ಬಿಹಾರದ ನೂತನ ಮಂತ್ರಿಗಳಿಗೆ ಖಾತೆ ಹಂಚಿಕೆ; ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ

ಬಿಹಾರದ ಮುಖ್ಯಮಂತ್ರಿಯಾಗಿ ನಿನ್ನೆ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಇಂದು ತಮ್ಮ ಸಚಿವ ಸಂಪುಟದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಹಿಂದಿನ ಎನ್‌ಡಿಎ ಸರ್ಕಾರಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಂದಿದ್ದ ಗೃಹ ಖಾತೆಯನ್ನು ಈ ಬಾರಿ ಬಿಹಾರದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಸಾಮ್ರಾಟ್ ಚೌಧರಿ ಅವರಿಗೆ ವಹಿಸಲಾಗಿದೆ. ನಿನ್ನೆ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾಗವಹಿಸಿದ್ದರು.

ಬಿಹಾರದ ನೂತನ ಮಂತ್ರಿಗಳಿಗೆ ಖಾತೆ ಹಂಚಿಕೆ; ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ
Nitish Kumar

Updated on: Nov 21, 2025 | 7:08 PM

ಪಾಟ್ನಾ, ನವೆಂಬರ್ 21: ನಿತೀಶ್ ಕುಮಾರ್ ನೇತೃತ್ವದಲ್ಲಿ ಗುರುವಾರ ಬಿಹಾರದಲ್ಲಿ ಹೊಸ ಸಚಿವ ಸಂಪುಟ (Bihar Cabinet) ರಚನೆಯಾಗಿದೆ. ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ (Nitish Kumar) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆಗಳನ್ನು ಘೋಷಿಸಲಾಯಿತು. ಬಿಜೆಪಿಯ ಸಾಮ್ರಾಟ್ ಚೌಧರಿಗೆ ಗೃಹ ಖಾತೆಯನ್ನು ನೀಡಲಾಗಿದೆ. ಹಿಂದಿನ ಎನ್‌ಡಿಎ ಸರ್ಕಾರಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಂದಿದ್ದ ಗೃಹ ಖಾತೆಯನ್ನು ಈ ಬಾರಿ ಬಿಹಾರದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಸಾಮ್ರಾಟ್ ಚೌಧರಿ ಅವರಿಗೆ ವಹಿಸಲಾಗಿದೆ. ಬಿಜೆಪಿಯ ಶಾಸಕಾಂಗ ಪಕ್ಷದ ಉಪ ನಾಯಕರಾಗಿ ಆಯ್ಕೆಯಾದ ಬಿಜೆಪಿ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರಿಗೆ ಕಂದಾಯ ಮತ್ತು ಭೂ ಸುಧಾರಣಾ ಖಾತೆಯನ್ನು ನೀಡಲಾಗಿದೆ.

ಬಿಜೆಪಿ ಶಾಸಕ ಮಂಗಲ್ ಪಾಂಡೆ ಹೊಸ ಸಂಪುಟದಲ್ಲಿ ಪ್ರಮುಖ ಆರೋಗ್ಯ ಖಾತೆಯನ್ನು ಉಳಿಸಿಕೊಂಡಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಅವರಿಗೆ ಕೈಗಾರಿಕಾ ಖಾತೆಯನ್ನು ನೀಡಲಾಗಿದೆ. ನಿತೀಶ್ ಕುಮಾರ್ ನೇತೃತ್ವದ ಹೊಸ ಬಿಹಾರ ಸಚಿವ ಸಂಪುಟದಲ್ಲಿ 18 ಖಾತೆಗಳ ಹಂಚಿಕೆಯನ್ನು ಎನ್‌ಡಿಎ ಬಹಿರಂಗಪಡಿಸಿದೆ. ಇದರಲ್ಲಿ ಬಿಜೆಪಿ, ಎಲ್‌ಜೆಪಿ(ಆರ್), ಎಚ್‌ಎಎಂ ಮತ್ತು ಆರ್‌ಎಲ್‌ಎಂ ಸಚಿವರು ಇದ್ದಾರೆ. ಗುರುವಾರ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ 26 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: ಹೊಸ ಸರ್ಕಾರ ತನ್ನ ಭರವಸೆ ಈಡೇರಿಸಲಿ; ಸಿಎಂ ನಿತೀಶ್ ಕುಮಾರ್​ಗೆ ತೇಜಸ್ವಿ ಯಾದವ್ ಅಭಿನಂದನೆ

ಇದರರ್ಥ ಜೆಡಿಯು ಸಚಿವರು ತಮ್ಮ ಖಾತೆ ನಿಯೋಜನೆಗಳಿಗಾಗಿ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಿದೆ. ಏಕೆಂದರೆ ಹಣಕಾಸು ಮತ್ತು ಸಾರಿಗೆ ಸೇರಿದಂತೆ ಪ್ರಮುಖ ಇಲಾಖೆಗಳನ್ನು ಇನ್ನೂ ಯಾರಿಗೂ ನೀಡಲಾಗಿಲ್ಲ.

ಬಿಹಾರ ಸಚಿವ ಸಂಪುಟ ಖಾತೆಗಳ ಪೂರ್ಣ ಪಟ್ಟಿ ಇಲ್ಲಿದೆ:

ಸಾಮ್ರಾಟ್ ಚೌಧರಿ (ಬಿಜೆಪಿ)– ಗೃಹ ಸಚಿವಾಲಯ

ವಿಜಯ್ ಕುಮಾರ್ ಸಿನ್ಹಾ (ಬಿಜೆಪಿ)– ಭೂಮಿ ಮತ್ತು ಕಂದಾಯ; ಗಣಿ ಮತ್ತು ಭೂವಿಜ್ಞಾನ

ಮಂಗಲ್ ಪಾಂಡೆ (ಬಿಜೆಪಿ)– ಆರೋಗ್ಯ; ಕಾನೂನು

ದಿಲೀಪ್ ಜೈಸ್ವಾಲ್ (ಬಿಜೆಪಿ)– ಕೈಗಾರಿಕೆ

ನಿತಿನ್ ನಬಿನ್ (ಬಿಜೆಪಿ)– ರಸ್ತೆ ನಿರ್ಮಾಣ; ನಗರಾಭಿವೃದ್ಧಿ ಮತ್ತು ವಸತಿ

ರಾಮ್‌ಕೃಪಾಲ್ ಯಾದವ್ (ಬಿಜೆಪಿ)– ಕೃಷಿ

ಸಂಜಯ್ ಟೈಗರ್ (ಬಿಜೆಪಿ)– ಕಾರ್ಮಿಕ ಸಂಪನ್ಮೂಲ

ಅರುಣ್ ಶಂಕರ್ ಪ್ರಸಾದ್ (ಬಿಜೆಪಿ)– ಪ್ರವಾಸೋದ್ಯಮ; ಕಲೆ, ಸಂಸ್ಕೃತಿ ಮತ್ತು ಯುವಜನ ವ್ಯವಹಾರಗಳು

ಸುರೇಂದ್ರ ಮೆಹ್ತಾ (ಬಿಜೆಪಿ)– ಪ್ರಾಣಿ ಮತ್ತು ಮೀನುಗಾರಿಕೆ ಸಂಪನ್ಮೂಲಗಳು

ನಾರಾಯಣ್ ಪ್ರಸಾದ್ (ಬಿಜೆಪಿ)– ವಿಪತ್ತು ನಿರ್ವಹಣೆ

ರಾಮ ನಿಶಾದ್ (ಬಿಜೆಪಿ)– ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಕಲ್ಯಾಣ

ಲಖೇದಾರ್ ಪಾಸ್ವಾನ್ (ಬಿಜೆಪಿ)– ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ

ಶ್ರೇಯಸಿ ಸಿಂಗ್ (ಬಿಜೆಪಿ)– ಮಾಹಿತಿ ತಂತ್ರಜ್ಞಾನ; ಕ್ರೀಡೆ

ಪ್ರಮೋದ್ ಚಂದ್ರವಂಶಿ (ಬಿಜೆಪಿ)– ಸಹಕಾರ; ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ

ಲ್‌ಜೆಪಿ-ಆರ್‌ವಿಯ ಇಬ್ಬರು ಸಚಿವರಿಗೆ ಕಬ್ಬು ಕೈಗಾರಿಕೆಗಳು ಮತ್ತು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಖಾತೆಗಳನ್ನು ಹಂಚಿಕೆ ಮಾಡಲಾಯಿತು. ಇನ್ನೂ 8 ಸಚಿವರಿಗೆ ಖಾತೆ ಹಂಚಿಕೆ ಇನ್ನೂ ಬಾಕಿ ಇದೆ, ಉಳಿದ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ