Video: ಬೋಳು ತಲೆಗೆ ಕೂದಲು ಅಂಟಿಸಿಕೊಂಡು ಯಾಮಾರಿಸಿ ಮದುವೆಯಾಗಲು ಯತ್ನ, ವರನಿಗೆ ಥಳಿತ

ತಮ್ಮ ಮಗಳಿಗೆ ಸುಂದರವಾದ ವರನನ್ನು ಹುಡುಕಿದ್ದೇನೆ ಎನ್ನುವ ಭ್ರಮೆಯಲ್ಲಿ ಕುಟುಂಬಸ್ಥರಿದ್ದರು. ಆದರೆ ತಲೆಯಲ್ಲಿ ಒಂದೂ ಕೂದಲಿಲ್ಲದಿದ್ದರೂ ಕೂದಲನ್ನು ಅಂಟಿಸಿಕೊಂಡು ಯಾಮಾರಿಸಿದ್ದ ವರ.

Video: ಬೋಳು ತಲೆಗೆ ಕೂದಲು ಅಂಟಿಸಿಕೊಂಡು ಯಾಮಾರಿಸಿ ಮದುವೆಯಾಗಲು ಯತ್ನ, ವರನಿಗೆ ಥಳಿತ
ವರ

Updated on: Jul 14, 2023 | 8:48 AM

ತಮ್ಮ ಮಗಳಿಗೆ ಸುಂದರವಾದ ವರನನ್ನು ಹುಡುಕಿದ್ದೇನೆ ಎನ್ನುವ ಭ್ರಮೆಯಲ್ಲಿ ಕುಟುಂಬಸ್ಥರಿದ್ದರು. ಆದರೆ ತಲೆಯಲ್ಲಿ ಒಂದೂ ಕೂದಲಿಲ್ಲದಿದ್ದರೂ ಕೂದಲನ್ನು ಅಂಟಿಸಿಕೊಂಡು ಯಾಮಾರಿಸಿದ್ದ ವರ. ಈ ವಿಷಯ ತಿಳಿದ ಹುಡುಗಿಯ ಮನೆಯವರು ಆತನನ್ನು ಥಳಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ವರ ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದು. ಆದರೂ ಕರುಣೆ ತೋರದೆ ಥಳಿಸುತ್ತಲೇ ಇದ್ದರು.
ವರದಿ ಪ್ರಕಾರ, ಬಿಹಾರದ ಗಯಾದ ಇಕ್ಬಾಲ್​ಪುರ ಪ್ರದೇಶದ ನಿವಾಸಿಯಾಗಿರುವ ವ್ಯಕ್ತಿ ದೋಭಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜೌರಾ ಗ್ರಾಮದ ಹುಡುಗಿಯನ್ನು ಮದುವೆಯಾಗಬೇಕಿತ್ತು.

ವರದಿಗಳ ಪ್ರಕಾರ, ಇದು ಆತನ ಎರಡನೇ ಮದುವೆಯಾಗಿತ್ತು. ವಧುಗಾಗಲಿ ಆಕೆಯ ಮನೆಯವರಿಗಾಗಲಿ ಆತನ ತಲೆಯಲ್ಲಿ ಕೂದಲಿಲ್ಲ ಎನ್ನುವ ಸತ್ಯ ಗೊತ್ತಿರಲಿಲ್ಲ. ಮದುವೆ ಮನೆಯಲ್ಲಿ ಸೆಹ್ರಾ ಅಡಿಯಲ್ಲಿ ವಿಗ್ ಬಳಸಿ ತಮ್ಮ ಬೋಳು ತಲೆಯನ್ನು ಮರೆಮಾಚಲು ಯತ್ನಿಸಿದ್ದ.

ಮದುಮಗನ ದಿಬ್ಬಣ ಬಂದಿತ್ತು, ಬಳಿಕ ವಿಷಯ ತಿಳಿದು ವಧುವಿನ ಕುಟುಂಬದವರು ಬೇಸರಗೊಂಡರು. ಬಳಿಕ ಆತ ಮೊದಲ ಪತ್ನಿ ಬದುಕಿದ್ದರೂ ಎರಡನೇ ಮದುವೆಯಾಗಲು ಹೊರಟಿದ್ದಾನೆ ಎನ್ನುವ ಸತ್ಯ ತಿಳಿಯುತ್ತಿದ್ದಂತೆ ಕೋಪಗೊಂಡ ಕುಟುಂಬಸ್ಥರು ಆತನನ್ನು ಥಳಿಸಿದ್ದಾರೆ.

ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ ಜನರು ಮದುವೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಮಹತ್ವವನ್ನು ಚರ್ಚಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us