ಉದ್ಘಾಟನೆಗೂ ಮುನ್ನವೇ ಪಾಳುಬಿದ್ದ ಆಸ್ಪತ್ರೆ, ಈಗ ಕಳ್ಳರ ಅಡಗುತಾಣ

ಹತ್ತು ವರ್ಷಗಳ ಹಿಂದೆ ಬರೋಬ್ಬರಿ 5 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಲಾಗಿದ್ದ ಆಸ್ಪತ್ರೆ ಉದ್ಘಾಟನೆಗೂ ಮುನ್ನವೇ ಪಾಳುಬಿದ್ದಿದೆ. ಬಿಹಾರದ ಮುಜಾಫರ್​ಪುರ್ ಜಿಲ್ಲೆಯಲ್ಲಿರುವ ಈ ಆಸ್ಪತ್ರೆ ಈಗ ಕಳ್ಳರ ಅಡಗುತಾಣವಾಗಿ ಮಾರ್ಪಟ್ಟಿದೆ. ಇಲ್ಲಿಯವರೆಗೆ ಒಂದೇ ಒಂದು ರೋಗಿ ಕೂಡ ಈ ಆಸ್ಪತ್ರೆಯ ಮೆಟ್ಟಿಲು ಹತ್ತಿಲ್ಲ. ಆರು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ 30 ಹಾಸಿಗೆಗಳಿರುವ ಈ ಆಸ್ಪತ್ರೆ ನೋಡಿದರೆ ಯಾವ ಕಡೆಯಿಂದಲೂ ಅದು ಹೊಸ ಆಸ್ಪತ್ರೆಯ ರೀತಿ ಕಾಣುವುದೇ ಇಲ್ಲ, ಭೂತ ಬಂಗಲೆಯಂತೆ ಭಾಸವಾಗುತ್ತೆ.

ಉದ್ಘಾಟನೆಗೂ ಮುನ್ನವೇ ಪಾಳುಬಿದ್ದ ಆಸ್ಪತ್ರೆ, ಈಗ ಕಳ್ಳರ ಅಡಗುತಾಣ
ಆಸ್ಪತ್ರೆ

Updated on: Sep 06, 2024 | 2:47 PM

ಹತ್ತು ವರ್ಷಗಳ ಹಿಂದೆ ಬರೋಬ್ಬರಿ 5 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಲಾಗಿದ್ದ ಆಸ್ಪತ್ರೆ ಉದ್ಘಾಟನೆಗೂ ಮುನ್ನವೇ ಪಾಳುಬಿದ್ದಿದೆ. ಬಿಹಾರದ ಮುಜಾಫರ್​ಪುರ್ ಜಿಲ್ಲೆಯಲ್ಲಿರುವ ಈ ಆಸ್ಪತ್ರೆ ಈಗ ಕಳ್ಳರ ಅಡಗುತಾಣವಾಗಿ ಮಾರ್ಪಟ್ಟಿದೆ. ಇಲ್ಲಿಯವರೆಗೆ ಒಂದೇ ಒಂದು ರೋಗಿ ಕೂಡ ಈ ಆಸ್ಪತ್ರೆಯ ಮೆಟ್ಟಿಲು ಹತ್ತಿಲ್ಲ. ಆರು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ 30 ಹಾಸಿಗೆಗಳಿರುವ ಈ ಆಸ್ಪತ್ರೆ ನೋಡಿದರೆ ಯಾವ ಕಡೆಯಿಂದಲೂ ಅದು ಹೊಸ ಆಸ್ಪತ್ರೆಯ ರೀತಿ ಕಾಣುವುದೇ ಇಲ್ಲ, ಭೂತ ಬಂಗಲೆಯಂತೆ ಭಾಸವಾಗುತ್ತೆ.

ರಾಜ್ಯ ಸರಕಾರ ಹಾಗೂ ಆರೋಗ್ಯ ಇಲಾಖೆ ಯು 10 ವರ್ಷಗಳ ಹಿಂದೆ ಈ ಆಸ್ಪತ್ರೆಯನ್ನು ನಿರ್ಮಿಸಿತ್ತು. ಈ ಬಗ್ಗೆ ಬಿಹಾರ ಸರ್ಕಾರಕ್ಕೆ ಮಾಹಿತಿ ಇಲ್ಲ, ಐದು ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿರುವ ಆಸ್ಪತ್ರೆ ಈಗ ಶಿಥಿಲಾವಸ್ಥೆಯಲ್ಲಿದೆ ಎಂದು ಹೇಳುತ್ತಿದ್ದಾರೆ.

ಈ ಕುರಿತು ಇಂಡಿಯಾ ಟುಡೇ ವರದಿ ಮಾಡಿದೆ. ಆರೋಗ್ಯ ಇಲಾಖೆಯಾಗಲಿ ಸರ್ಕಾರವಾಗಲೀ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಆಸ್ಪತ್ರೆ ಬಗ್ಗೆ ನಮ್ಮ ಬಳಿ ಮಾಹಿತಿಯೇ ಇಲ್ಲ ಎನ್ನುತ್ತಿದ್ದಾರೆ.

ಮತ್ತಷ್ಟು ಓದಿ: ಅನಾರೋಗ್ಯ ಪೀಡಿತ ಪತಿಯೊಂದಿಗೆ ಆಸ್ಪತ್ರೆಯಿಂದ ಬರುವಾಗ ಆಂಬ್ಯುಲೆನ್ಸ್​ನಲ್ಲಿ ಮಹಿಳೆಗೆ ಕಿರುಕುಳ

ವೈದ್ಯರ ವಸತಿ, ನರ್ಸಿಂಗ್ ಸಿಬ್ಬಂದಿ ವಸತಿ ಮತ್ತು ಲ್ಯಾಬ್‌ಗಳಂತಹ ಅಗತ್ಯ ಸೌಲಭ್ಯಗಳನ್ನು ಹೊಂದಿದ್ದು, ಅದು ಈಗ ಪಾಳುಬಿದ್ದಿದೆ. ಆಸ್ಪತ್ರೆಯ ಕಿಟಕಿಗಳು, ಬಾಗಿಲು ಚೌಕಟ್ಟುಗಳು, ಬಾಗಿಲುಗಳು, ಗ್ರಿಲ್‌ಗಳು, ಗೇಟ್‌ಗಳು, ಬೀರುಗಳು ಮತ್ತು ವಿದ್ಯುತ್ ವೈರಿಂಗ್ ಮತ್ತು ಇತರ ಉಪಕರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಯಾರ ಆದೇಶದಲ್ಲಿ ಈ ಆಸ್ಪತ್ರೆ ನಿರ್ಮಿಸಲಾಗಿದೆ, ಯಾರು ನಿರ್ಮಿಸಿದ್ದಾರೆ ಎಂಬುದಕ್ಕೆ ಆರೋಗ್ಯ ಇಲಾಖೆಯ ಬಳಿ ಉತ್ತರವಿಲ್ಲ. ಆಸ್ಪತ್ರೆ ನಿರ್ಮಾಣ ಮತ್ತು ವಸ್ತುವಿನ ಬಗ್ಗೆ ರಾಜ್ಯ ಕೇಂದ್ರ ಕಚೇರಿಗೆ ಮಾಹಿತಿ ನೀಡದ ಕಾರಣ, ಅದರ ನಿರ್ಮಾಣದ ನಂತರ ಆರೋಗ್ಯ ಇಲಾಖೆ ಆಸ್ಪತ್ರೆಯನ್ನು ಸ್ವಾಧೀನಪಡಿಸಿಕೊಂಡಿಲ್ಲ.

ಸಾರಯ್ಯ ಪಂಚಾಯಿತಿಯ ಅಧ್ಯಕ್ಷ ಅಮೋದ್ ಶರ್ಮಾ ಮಾತನಾಡಿ, ಈ ಗ್ರಾಮದಲ್ಲಿ ಇಷ್ಟು ದೊಡ್ಡ ಆಸ್ಪತ್ರೆ ನಿರ್ಮಾಣವಾಗಿರುವುದಕ್ಕೆ ಗ್ರಾಮಸ್ಥರೆಲ್ಲ ಸಂತಸ ವ್ಯಕ್ತಪಡಿಸಿದ್ದರು. ಯಾವೊಬ್ಬ ಆರೋಗ್ಯ ಕಾರ್ಯಕರ್ತರಾಗಲಿ, ಜಿಲ್ಲಾಡಳಿತವಾಗಲಿ ಆಸ್ಪತ್ರೆಯ ಸ್ಥಿತಿ ನೋಡಲು ಬಂದಿಲ್ಲ. ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ, ಆದರೆ ಸ್ಥಳೀಯ ಸಂಸದರು ಮತ್ತು ಶಾಸಕರು ಈ ವಿಷಯದಲ್ಲಿ ಆಸಕ್ತಿ ಹೊಂದಿಲ್ಲ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us