ಕೆಟ್ಟ ಹವಾಮಾನದಿಂದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಹೆಲಿಕಾಪ್ಟರ್ ಗಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಸಮೀಕ್ಷೆ ಮಾಡಲು ಸಿಎಂ ತೆರಳಿದ್ದರು.
Bihar CM Nitish Kumar's helicopter makes an emergency landing in Gaya due to bad weather conditions. CM went out to survey the drought situation in the state.
— ANI (@ANI) August 19, 2022
ಬಿಹಾರದಲ್ಲಿ ಮುಂಗಾರು ಮಳೆಯಾಗದೆ ಹಲವಾರು ಜಿಲ್ಲೆಗಳಲ್ಲಿ ಬರದ ಪರಿಸ್ಥಿತ ಇದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿದ್ದು ಪರಿಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಿತೀಶ್ ಹೇಳಿದ್ದಾರೆ.
ಪಾಟಲೀಪುತ್ರ ಕ್ಷೇತ್ರದ ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ಕೂಡಾ ಈ ಬರ ಪರಿಸ್ಥಿತಿ ಬಗ್ಗೆ ಈ ತಿಂಗಳಾರಂಭದಲ್ಲಿ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕೇಂದ್ರ ಸರ್ಕಾರ ಈ ಬಗ್ಗೆ ಶೀಘ್ರದಲ್ಲೇ ಕ್ರಮ ತೆಗದುಕೊಂಡು ರಾಜ್ಯವನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಯಾದವ್, ರಾಜ್ಯದ ಪರಿಸ್ಥಿತಿ ತುಂಬಾನೇ ಆತಂಕವನ್ನುಂಚಟು ಮಾಡಿದೆ. ರೈತರಿಗೆ ಪರಿಹಾರ ನೀಡಲು ಕೇಂದ್ರ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿನ ಬರ ಪರಿಸ್ಥಿತಿ ಪರಿಶೀಲಿಸಲು ಉನ್ನತ ಮಟ್ಟದ ತಂಡವನ್ನು ರಾಜ್ಯಕ್ಕೆ ಕಳುಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇತ್ತೀಚಿನ ಅಂಕಿ ಅಂಶಗಳನ್ನು ಉಲ್ಲೇಖಿಸಿದ ಅವರು ಜುಲೈ 31ರವರೆಗೆ ರಾಜ್ಯವು ಶೇ 41ಕ್ಕಿಂತ ಕಡುಮೆ ಮಳೆ ಪಡೆದಿದೆ. ಇದರಿಂದಾಗಿ ಶೇ90ರಷ್ಟು ರೈತರು ಬರದಿಂದ ಕಂಗೆಟ್ಟಿದ್ದಾರೆ ಎಂದು ಹೇಳಿದ್ದಾರೆ.
Published On - 3:24 pm, Fri, 19 August 22