
ಪಾಟ್ನಾ, ಮಾರ್ಚ್ 03: ಸ್ವಂತ ಮನೆ ಕಟ್ಟಲು ಮಹಿಳೆಯು ತನ್ನ ಪ್ರಿಯಕರನ ಜತೆ ಸೇರಿ ಮಗನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಛಾಪ್ರಾದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳಬೇಕೆಂದು ಮಹಿಳೆ ಪ್ರಿಯಕರನ ಜತೆ ಸೇರಿ ಈ ಕೃತ್ಯವೆಸಗಿದ್ದಾಳೆ. ಮಗನನ್ನು ಅಪಹರಿಸಿ ಮನೆಗೆ ಕರೆ ಮಾಡಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಳು.
ತನ್ನ ಮಗನ ಅಪಹರಣದಲ್ಲಿ ತಾನು ಭಾಗಿಯಾಗಿರುವುದಾಗಿ ಬಬಿತಾ ದೇವಿ ಒಪ್ಪಿಕೊಂಡ ನಂತರ ಮಹಿಳೆ ಬಬಿತಾ ದೇವಿ ಮತ್ತು ಆಕೆಯ ಪ್ರಿಯಕರ ನಿತೀಶ್ ಕುಮಾರ್ ಅವರನ್ನು ಬಂಧಿಸಲಾಗಿದೆ.
13 ವರ್ಷದ ಬಾಲಕನ ಚಿಕ್ಕಪ್ಪ ಆದಿತ್ಯ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪ್ರಕರಣ ದಾಖಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಸರನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕುಮಾರ್ ಆಶಿಶ್ ಹೇಳಿದ್ದಾರೆ. ತನ್ನ ಕುಟುಂಬವು 25 ಲಕ್ಷ ರೂ. ಹಣವನ್ನು ಪಾವತಿಸದಿದ್ದರೆ, ಅಪಹರಣಕಾರರು ಬಾಲಕನನ್ನು ಕೊಲ್ಲುವುದಾಗಿ ಆ ವ್ಯಕ್ತಿ ಹೇಳಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಕಲಬುರಗಿ ನವಜಾತ ಶಿಶು ಅಪಹರಣ ಪ್ರಕರಣ: 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು
ಪೊಲೀಸರು ಈ ಬಗ್ಗೆ ತನಿಖೆ ನಡೆಸಿ, ಆದಿತ್ಯ ಕುಮಾರ್ ಅವರ ತಾಯಿ ಬಬಿತಾ ದೇವಿ ಎಲ್ಲಿದ್ದಾರೆ ಎಂಬ ಅನುಮಾನ ಮೂಡಿತು. ಬಬಿತಾ ಅವರನ್ನು ಪೊಲೀಸರು ಹಿಡಿದು ವಿಚಾರಣೆಗಾಗಿ ಠಾಣೆಗೆ ಕರೆತಂದಾಗ, ಅಪಹರಣದಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡರು.
ತನ್ನ ಪ್ರಿಯಕರ ನಿತೀಶ್ ಕುಮಾರ್ ಇರುವಿಕೆಯ ಬಗ್ಗೆ ಬಬಿತಾ ಸುಳ್ಳು ಹೇಳಿದ್ದು, ಪ್ರತ್ಯೇಕ ಮನೆ ಕಟ್ಟಲು ಹಣ ಪಡೆಯಲು ತನ್ನ ಮಗನನ್ನು ಅಪಹರಿಸಲು ಸಂಚು ರೂಪಿಸಿದ್ದಾಗಿ ಹೇಳಿದ್ದಾಳೆ ಎಂದು ಎಸ್‌ಎಸ್‌ಪಿ ಆಶಿಶ್ ತಿಳಿಸಿದ್ದಾರೆ.
ಬಬಿತಾ ತಪ್ಪೊಪ್ಪಿಗೆ ಹೇಳಿಕೆ ನೀಡಿದ ನಂತರ, ಪೊಲೀಸ್ ತಂಡವು ನಿತೀಶ್ ಕುಮಾರ್ ಅವರ ಮನೆಗೆ ಹೋಗಿ ಅವರನ್ನು ಬಂಧಿಸಿತು. ಪೊಲೀಸರು ಪಾಟ್ನಾದಲ್ಲಿ ಆದಿತ್ಯ ಕುಮಾನನ್ನು ಪತ್ತೆ ಮಾಡಿ ಮನೆಗೆ ಒಪ್ಪಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ