CDS Bipin Rawat: ಸಿಡಿಎಸ್ ಬಿಪಿನ್ ರಾವತ್ ಸುರಕ್ಷೆಗಾಗಿ ಗಣ್ಯರ ಪ್ರಾರ್ಥನೆ: ಹೆಲಿಕಾಪ್ಟರ್ ತಯಾರಕರನ್ನೂ ತನಿಖೆಗೆ ಒಳಪಡಿಸಲು ಕಾಂಗ್ರೆಸ್ ಆಗ್ರಹ
ಈ ಹೆಲಿಕಾಪ್ಟರ್ಗಳನ್ನು ಇತ್ತೀಚೆಗಷ್ಟೇ ಖರೀದಿಸಲಾಗಿತ್ತು. ಹೀಗಾಗಿ ಸಮರ್ಪಕ ತನಿಖೆ ಮತ್ತು ವಿಚಾರಣೆಗಳು ನಡೆಯಬೇಕಿದೆ ಎಂದು ಕಾಂಗ್ರೆಸ್ ಹೇಳಿದೆ.
ದೆಹಲಿ: ಕುನೂರ್ ಬಳಿ ಹೆಲಿಕಾಪ್ಟರ್ ಪತನಗೊಂಡು ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಗಾಯಗೊಂಡಿದ್ದಾರೆ. ಅವರು ಶೀಘ್ರ ಗುಣಮುಖರಾಗಬೇಕು ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಪ್ರಾರ್ಥಿಸಿದ್ದಾರೆ. ಭಾರತೀಯ ವಾಯುಪಡೆಯು ಇತ್ತೀಚೆಗಷ್ಟೇ ಈ ಹೆಲಿಕಾಪ್ಟರ್ ಖರೀದಿಸಿತ್ತು. ಹೀಗಾಗಿ ಹೆಲಿಕಾಪ್ಟರ್ ತಯಾರಕರನ್ನೂ ತನಿಖೆಯ ಭಾಗವಾಗಿಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಹೆಲಿಕಾಪ್ಟರ್ ಅಪಘಾತದ ಸುದ್ದಿ ತಿಳಿದು ಆಘಾತವಾಯಿತು ಎಂದಿರುವ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ಅದರಲ್ಲಿದ್ದ ಎಲ್ಲರೂ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ. ಪತನಗೊಂಡ ಹೆಲಿಕಾಪ್ಟರ್ನಲ್ಲಿದ್ದ ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿಯ ಸುರಕ್ಷೆಗಾಗಿ ಪ್ರಾರ್ಥಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Hoping for the safety of CDS General Bipin Rawat, his wife and others onboard the chopper.
Prayers for speedy recovery.
— Rahul Gandhi (@RahulGandhi) December 8, 2021
ದುರ್ಘಟನೆಯ ತನಿಖೆಗೆ ಆದೇಶಿಸಲಾಗುವುದು ಎಂಬ ವಾಯುಪಡೆಯ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, ಈ ಹೆಲಿಕಾಪ್ಟರ್ಗಳನ್ನು ಇತ್ತೀಚೆಗಷ್ಟೇ ಖರೀದಿಸಲಾಗಿತ್ತು. ಹೀಗಾಗಿ ಸಮರ್ಪಕ ತನಿಖೆ ಮತ್ತು ವಿಚಾರಣೆಗಳು ನಡೆಯಬೇಕಿದೆ. ಈ ವಿಚಾರಣೆಗಳು ಆಂತರಿಕವಾಗಿ ನಡೆಯಬೇಕು ಮತ್ತು Mi-17V5 ಹೆಲಿಕಾಪ್ಟರ್ ತಯಾರಕರನ್ನೂ ತನಿಖೆಯ ಭಾಗವಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.
I pray for the safety of our CDS & his family & hope noone is injured. These choppers have been procured recently so a proper investigation & enquiry must be done internally & with the manufacturer.https://t.co/rCKm4dQSWO
— Abhishek Singhvi (@DrAMSinghvi) December 8, 2021
ಸೇನಾ ಹೆಲಿಕಾಪ್ಟರ್ ಪತನ ಸುದ್ದಿ ಕೇಳಿ ಆಘಾತವಾಯಿತು ಎಂದು ಕೂ ಸಾಮಾಜಿಕ ಮಾಧ್ಯಮದಲ್ಲಿ ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
Published On - 3:38 pm, Wed, 8 December 21