ಅನಾರೋಗ್ಯ ಪೀಡಿತ ಪತಿಯೊಂದಿಗೆ ಆಸ್ಪತ್ರೆಯಿಂದ ಬರುವಾಗ ಆಂಬ್ಯುಲೆನ್ಸ್ನಲ್ಲಿ ಮಹಿಳೆಗೆ ಕಿರುಕುಳ
ಮಾರಣಾಂತಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪತಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುವಾಗ ಆಂಬ್ಯುಲೆನ್ಸ್ ಚಾಲಕ ಕಿರುಕುಳ ಕೊಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಲಕ್ನೋದ ಗಾಜಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಾರಣಾಂತಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪತಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುವಾಗ ಆಂಬ್ಯುಲೆನ್ಸ್ ಚಾಲಕ ಕಿರುಕುಳ ಕೊಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಲಕ್ನೋದ ಗಾಜಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಆರೋಪಿಯು ಆಕೆಯ ಪತಿಯ ಆಕ್ಸಿಜನ್ ಸಂಪರ್ಕವನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಆಕೆಗೆ ಕಿರುಕುಳ ನೀಡಿ ಆಕೆಯ ಬಳಿ ಇದ್ದ ಹಣವನ್ನು ದೋಚಿದ್ದಾನೆ.
ಆಕೆಯ ಪತಿ ಲಕ್ನೋದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದರು, ಅದಕ್ಕಾಗಿ ಖಾಗಿ ಆಂಬ್ಯುಲೆನ್ಸ್ನ್ನು ಬುಕ್ ಮಾಡಿದ್ದರು. ಇಲ್ಲಿ ಆಸ್ಪತ್ರೆಯಲ್ಲಿ ಕೇವಲ 2 ದಿನಗಳ ಚಿಕಿತ್ಸೆಗೆ 1 ಲಕ್ಷಕ್ಕೂ ಹೆಚ್ಚು ಶುಲ್ಕ ಕಟ್ಟಿಸಿಕೊಳ್ಳಲಾಗಿತ್ತು, ಹಣ ಖಾಲಿಯಾಗಿತ್ತು, ಆಕೆ ಗಂಡನನ್ನು ಡಿಸ್ಚಾರ್ಜ್ ಮಾಡುವಂತೆ ವೈದ್ಯರಲ್ಲಿ ಕೇಳಿಕೊಂಡಿದ್ದಳು. ಇದೇ ವೇಳೆ ಅವರು ಆಸ್ಪತ್ರೆಯ ಕೌಂಟರ್‌ನಿಂದ ಖಾಸಗಿ ಆಂಬ್ಯುಲೆನ್ಸ್ ಸಿಬ್ಬಂದಿಯ ಸಂಖ್ಯೆಯನ್ನು ಪಡೆಯುತ್ತಾರೆ, ಬಳಿಕ ಬುಕ್ ಮಾಡಿದ್ದರು.
ಮತ್ತಷ್ಟು ಓದಿ: Shocking News: ಅಮ್ಮನ ಪಕ್ಕ ಮಲಗಿದ್ದ ಮಗುವಿಗೆ ಕಚ್ಚಿದ ಹಾವು; ಮೂಢನಂಬಿಕೆಯಿಂದ ಶಿಶುವಿನ ಸಾವು
ಆಂಬ್ಯುಲೆನ್ಸ್ ಆಸ್ಪತ್ರೆಯಿಂದ 150 ಕಿ.ಮೀ ದೂರು ಹೋಗಿ ಅಲ್ಲಿ ನಿಂತಿತ್ತು, ಬಳಿಕ ಚಾಲಕ ಆಕೆಗೆ ಕಿರುಕುಳ ನೀಡಲು ಶುರು ಮಾಡಿದ್ದ. ತಕ್ಷಣ ಹೇಗೋ ತಪ್ಪಿಸಿಕೊಂಡು ಆಕೆ ಪೊಲೀಸರಿಗೆ ಕರೆ ಮಾಡಿದ್ದಳು, ಸ್ಥಳೀಯ ಪೊಲೀಸರು ಕೂಡಲೇ ಬೇರೆ ಆಂಬ್ಯುಲೆನ್ಸ್ ಕಳುಹಿಸಿಕೊಟ್ಟರು, ಅಷ್ಟರಲ್ಲಾಗಲೇ ಆಕೆಯ ಪತಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಆಕೆ ಗಾಜಿಪುರ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ