ಜೆ.ಪಿ.ನಡ್ಡಾ ಪ್ರವಾಸದ ವೇಳೆ ಬಿಜೆಪಿ ಮುಖಂಡರ ವಾಹನಗಳ ಮೇಲೆ ಕಲ್ಲು ತೂರಾಟ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 10, 2020 | 7:18 PM

ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಪ್ರವಾಸದ ವೇಳೆ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಮತ್ತು ದೀಪಾಂಜನ್ ಗುಹಾ ಅವರ ಅವರ ವಾಹನಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಜೆ.ಪಿ.ನಡ್ಡಾ ಪ್ರವಾಸದ ವೇಳೆ ಬಿಜೆಪಿ ಮುಖಂಡರ ವಾಹನಗಳ ಮೇಲೆ ಕಲ್ಲು ತೂರಾಟ
ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ
Follow us on

ಕೋಲ್ಕತ್ತಾ: ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಪ್ರವಾಸದ ವೇಳೆ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಮತ್ತು ದೀಪಾಂಜನ್ ಗುಹಾ ಅವರ ಅವರ ವಾಹನಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆ ರಾಜಕೀಯ ಕೆಸರೆರೆಚಾಟಕ್ಕೆ ಎಡೆಮಾಡಿಕೊಟ್ಟಿದೆ.

ದಕ್ಷಿಣ 24 ಪರಗಣದ ಡೈಮಂಡ್ ಹಾರ್ಬರ್ ಬಳಿ ತೆರಳುತ್ತಿದ್ದಾಗ ಈ ಘಟನೆ ಜರುಗಿದೆ.

ಜಖಂ ಆದ ವಾಹನದ ಗಾಜು

‘ಕಲ್ಲು ತೂರಾಟದಲ್ಲಿ ಕೆಲ ನಾಯಕರಿಗೆ ಗಾಯವಾಗಿದೆ. ಬುಲೆಟ್​ಪ್ರೂಪ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾರಣ ನನಗೆ ಏನೂ ಅಪಾಯವಾಗಲಿಲ್ಲ. ತಾಯಿ ದುರ್ಗೆಯೇ ನನ್ನನ್ನು ರಕ್ಷಿಸಿದ್ದಾಳೆ’ ಎಂದು ಜೆ ಪಿ ನಡ್ಡಾ ಪ್ರತಿಕ್ರಿಯಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಅಕ್ಷರಶಃ ಮಣ್ಣುಪಾಲಾಗಿದೆ. ಇಂತಹ ಗೂಂಡಾರಾಜ್ಯ ವ್ಯವಸ್ಥೆಯನ್ನು ಮುಂದುವರೆಯಲು ಅವಕಾಶ ನೀಡುವುದಿಲ್ಲ ಎಮದು ಆವರು ವಿವರಿಸಿದ್ದಾರೆ.

‘ನಾವು ಡೈಮಂಡ್ ಹಾರ್ಬರ್​ಗೆ ಹೋಗುವಾಗ, ಟಿಎಂಸಿ ಬೆಂಬಲಿಗರು ರಸ್ತೆಯನ್ನು ನಿರ್ಬಂಧಿಸಿ, ನಡ್ಡಾ ಅವರ ವಾಹನ ಮತ್ತು ಇತರ ಕಾರುಗಳಿಗೆ ಕಲ್ಲುಗಳಿಂದ ಹೊಡೆದರು. ಇದು ಟಿಎಂಸಿಯ ನಿಜವಾದ ಬಣ್ಣವನ್ನು ತೋರಿಸುತ್ತದೆ’ ಎಂದು ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ತಿಳಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಭಾರತೀಯ ರಾಜಕೀಯ ಇತಿಹಾಸದಲ್ಲೇ ಇದು ಕರಾಳ ದಿನ ಎಂದಿದ್ದಾರೆ. ಬಂಗಾಳದಲ್ಲಿ ಮಾಧ್ಯಮಗಳಿಗೂ ಅಪಾಯವಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Published On - 3:01 pm, Thu, 10 December 20