AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ: ಮದುವೆಯಾಗಿ 45 ದಿನಕ್ಕೆ ಗಂಡನ ಕೊಂದು, ಮಾವನ ಜತೆ ಓಡಿ ಹೋದ ಮಹಿಳೆ

ಮದುವೆ(Marriage)ಯಾಗಿ ಕೇವಲ ತಿಂಗಳಿಗೆ ಗಂಡನನ್ನು ಕೊಂದು ಮಹಿಳೆಯೊಬ್ಬಳು ಮಾವನ ಜತೆ ಓಡಿ ಹೋಗಿರುವ ಘಟನೆ ಔರಂಗಾಬಾದ್​ನಲ್ಲಿ ನಡೆದಿದೆ. ಮದುವೆಯಾಗಿ 45ದಿನಕ್ಕೆ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿದ್ದಳು. ಈ ಘಟನೆಯು ಇತ್ತೀಚೆಗೆ ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಹತ್ಯೆಯನ್ನು ನೆನಪಿಸುತ್ತದೆ. ಅಲ್ಲಿ ಕೂಡ ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹನ ಜತೆ ಸೇರಿ ಹನಿಮೂನ್​​ಗೆ ಹೋದಾಗ ಗಂಡನನ್ನು ಹತ್ಯೆ ಮಾಡಿಸಿದ್ದಳು.

ಬಿಹಾರ: ಮದುವೆಯಾಗಿ 45 ದಿನಕ್ಕೆ ಗಂಡನ ಕೊಂದು, ಮಾವನ ಜತೆ ಓಡಿ ಹೋದ ಮಹಿಳೆ
ಆರೋಪಿ ಗುಂಜಾImage Credit source: NDTV
ನಯನಾ ರಾಜೀವ್
|

Updated on:Jul 03, 2025 | 12:07 PM

Share

ಔರಂಗಾಬಾದ್, ಜುಲೈ 03: ಮದುವೆ(Marriage)ಯಾಗಿ ಕೇವಲ ತಿಂಗಳಿಗೆ ಗಂಡನನ್ನು ಕೊಂದು ಮಹಿಳೆಯೊಬ್ಬಳು ಮಾವನ ಜತೆ ಓಡಿ ಹೋಗಿರುವ ಘಟನೆ ಔರಂಗಾಬಾದ್​ನಲ್ಲಿ ನಡೆದಿದೆ. ಮದುವೆಯಾಗಿ 45ದಿನಕ್ಕೆ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿದ್ದಳು. ಈ ಘಟನೆಯು ಇತ್ತೀಚೆಗೆ ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಹತ್ಯೆಯನ್ನು ನೆನಪಿಸುತ್ತದೆ. ಅಲ್ಲಿ ಕೂಡ ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹನ ಜತೆ ಸೇರಿ ಹನಿಮೂನ್​​ಗೆ ಹೋದಾಗ ಗಂಡನನ್ನು ಹತ್ಯೆ ಮಾಡಿಸಿದ್ದಳು.

ಔರಂಗಾಬಾದ್ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಮೃತ ಪ್ರಿಯಾಂಶು ಅಲಿಯಾಸ್ ಛೋಟು ಅವರ ಪತ್ನಿ ಗುಂಜಾ ಸಿಂಗ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೂನ್ 24ರ ರಾತ್ರಿ ನಬಿನಗರ ಪೊಲೀಸ್ ಠಾಣೆ ಪ್ರದೇಶದ ಲೆಂಬೋಕಾಪ್ ಬಳಿ ಘಟನೆ ನಡೆದಿತ್ತು. ಪ್ರಿಯಾಂಶುವನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಕುರಿತು ಎಸ್​ಪಿ ಅಂಬರೀಶ್ ರಾಹುಲ್ ಮಾಹಿತಿ ನೀಡಿದ್ದಾರೆ.

ಈ ಕೊಲೆಗೆ ಸೂತ್ರಧಾರಿ ಪ್ರಿಯಾಂಶು ಅವರ ಪತ್ನಿ ಗುಂಜಾ ಸಿಂಗ್. ಆಕೆಗೆ ತನ್ನ ತಂದೆಯ ಅಕ್ಕನ ಗಂಡ ಅಂದರೆ ಮಾವ ಜೀವನ್​ಸಿಂಗ್ ಜತೆ ಅಕ್ರಮ ಸಂಬಂಧವಿತ್ತು. ಮದುವೆಯ ನಂತರ ಪ್ರಿಯಾಂಶು ಅವರ ಸಂಬಂಧಕ್ಕೆ ಅಡ್ಡಿಯಾಗಿದ್ದ, ಹೀಗಾಗಿ ಇಬ್ಬರೂ ಶೂಟರ್​ಗಳನ್ನು ನೇಮಿಸಿಕೊಂಡು ಕೊಲ್ಲಲು ಸಂಚು ರೂಪಿಸಿದ್ದರು.

ಮತ್ತಷ್ಟು ಓದಿ: ಮೇಘಾಲಯದ ಹನಿಮೂನ್​ನಲ್ಲಿ ಕೊಲೆ; ನಾನೇ ಗಂಡ ರಾಜ ರಘುವಂಶಿಯನ್ನು ಕೊಂದಿದ್ದೆಂದು ಒಪ್ಪಿಕೊಂಡ ಸೋನಂ

ಜೂನ್ 24ರಂದು ಪ್ರಿಯಾಂಶು ರಾತ್ರಿ ಗ್ರಾಮವಾದ ಬರ್ವಾನ್​​ಗೆ ಬೈಕ್​ನಲ್ಲಿ ಹಿಂದಿರುಗುತ್ತಿದ್ದಾಗ, ಗುಂಡು ಹಾರಿಸಲಾಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದರು.ಎಸ್‌ಐಟಿ ಗುಂಜಾ ಸಿಂಗ್, ಜೈಶಂಕರ್ ಮತ್ತು ಮುಖೇಶ್ ಶರ್ಮಾ ಅವರನ್ನು ಬಂಧಿಸಿದೆ.

ವಿಚಾರಣೆ ಸಮಯದಲ್ಲಿ ತನ್ನ ಗಂಡನ ಕೊಲೆಯಲ್ಲಿ ತನ್ನ ಕೈವಾಡವಿದೆ ಎಂದು ಗುಂಜಾ ಒಪ್ಪಿಕೊಂಡಿದ್ದಾಳೆ.ಪೊಲೀಸರು ಜೀವನ್ ಸಿಂಗ್​​ನನ್ನು ಕೂಡ ಬಂಧಿಸಿದ್ದಾರೆ. ಇತ್ತೀಚೆಗೆ ನಡೆದ ಮತ್ತೊಂದು ಪ್ರಕರಣದಲ್ಲಿ, ಪೂಜಾ ಎಂಬ ಮಹಿಳೆ ತನ್ನ ಪ್ರಿಯಕರ ಕಮಲೇಶ್ ಯಾದವ್ ಜೊತೆ ಸೇರಿ ತನ್ನ ಪತಿ ಬಿಕ್ಕುವನ್ನು ಹತ್ಯೆ ಮಾಡಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:06 pm, Thu, 3 July 25

Follow Us
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?