
ಪಾಟ್ನಾ, ನವೆಂಬರ್ 14: ಬಿಹಾರ ಚುನಾವಣಾ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ದೊರೆತಿದ್ದು, ದಶಕಗಳ ಹಿಂಸಾಚಾರ, ಮತಗಟ್ಟೆ ವಶಪಡಿಸಿಕೊಳ್ಳುವಿಕೆ ಮತ್ತು ದೊಡ್ಡ ಪ್ರಮಾಣದ ಮರುಮತದಾನದಿಂದ ಶೂನ್ಯ ಹಿಂಸಾಚಾರ ಮತ್ತು ಶೂನ್ಯ ಮರುಮತದಾನಕ್ಕೆ ಅಭೂತಪೂರ್ವ ರೂಪಾಂತರಗೊಂಡಿದೆ. ಜಂಗಲ್ ರಾಜ್ ಎಂಬ ಕುಖ್ಯಾತ ಪದದೊಂದಿಗೆ ದೀರ್ಘಕಾಲ ಸಂಬಂಧ ಹೊಂದಿರುವ ರಾಜ್ಯಕ್ಕೆ, 2025ರ ಚುನಾವಣೆಗಳು ಆಡಳಿತ, ಪೊಲೀಸ್ ವ್ಯವಸ್ಥೆ ಮತ್ತು ಮತದಾರರ ವಿಶ್ವಾಸದಲ್ಲಿ ಬದಲಾವಣೆ ಆಗಿದೆ ಎಂಬುದು ಕಂಡುಬರುತ್ತಿದೆ.
ದಶಕಗಳಿಂದ ಬಿಹಾರದ ಚುನಾವಣೆಗಳು ರಕ್ತಪಾತ, ಜಾತಿ ಉದ್ವಿಗ್ನತೆಗೆ ಹೆಸರುವಾಸಿಯಾಗಿತ್ತು
1985 ಬಿಹಾರ ಚುನಾವಣೆ: 63 ಸಾವುಗಳು ಮತ್ತು 156 ಮತಗಟ್ಟೆಗಳಲ್ಲಿ ಮರು ಮತದಾನ ನಡೆದಿತ್ತು.
1990 ರ ಬಿಹಾರ ಚುನಾವಣೆಗಳು, ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರದಿಂದಾಗಿ 87 ಸಾವುಗಳು ಸಂಭವಿಸಿದ್ದವು.
1995 ರ ಬಿಹಾರ ಚುನಾವಣೆಗಳು, ಹಿಂಸಾಚಾರ ಮತ್ತು ದುಷ್ಕೃತ್ಯದ ನಡುವೆ ಟಿ.ಎನ್. ಶೇಷನ್ ನಾಲ್ಕು ಬಾರಿ ಚುನಾವಣೆಗಳನ್ನು ಮುಂದೂಡಿದ್ದರು.
2005 ರ ಬಿಹಾರ ಚುನಾವಣೆ: ಮತಗಟ್ಟೆಗಳನ್ನು ವಶಪಡಿಸಿಕೊಳ್ಳುವುದು ಮತ್ತು ಬೆದರಿಕೆ ಘಟನೆ ನಂತರ 660 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆದೇಶ ನೀಡಲಾಗಿತ್ತು.
ರೈತ ದಂಗೆಗಳಿಂದ ಜಾತಿ ಹಿಂಸಾಚಾರದವರೆಗೆ, ಬಿಹಾರದ ರಾಜಕೀಯ ಪ್ರಕ್ಷುಬ್ಧತೆಯ ದೀರ್ಘ ಇತಿಹಾಸ
ಬಿಹಾರದ ಹಿಂಸಾತ್ಮಕ ರಾಜಕೀಯ ಪರಂಪರೆ ಚುನಾವಣೆಗಳನ್ನು ಮೀರಿ ಮುಂದುವರೆದಿವೆ. 1930-40ರ ದಶಕದಲ್ಲಿ, ಈ ಪ್ರದೇಶವು ಸ್ವಾಮಿ ಸಹಜಾನಂದ ಸರಸ್ವತಿ ನೇತೃತ್ವದಲ್ಲಿ ದೊಡ್ಡ ಪ್ರಮಾಣದ ಕಿಸಾನ್ ಸಭಾ ಚಳವಳಿಗಳನ್ನು ಕಂಡಿತ್ತು, ಇದು ದಬ್ಬಾಳಿಕೆಯ ಜಮೀನ್ದಾರಿ ಪದ್ದತಿಯನ್ನು ಪ್ರಶ್ನಿಸಿತ್ತು.
ಮತ್ತಷ್ಟು ಓದಿ: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ, ಬಿಜೆಪಿ ಹಾಗರಲಿ, ಮಹಾಘಟಬಂಧನ್ಗಿಂತ ಜೆಡಿಯು ಮತಗಳೇ ಮುಂದು
1920 ರ ದಶಕದ ಜನೇಯು ಚಳವಳಿಯು ಮತ್ತೊಂದು ಪ್ರಮುಖ ಘಟನೆಯಾಗಿತ್ತು, ಅಲ್ಲಿ ಹಿಂದುಳಿದ ಜಾತಿಗಳಾದ ಯಾದವರು, ಕೊಯೇರಿಗಳು ಮತ್ತು ಕುರ್ಮಿಗಳು ಪವಿತ್ರ ದಾರವನ್ನು ಧರಿಸುವ ಮೂಲಕ ಸಮಾನತೆಯನ್ನು ಪ್ರತಿಪಾದಿಸಿದರು, ಇದು ಮೇಲ್ಜಾತಿಗಳಿಂದ ಹಿಂಸಾತ್ಮಕ ಪ್ರತಿಕ್ರಿಯೆಗೆ ಕಾರಣವಾಯಿತು.
ಸ್ವಾತಂತ್ರ್ಯಾನಂತರ ನಡೆದಿದ್ದಿದು
ನಕ್ಸಲ್ ಹಿಂಸಾಚಾರ
ಜಾತಿ ಹಿಂಸೆ
ಬಾಹುಬಲಿ ರಾಜಕೀಯ
ಬಿಹಾರ ಜಮೀನ್ದಾರಿ ರದ್ದತಿ ಕಾಯ್ದೆ (1950) ಮತ್ತು ಭೂದಾನ ಆಂದೋಲನದ ನಂತರವೂ, ಭೂ ಸಂಘರ್ಷ, ಜಾತಿ ದಬ್ಬಾಳಿಕೆ ಮತ್ತು ಅಸಮಾನತೆ ಮುಂದುವರೆದವು, ಅದು ಚುನಾವಣೆಗಳ ಮೇಲೂ ಪರಿಣಾಮ ಬೀರಿತು.
ಲಾಲು ಪ್ರಸಾದ್ ಯಾದವ್-ರಾಬ್ರಿ ದೇವಿ ಆಳ್ವಿಕೆಯಲ್ಲಿ (1990–2005) ಜನಪ್ರಿಯವಾಗಿದ್ದ “ಜಂಗಲ್ ರಾಜ್” ಎಂಬ ಪದ ಬಿಹಾರವು 2025 ರ ಚುನಾವಣಾ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾಗಲೂ ಸಾರ್ವಜನಿಕ ಚರ್ಚೆಯಲ್ಲಿ ಮತ್ತೆ ಹೊರಹೊಮ್ಮಿತು. ಐತಿಹಾಸಿಕವಾಗಿ ವಿಮರ್ಶಕರು ಆರ್‌ಜೆಡಿ ಸರ್ಕಾರಗಳ ಅಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ಕುಸಿತಗಳನ್ನು ವಿವರಿಸಲು ಈ ಪದವನ್ನು ಬಳಸಿದ್ದಾರೆ.
ಚಂಪಾ ಬಿಸ್ವಾಸ್ ಪ್ರಕರಣ (1990 )
ಅಪರಾಧ ಮತ್ತು ರಾಜಕೀಯದ ನಡುವಿನ ಸಂಬಂಧವನ್ನು ಬಹಿರಂಗಪಡಿಸುವ ಆಘಾತಕಾರಿ ನಿದರ್ಶನ. ಐಎಎಸ್ ಅಧಿಕಾರಿಯೊಬ್ಬರ ಪತ್ನಿ ಚಂಪಾ, ಆರ್‌ಜೆಡಿಯ ಮೃತ್ಯುಂಜಯ್ ಯಾದವ್ ಅವರ ಮೇಲೆ ಪದೇ ಪದೇ ಆರೋಪ ಹೊರಿಸಿದ್ದರು. ಆಕೆಯ ದೂರುಗಳ ಹೊರತಾಗಿಯೂ, ಸ್ಥಳೀಯ ಪೊಲೀಸರು ರಾಜ್ಯಪಾಲರಿಗೆ ಪತ್ರ ಬರೆಯುವವರೆಗೂ ಆಕೆಯ ಮನವಿಗಳನ್ನು ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ. 2002 ರಲ್ಲಿ ಪಾಟ್ನಾ ಹೈಕೋರ್ಟ್ 2010 ರಲ್ಲಿ ಶಿಕ್ಷೆಯನ್ನು ರದ್ದುಗೊಳಿಸಿತು.
ಶಿಲ್ಪಿ-ಗೌತಮ್ ಕೇಸ್ (1999)
ಆರಂಭದಲ್ಲಿ ಆತ್ಮಹತ್ಯೆ ಎಂದು ಕರೆಯಲಾಗಿದ್ದ ಶಿಲ್ಪಿ ಜೈನ್ ಮತ್ತು ಗೌತಮ್ ಸಿಂಗ್ ಅವರ ಅನುಮಾನಾಸ್ಪದ ಸಾವು ಆಡಳಿತ ನಾಯಕತ್ವಕ್ಕೆ ಹತ್ತಿರವಿರುವ ಶಾಸಕರೊಬ್ಬರಿಗೆ ಸಂಬಂಧಿಸಿದ್ದವು. ಕುಟುಂಬವು ಕೊಲೆ ಎಂದು ಆರೋಪಿಸಿ ಹೊಸ ತನಿಖೆಯನ್ನು ಕೋರಿದ್ದರೂ, ಸಿಬಿಐ ನಂತರ ಆತ್ಮಹತ್ಯೆ ಸಿದ್ಧಾಂತವನ್ನೇ ಪ್ರತಿಧ್ವನಿಸಿತು.
2025: ಬಿಹಾರ ಇತಿಹಾಸದಲ್ಲಿ ಅತ್ಯಂತ ಸ್ವಚ್ಛ ಚುನಾವಣೆಯನ್ನು ನಡೆಸಿತು
ಬಿಹಾರದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ವಚ್ಛ ಚುನಾವಣೆ ನಡೆದಿದೆ, ಶೂನ್ಯ ಮರುಮತದಾನ, ಶೂನ್ಯ ಹಿಂಸಾಚಾರ ಅಷ್ಟೇ ಅಲ್ಲದೆ 243 ಕ್ಷೇತ್ರಗಳಲ್ಲಿ ದೋಷರಹಿತ ಮತದಾನ.
ಚುನಾವಣಾ ಅಧಿಕಾರಿಗಳು ಹೇಳಿದ್ದೇನು?
ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸಲಾಗಿದೆ
ಕಣ್ಗಾವಲು ಮತ್ತು ಭದ್ರತೆ
ಕಟ್ಟುನಿಟ್ಟಾದ ಚುನಾವಣಾ ಆಯೋಗದ ಪ್ರೋಟೋಕಾಲ್‌ಗಳು
ಮತದಾರರ ಅರಿವು ಮತ್ತು ಪಾರದರ್ಶಕತೆ ಹೆಚ್ಚಳ
ಈ ರೂಪಾಂತರವು ಬಿಹಾರದ ರಾಜಕೀಯ ಸಂಸ್ಕೃತಿ ಹೇಗೆ ಬದಲಾಗಿದೆ ಎಂಬುದನ್ನು ಒತ್ತಿಹೇಳುತ್ತದೆ. ಹಿಂದಿನ ಚುನಾವಣೆಗಳಲ್ಲಿ ಸಾವಿರಾರು ಮರುಪೋಲಿಂಗ್‌ಗಳು ಮತ್ತು ಹಲವಾರು ಸಾವು ನೋವುಗಳು ಸಂಭವಿಸಿದ್ದವು, ಈಗ ಅದು ಶೂನ್ಯ-ಹಿಂಸೆ, ಶೂನ್ಯ-ಮರುಪೋಲಿಂಗ್ಗೆ ಬದಲಾಗಿದೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ 2025 ರ ಚುನಾವಣೆ ಐತಿಹಾಸಿಕವಾಗಿದೆ. ಈ ಬದಲಾವಣೆಯು ಶಾಶ್ವತವಾಗುತ್ತದೆಯೇ ಎಂಬುದು ಆಡಳಿತ ಯಾರು ನಡೆಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:35 am, Fri, 14 November 25