
ಪಾಟ್ನಾ, ಜುಲೈ 26: ಬಿಹಾರದ (Bihar) ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು (Shocking News) ಬೆಳಕಿಗೆ ಬಂದಿದೆ. ಶುಕ್ರವಾರ ಒಂದು ವರ್ಷದ ಗಂಡು ಮಗು ಮನೆಯ ಹೊರಗೆ ಆಟವಾಡುತ್ತಿದ್ದಾಗ ಅಲ್ಲಿಗೆ ನಾಗರಹಾವು (Cobra) ಬಂದಿತು. ಆ ನಾಗರಹಾವನ್ನು ಹಿಡಿದ ಮಗು ಅದಕ್ಕೆ ಕಚ್ಚಿದೆ. ಆಟದ ವಸ್ತುವೆಂದುಕೊಂಡ ಮಗು ಹಾವಿಗೆ ಸಾಕಷ್ಟು ಬಾರಿ ಕಚ್ಚಿದೆ. ಇದರ ಪರಿಣಾಮವಾಗಿ ಗಾಯಗಳಾಗಿ ನಾಗರಹಾವು ಸಾವನ್ನಪ್ಪಿದ! ಆದರೆ, ಮಗು ಏನೂ ತೊಂದರೆಯಿಲ್ಲದೆ ಬದುಕುಳಿದಿದೆ.
ಮಜೌಲಿಯಾ ಬ್ಲಾಕ್‌ನಲ್ಲಿರುವ ಮೊಹ್ಚಿ ಬಂಕತ್ವಾ ಗ್ರಾಮದಲ್ಲಿ ಒಂದು ವರ್ಷದ ಗೋವಿಂದ ಮಧ್ಯಾಹ್ನ ಮನೆಯಲ್ಲಿ ಆಟವಾಡುತ್ತಿದ್ದ. ಈ ಸಮಯದಲ್ಲಿ, ಗೋವಿಂದನಿಗೆ ನಾಗರಹಾವು ಕಂಡಿತು. ಅದು ಆಟದ ವಸ್ತು ಎಂದುಕೊಂಡ ಆತ ಕೈಯಲ್ಲಿದ್ದ ಆಟದ ಸಾಮಾನಿನಿಂದ ಆ ಹಾವಿಗೆ ಮೊದಲು ಹೊಡೆದಿದ್ದಾನೆ. ನಂತರ ಅದನ್ನು ಎತ್ತಿಕೊಂಡು ಕಚ್ಚಿದ್ದಾನೆ. ಆ ಹಾವು ತಕ್ಷಣವೇ ಸತ್ತುಹೋಯಿತು. ವಿಷಕಾರಿ ಹಾವನ್ನು ಕಚ್ಚಿದರೂ ಮಗುವಿಗೆ ಯಾವುದೇ ಅಪಾಯವಾಗಿಲ್ಲ.
ಇದನ್ನೂ ಓದಿ: ಗೃಹರಕ್ಷಕ ನೇಮಕಾತಿ ವೇಳೆ ಪ್ರಜ್ಞೆ ತಪ್ಪಿದ ಬಿಹಾರದ ಮಹಿಳೆ ಮೇಲೆ ಆ್ಯಂಬುಲೆನ್ಸ್‌ನಲ್ಲಿ ಸಾಮೂಹಿಕ ಅತ್ಯಾಚಾರ!
ಆದರೆ, ಸ್ವಲ್ಪ ಪ್ರಮಾಣದ ವಿಷ ದೇಹ ಸೇರಿದ್ದರಿಂದ ಅದೆಲ್ಲ ಆಗಿ ಸ್ವಲ್ಪ ಸಮಯದ ನಂತರ ಮಗು ಪ್ರಜ್ಞೆ ತಪ್ಪಿತು. ದಿಗ್ಭ್ರಮೆಗೊಂಡು ಭಯಭೀತರಾದ ಅವರ ಕುಟುಂಬಸ್ಥರು ಆ ಮಗುವನ್ನು ಆಸ್ಪತ್ರೆಗೆ ಸಾಗಿಸಿದರು. ಗೋವಿಂದ ಈಗ ಅಪಾಯದಿಂದ ಪಾರಾಗಿದ್ದು, ಇನ್ನೂ ನಿಗಾ ಘಟಕದಲ್ಲಿದ್ದಾರೆ.
ಕಳೆದ ವರ್ಷ ಬಿಹಾರದ ಗಯಾದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ಅಲ್ಲಿ ಒಂದು ಸಣ್ಣ ಮಗು ಹಾವನ್ನು ಕಚ್ಚಿ ಕೊಂದಿತ್ತು. ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಹಾವನ್ನು ಕಚ್ಚಿದ್ದರೂ ಸಹ ಮಗು ಸಂಪೂರ್ಣವಾಗಿ ಆರೋಗ್ಯವಾಗಿರುವುದಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ