Army Chopper Crash: ಮರಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿ ಉರಿಯುತ್ತಿದ್ದ ಹೆಲಿಕಾಪ್ಟರ್​ನಿಂದ ಸಿಬ್ಬಂದಿ ನೆಲಕ್ಕೆ ಬೀಳುತ್ತಿದ್ದರು; ಭಯಾನಕ ಸನ್ನಿವೇಶ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

ಹೆಲಿಕಾಪ್ಟರ್​ ಸುಲೂರ್​​ನಿಂದ ವೆಲ್ಲಿಂಗ್ಟನ್​ಗೆ ಹೋಗುತ್ತಿತ್ತು. ಅದರಲ್ಲಿ 14 ಮಂದಿ ಇದ್ದರು ಎನ್ನಲಾಗಿದೆ. ತಮಿಳುನಾಡಿನ ಅರಣ್ಯ ಸಚಿವರು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಒಟ್ಟು 5 ಮಂದಿಯ ಮೃತದೇಹ ಸಿಕ್ಕಿದೆ ಎಂದಿದ್ದಾರೆ.

Army Chopper Crash: ಮರಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿ ಉರಿಯುತ್ತಿದ್ದ ಹೆಲಿಕಾಪ್ಟರ್​ನಿಂದ ಸಿಬ್ಬಂದಿ ನೆಲಕ್ಕೆ ಬೀಳುತ್ತಿದ್ದರು; ಭಯಾನಕ ಸನ್ನಿವೇಶ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ
ಹೊತ್ತಿ ಉರಿದ ಹೆಲಿಕಾಪ್ಟರ್​ (ಪಿಟಿಐ ಚಿತ್ರ)
Edited By:

Updated on: Dec 08, 2021 | 5:08 PM

ಇಂದು ಸಿಡಿಎಸ್​ ಬಿಪಿನ್​ ರಾವತ್ (Bipin Rawat)​ ಅವರಿದ್ದ ಸೇನಾ ಹೆಲಿಕಾಪ್ಟರ್​ ತಮಿಳುನಾಡಿನ ಕುನೂರು ಬಳಿ ಪತನವಾಗಿದ್ದು, ಐವರು ಮೃತಪಟ್ಟಿದ್ದಾರೆ. ಬಿಪಿನ್ ರಾವತ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಅಲ್ಲಿ ಹೆಲಿಕಾಪ್ಟರ್​ ಬೆಂಕಿಯಲ್ಲಿ ಹೊತ್ತಿ ಉರಿದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋಗಳು ಸೋಷಿಯಲ್​ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಹೀಗಿರುವಾಗ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಸ್ಥಳೀಯರು ಇಂಡಿಯಾ ಟುಡೆಯೊಂದಿಗೆ ಮಾತನಾಡಿ, ಅಲ್ಲಿನ ಸನ್ನಿವೇಶವನ್ನು, ತಾವು ಕೇಳಿದ ಭಯಾನಕ ಶಬ್ದದ ಬಗ್ಗೆ ಹೇಳಿಕೊಂಡಿದ್ದಾರೆ.  

ಮಧ್ಯಾಹ್ನ 12.20ರ ಹೊತ್ತಿಗೆ ದುರ್ಘಟನೆ ನಡೆದಿದೆ. ಅಷ್ಟೊತ್ತು ಎಲ್ಲವೂ ಸಹಜವಾಗಿಯೇ ಇತ್ತು. ಒಂದು ಭಯಾನಕ ಶಬ್ದ ಕೇಳಿತು. ಅದು ತುಂಬ ಹತ್ತಿರದಲ್ಲೇ ಕೇಳಿಸಿತು. ಹೀಗಾಗಿ ಕುತೂಹಲ ಮತ್ತು ಭಯದಿಂದ ಹೊರಬಂದು ನೋಡಿದೆ. ಆಗ ಹೆಲಿಕಾಪ್ಟರ್​ವೊಂದು ಮರಕ್ಕೆ ಅಪ್ಪಳಿಸಿತ್ತು. ಅಲ್ಲಿಂದ ಬೆಂಕಿಯ ಉಂಡ ಏಳುತ್ತಿತ್ತು..ನೋಡನೋಡುತ್ತಿದ್ದಂತೆ ಮತ್ತೆ ಆ ಹೆಲಿಕಾಪ್ಟರ್ ಮರಕ್ಕೆ ಅಪ್ಪಳಿಸಿತು. ನನಗೆ ಅಕ್ಷರಶಃ ದಿಗಿಲಾಯಿತು. ಅಷ್ಟರಲ್ಲಿ ಮೂವರು ಹೆಲಿಕಾಪ್ಟರ್​ನಿಂದ ಕೆಳಗೆ ಬಿದ್ದರು. ಅವರು ಪೂರ್ತಿಯಾಗಿ ಬೆಂಕಿಯಿಂದ ಸುಟ್ಟುಹೋಗುತ್ತಿದ್ದರು..ಹಾಗೇ ಹೆಲಿಕಾಪ್ಟರ್​ನಿಂದ ಬೀಳುತ್ತಿದ್ದರು. ಅದನ್ನು ನೋಡಿ ನಾನು ಸುತ್ತಲಿನ ಜನರನ್ನು ಕೂಗಿ ಕರೆದೆ. ಬಳಿಕ ಅಗ್ನಿಶಾಮಕ ದಳ, ತುರ್ತು ಸೇವಾ ಘಟಕಗಳಿಗೆ ಕರೆ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿ ಕೃಷ್ಣಸ್ವಾಮಿ ವಿವರಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಹೆಲಿಕಾಪ್ಟರ್​ ಸುಲೂರ್​​ನಿಂದ ವೆಲ್ಲಿಂಗ್ಟನ್​ಗೆ ಹೋಗುತ್ತಿತ್ತು. ಅದರಲ್ಲಿ 14 ಮಂದಿ ಇದ್ದರು ಎನ್ನಲಾಗಿದೆ. ತಮಿಳುನಾಡಿನ ಅರಣ್ಯ ಸಚಿವರು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಒಟ್ಟು 5 ಮಂದಿಯ ಮೃತದೇಹ ಸಿಕ್ಕಿದೆ ಎಂದಿದ್ದಾರೆ. ಘಟನಾ ಸ್ಥಳದ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.  ಬಿಪಿನ್ ರಾವತ್ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದ್ದು, ಅವರ ಪತ್ನಿ ಈಗಾಗಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: CDS Bipin Rawat: ಸಿಡಿಎಸ್ ಬಿಪಿನ್ ರಾವತ್ ಸುರಕ್ಷೆಗಾಗಿ ಗಣ್ಯರ ಪ್ರಾರ್ಥನೆ: ಹೆಲಿಕಾಪ್ಟರ್ ತಯಾರಕರನ್ನೂ ತನಿಖೆಗೆ ಒಳಪಡಿಸಲು ಕಾಂಗ್ರೆಸ್ ಆಗ್ರಹ

Published On - 5:06 pm, Wed, 8 December 21