್ಪಿದ್ದಾರೆ.

ಮೃತರನ್ನು ಗುರುತಿಸಲಾಗಿದ್ದು, ಏಳು ಮಂದಿ ಗಾಯಾಳುಗಳನ್ನು ಸದರ್ ಆಸ್ಪತ್ರೆಯಿಂದ ಉತ್ತಮ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.

ಮತ್ತಷ್ಟು ಓದಿ: Odisha Stampede: ಒಡಿಶಾದಲ್ಲಿ ಮಕರ ಮೇಳದಲ್ಲಿ ಕಾಲ್ತುಳಿತ; ಮಹಿಳೆ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

ಮೃತರಲ್ಲಿ ಕುಚಯ್‌ಕೋಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಸಾಮುಸಾ ನಿವಾಸಿ ರವೀಂದ್ರ ಸಾಹ್ ಅವರ 55 ವರ್ಷದ ಪತ್ನಿ ಊರ್ಮಿಳಾ ದೇವಿ, ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ದಿಲಾ ಗ್ರಾಮದ ನಿವಾಸಿ ಭೋಜ್ ಶರ್ಮಾ ಅವರ 60 ವರ್ಷದ ಪತ್ನಿ ಶಾಂತಿ ದೇವಿ ಮತ್ತು 5 ವರ್ಷದ ಆಯುಷ್ ಕುಮಾರ್ ಸೇರಿದ್ದಾರೆ. ಮಂಜಾ ಪೊಲೀಸ್ ಠಾಣೆ ವ್ಯಾಪ್ತಿಯ ಸನಾಹ್ ಮಥಿಯಾ ಗ್ರಾಮದ ನಿವಾಸಿ ದಿಲೀಪ್ ರಾಮ್ ಅವರ ಪುತ್ರ.

ಪೂಜಾ ಸಮಿತಿಗಳ ಮನವಿ ಮೇರೆಗೆ ವಿಜಯದಶಮಿ ದಿನದಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಜಾತ್ರೆ ನಡೆಸಲು ಅನುಮತಿ ನೀಡಲಾಗಿದೆ. ಪ್ರಸ್ತುತ ಪರಿಸ್ಥಿತಿ ಸಾಮಾನ್ಯವಾಗಿದೆ. ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:54 am, Tue, 24 October 23