ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ
ಒಟ್ಟು 120 ಕಚೇರಿಗಳು ನೂತನ ಸಂಸತ್ ಭವನದಲ್ಲಿ ಇರಲಿವೆ. ಸಮಿತಿಗಳ ಕೊಠಡಿಗಳು, ಸಂಸದೀಯ ವ್ಯವಹಾರಗಳ ಸಚಿವಾಲಯದ ಪ್ರಮುಖ ಕಚೇರಿಗಳು, ಲೋಕಸಭಾ ಸಚಿವಾಲಯ, ರಾಜ್ಯಸಭಾ ಸಚಿವಾಲಯ, ಪ್ರಧಾನ ಮಂತ್ರಿಗಳ ಕಚೇರಿ, ಕೆಲ ಸಂಸದರು, ಭದ್ರತಾ ಸಿಬ್ಬಂದಿ ಕಚೇರಿಗಳನ್ನು ಹೊಂದಿರಲಿದೆ.
ದೆಹಲಿ: ರಾಷ್ಟ ರಾಜಧಾನಿ ದೆಹಲಿಯಲ್ಲಿಂದು ಹೊಸ ಸಂಸತ್ ಭವನ ನಿರ್ಮಾಣದ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಮೋದಿ, ಉದ್ಯಮಿ ರತನ್ ಟಾಟಾ ಸೇರಿದಂತೆ ಅನೇಕ ಸಚಿವರು ಹಾಗೂ ಸಂಸದರು ಪಾಲ್ಗೊಂಡರು.
ಹೊಸ ಸಂಸತ್ ಭವನದ ನಿರ್ಮಾಣಕ್ಕೆ ಕಾರಣ? 2026ರಲ್ಲಿ ಸಂಸದರ ಸಂಖ್ಯೆ ಪುನರ್ವಿಮರ್ಶೆಗೆ ಒಳಪಡುವ ಸಾಧ್ಯತೆ ಇದೆ. ಜನಸಂಖ್ಯೆಯ ಆಧಾರದ ಮೇಲೆ ಮರು ವಿಂಗಡಣೆ ಪ್ರಕ್ರಿಯೆ ನಡೆಯಲಿದೆ. ಇದರಿಂದ ಸಂಸದರ ಸಂಖ್ಯೆ ಹೆಚ್ಚಾಗಲಿದೆ. ಇನ್ನಷ್ಟು ಸ್ಥಳಾವಕಾಶದ ಅಗತ್ಯವಿರುವ ಕಾರಣ ಹೊಸ ಸಂಸತ್ ಭವನದ ನಿರ್ಮಾಣ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೊಸ ಸಂಸತ್ ಭವನ ನಿರ್ಮಾಣಗೊಂಡ ಬಳಿಕ ಹಳೆ ಸಂಸತ್ ಭವನ ಮ್ಯೂಸಿಯಂ ಆಗಿ ಪರಿವರ್ತನೆಗೊಳ್ಳಲಿದೆ.
ಒಟ್ಟು 120 ಕಚೇರಿಗಳು ನೂತನ ಸಂಸತ್ ಭವನದಲ್ಲಿ ಇರಲಿವೆ. ಸಮಿತಿಗಳ ಕೊಠಡಿಗಳು, ಸಂಸದೀಯ ವ್ಯವಹಾರಗಳ ಸಚಿವಾಲಯದ ಪ್ರಮುಖ ಕಚೇರಿಗಳು, ಲೋಕಸಭಾ ಸಚಿವಾಲಯ, ರಾಜ್ಯಸಭಾ ಸಚಿವಾಲಯ, ಪ್ರಧಾನ ಮಂತ್ರಿಗಳ ಕಚೇರಿ, ಕೆಲವು ಸಂಸದರು ಮತ್ತು ಭದ್ರತಾ ಸಿಬ್ಬಂದಿ ಕಚೇರಿಗಳನ್ನು ಹೊಂದಿರಲಿದೆ.
ಭವನದಲ್ಲಿ ಒಟ್ಟು ಆರು ಪ್ರವೇಶ ದ್ವಾರ ಕಲ್ಪಿಸಲಾಗುತ್ತದೆ. ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಬರಲು ಒಂದು ದ್ವಾರ, ಲೋಕಸಭೆಯ ಸ್ಪೀಕರ್, ರಾಜ್ಯಸಭೆಯ ಅಧ್ಯಕ್ಷರು ಮತ್ತು ಸಂಸದರು ಬರಲು ಒಂದು ದ್ವಾರ, ಸಂಸದರು ಹಾಗೂ ಅಧಿಕಾರಿಗಳು ಬರಲು ಸಾಮಾನ್ಯ ಎರಡು ದ್ವಾರ, ಎರಡು ಸಾರ್ವಜನಿಕ ಪ್ರವೇಶ ದ್ವಾರಗಳು ಹೊಸ ಭವನದಲ್ಲಿ ನಿರ್ಮಾಣಗೊಳ್ಳಲಿದೆ. ನವ ಭಾರತಕ್ಕೆ ನೂತನ ಸಂಸತ್ ಭವನ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಲಿದೆ. ತ್ರಿಭುಜಾಕೃತಿಯಲ್ಲಿ ಭವನ ನಿರ್ಮಾಣಗೊಳ್ಳಲಿದೆ.
ಭವನದಲ್ಲಿ ನಾಲ್ಕು ಮಹಡಿಗಳನ್ನು ಕಲ್ಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಕೆಳ ಮಹಡಿ, ನೆಲ ಮಹಡಿ, ಮೊದಲ ಮತ್ತು ಎರಡನೇ ಮಹಡಿಗಳು ಇರಲಿವೆ. ನೂತನ ಸಂಸತ್ ಭವನದಲ್ಲಿ ವಿಶಾಲ ಲೋಕಸಭೆ, ರಾಜ್ಯಸಭೆ ಅಧಿವೇಶನಗಳಿಗಾಗಿ ಎರಡು ಆಸನಗಳ ಬೆಂಚ್‌ಗಳಲ್ಲಿ ಸಂಸದರನ್ನು ಕೂರಿಸಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಭವನದಲ್ಲಿನ ಆಸನಗಳು 60 ಸೆಂ.ಮೀ ಅಗಲ ಮತ್ತು 40 ಸೆಂ.ಮೀ ಎತ್ತರದಲ್ಲಿ ರೂಪುಗೊಳ್ಳಲಿದೆ. ಲೋಕಸಭೆ 3,015 ಚ.ಮೀಟರ್ ವಿಸ್ತೀರ್ಣದಲ್ಲಿ 888 ಆಸನಗಳು, ಜಂಟಿ ಅಧಿವೇಶನ ನಡೆಯುವ ವೇಳೆ ಹೊಸ ಲೋಕಸಭೆಯಲ್ಲಿ 1,224 ಸದಸ್ಯರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. 3,220 ಚ.ಮೀಟರ್ ವಿಸ್ತೀರ್ಣದಲ್ಲಿ ರಾಜ್ಯಸಭೆಯಲ್ಲಿ 384 ಆಸನಗಳು ಹೊಂದಿರಲಿದೆ.
2022ರಲ್ಲಿ ಹೊಸ ಸಂಸತ್ ಭವನ ಉದ್ಘಾಟನೆಗೊಳ್ಳುವ ನಿರೀಕ್ಷೆ: 2022ರ ವೇಳೆಗೆ ಹೊಸ ಸಂಸತ್ ಕಟ್ಟಡ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಭವನದದ ನಿರ್ಮಾಣದಲ್ಲಿ ಸುಮಾರು 2,000 ಕಾರ್ಮಿಕರು ನೇರವಾಗಿ ಹಾಗೂ 9,000 ಕಾರ್ಮಿಕರು ಪರೋಕ್ಷವಾಗಿ ಭಾಗಿಯಾಗಲಿದ್ದಾರೆ. 861.90 ಕೋಟಿ ವೆಚ್ಚದಲ್ಲಿ ಸಂಸತ್ ನಿರ್ಮಾಣವಾಗಲಿದೆ.
Central Vista ಹೊಸ ಸಂಸತ್ ಭವನ ನಿರ್ಮಾಣ ಕಾಮಗಾರಿ, ಶೃಂಗೇರಿ ಅರ್ಚಕರಿಂದ ಪೂಜಾ ವಿಧಿಗಳು ಆರಂಭ
Published On - 2:32 pm, Thu, 10 December 20