ಪ್ರತಿಭಟನೆ ನಿರತರ ಮೇಲೆ ಪೊಲೀಸರ ದಬ್ಬಾಳಿಕೆ ಖಂಡಿಸಿ ಬುಧವಾರ ಬಂಗಾಳ ಬಂದ್‌ಗೆ ಕರೆ ನೀಡಿದ ಬಿಜೆಪಿ

|

Updated on: Aug 27, 2024 | 6:00 PM

Nabanna Abhijan: ಸಂತ್ರಗಾಚಿಯಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸರು ಜಲಫಿರಂಗಿ ಬಳಸುತ್ತಿದ್ದಾರೆ, ಹೌರಾ ಸೇತುವೆಯಲ್ಲಿ ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ, ಕಾಲೇಜ್ ಸ್ಟ್ರೀಟ್‌ನಲ್ಲಿ ಅವರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ದಯವಿಟ್ಟು ಈ ಕ್ರೌರ್ಯಗಳನ್ನು ತಕ್ಷಣ ನಿಲ್ಲಿಸಿ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

ಪ್ರತಿಭಟನೆ ನಿರತರ ಮೇಲೆ ಪೊಲೀಸರ ದಬ್ಬಾಳಿಕೆ ಖಂಡಿಸಿ ಬುಧವಾರ ಬಂಗಾಳ ಬಂದ್‌ಗೆ ಕರೆ ನೀಡಿದ ಬಿಜೆಪಿ
ಸುವೇಂದು ಅಧಿಕಾರಿ
Follow us on

ಕೋಲ್ಕತ್ತಾ: ರಾಜ್ಯ ಸಚಿವಾಲಯಕ್ಕೆ ಮೆರವಣಿಗೆಯಲ್ಲಿ ಭಾಗವಹಿಸಿದವರ ಮೇಲೆ ಪೊಲೀಸ್ ಕ್ರಮವನ್ನು ವಿರೋಧಿಸಿ, ಪಶ್ಚಿಮ ಬಂಗಾಳದಲ್ಲಿ (West Bengal) ನಾಳೆ (ಬುಧವಾರ) 12 ಗಂಟೆಗಳ ಸಾರ್ವತ್ರಿಕ ಮುಷ್ಕರಕ್ಕೆ (Bengal Bandh) ಬಿಜೆಪಿ (BJP) ಕರೆ ನೀಡಿದೆ. ಆದಾಗ್ಯೂ, ಪಶ್ಚಿಮ ಬಂಗಾಳ ಸರ್ಕಾರವು ನಾಳೆ ಜನಜೀವನ ಸಾಮಾನ್ಯವಾಗಿರುತ್ತದೆ. ಬಸ್ಸುಗಳು ಮತ್ತು ಇತರ ಸಾರಿಗೆ ಎಂದಿನಂತೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ. ‘ನಬನ್ನ ಅಭಿಜನ್’ ರ‍್ಯಾಲಿಯಲ್ಲಿ ಶಾಂತಿಯುತವಾಗಿ ಭಾಗವಹಿಸಿದವರ ಮೇಲೆ ಪೊಲೀಸರು “ಕ್ರೂರ ದಬ್ಬಾಳಿಕೆ” ನಡೆಸಿದ್ದಾರೆ . ರಾಜ್ಯ ಆಡಳಿತದ “ಕ್ರೌರ್ಯ” ವನ್ನು ನಿಲ್ಲಿಸದಿದ್ದರೆ ಪಶ್ಚಿಮ ಬಂಗಾಳ ಬಂದ್ ಮಾಡುವುದಾಗಿವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಸಲು ಬಿಜೆಪಿ ಮುಂದಾಗಿದೆ.

ರಾಜ್ಯ ಸರ್ಕಾರಕ್ಕೆ ಬಿಜೆಪಿ ಎಚ್ಚರಿಕೆ

“ಸಂತ್ರಗಾಚಿಯಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸರು ಜಲಫಿರಂಗಿ ಬಳಸುತ್ತಿದ್ದಾರೆ, ಹೌರಾ ಸೇತುವೆಯಲ್ಲಿ ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ, ಕಾಲೇಜ್ ಸ್ಟ್ರೀಟ್‌ನಲ್ಲಿ ಅವರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ದಯವಿಟ್ಟು ಈ ಕ್ರೌರ್ಯಗಳನ್ನು ತಕ್ಷಣ ನಿಲ್ಲಿಸಿ” . ‘ಪೊಲೀಸ್ ದಬ್ಬಾಳಿಕೆಯನ್ನು ತಕ್ಷಣವೇ ನಿಲ್ಲಿಸದಿದ್ದರೆ, ನಾವು (ಬಿಜೆಪಿ) ನಾಳೆ ಪಶ್ಚಿಮ ಬಂಗಾಳವನ್ನು ಸ್ತಬ್ಧಗೊಳಿಸುತ್ತೇವೆ’ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

“ಈ ಆಡಳಿತದಿಂದ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಮತ್ತು ಡಿಜಿಪಿ ಇಂತಹ ದೌರ್ಜನ್ಯವನ್ನು ನಿಲ್ಲಿಸದಿದ್ದರೆ, ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾನು ಮಾರ್ಗಮಧ್ಯೆ ಹೌರಾ ನಿಲ್ದಾಣಕ್ಕೆ ಹೋಗುತ್ತಿದ್ದೇನೆ. ಬೇಲೂರು ಮಠ್ ಅವರು ಮುಂಚೂಣಿಗೆ ಬರಬೇಡಿ ಎಂದು ಕೇಳಿದ್ದರಿಂದ ನಾವು ಛತ್ರ ಸಮಾಜ ಚಳವಳಿಗೆ ಸೇರುತ್ತಿಲ್ಲ. ಆದರೆ ನಾವು ಅವರೊಂದಿಗೆ ಇದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Kolkata Murder: ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಕೊಲೆ; ಮಮತಾ ಬ್ಯಾನರ್ಜಿ ವಿರುದ್ಧ ಜೆಪಿ ನಡ್ಡಾ ಟೀಕೆ

ವಿದ್ಯಾರ್ಥಿಗಳು ರಸ್ತೆಯಲ್ಲಿ ನ್ಯಾಯಕ್ಕಾಗಿ ಒತ್ತಾಯಿಸುವುದನ್ನು ತಡೆಯಲು ಕೋಲ್ಕತ್ತಾ ಪೊಲೀಸರಿಂದ 8,000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ವಿಫಲರಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ತಮ್ಮ ಅರಾಜಕೀಯ ಪ್ರತಿಭಟನಾ ರ್ಯಾಲಿಯಲ್ಲಿ ಯಾವುದೇ ಬಿಜೆಪಿ ನಾಯಕರು ಅಥವಾ ಯಾವುದೇ ರಾಜಕೀಯ ಪಕ್ಷದ ನಾಯಕರು ಮುಂಚೂಣಿಯಲ್ಲಿ ಇರುವುದಿಲ್ಲ ಎಂದು ಮಾರ್ಚ್ ಛತ್ರ ಸಮಾಜದ ಸಂಘಟಕರು ಹೇಳಿದ್ದಾರೆ.

ನಬಣ್ಣಕ್ಕೆ ತೆರಳಿದ ಜನರನ್ನು ಚದುರಿಸಲು ಪೊಲೀಸರು ಲಾಠಿ, ಅಶ್ರುವಾಯು ಹಾಗೂ ಜಲಫಿರಂಗಿಗಳನ್ನು ಪ್ರಯೋಗಿಸಿದರು.

“ಈ ನಿರಂಕುಶ ಆಡಳಿತವು ಜನರ ಧ್ವನಿಗೆ ಕಿವುಡಾಗಿರುವುದರಿಂದ ನಾವು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಬೇಕಾಗಿದೆ, ಮೃತ ವೈದ್ಯ ಸಹೋದರಿಗೆ ನ್ಯಾಯ ಸಿಗಬೇಕು. ನ್ಯಾಯದ ಬದಲು, ಮಮತಾ ಬ್ಯಾನರ್ಜಿ ಅವರ ಪೊಲೀಸರು ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಮಾತ್ರ ಬಯಸಿದ ರಾಜ್ಯದ ಶಾಂತಿಪ್ರಿಯ ಜನರ ಮೇಲೆ ಆಕ್ರಮಣ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Tue, 27 August 24