ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಅಲೆ: ಉತ್ತರಾಖಂಡ್​ನಲ್ಲಿ ಶುರುವಾಗಲಿದೆ ಎಲೆಕ್ಟ್ರಿಕ್ ಬಸ್​ ಸೇವೆ

ಉತ್ತರಾಖಂಡ್​ನಲ್ಲಿ ನಾಳೆಯಿಂದ ಎಲೆಕ್ಟ್ರಿಕ್ ಬಸ್​ ಸೇವೆ ಆರಂಭವಾಗಲಿದ್ದು ನಗರದಲ್ಲಿ ಈ ಸೇವೆಗೆ ಚಾಲನೆ ನೀಡಲಾಗುವುದು. ಉತ್ತರಾಖಂಡ್ ಸಾರಿಗೆ ಸಂಸ್ಥೆ ಡೆಹ್ರಾಡೂನ್ ನಗರದಲ್ಲಿ 30 ಎಲೆಕ್ಟ್ರಿಕ್ ಬಸ್​ಗಳನ್ನು ರಸ್ತೆಗೆ ಇಳಿಸಲು ನಿರ್ಧರಿಸಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಅಲೆ: ಉತ್ತರಾಖಂಡ್​ನಲ್ಲಿ ಶುರುವಾಗಲಿದೆ ಎಲೆಕ್ಟ್ರಿಕ್ ಬಸ್​ ಸೇವೆ
ಪ್ರಾತಿನಿಧಿಕ ಚಿತ್ರ
guruganesh bhat

|

Dec 10, 2020 | 1:33 PM

ಡೆಹ್ರಾಡೂನ್​: ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಕಾರ್​ಗಳು ಈಗಾಗಲೇ ನಮಗೆ ಚಿರಪರಿಚಿತ. ಆದರೂ ನಗರಗಳಲ್ಲಿ ವಾಯುಮಾಲಿನ್ಯ ಕಡಿಮೆಯಾಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಲೇ ಇದೆ. ದೇಶದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ವಾಯುಮಾಲಿನ್ಯದ ಪ್ರಮಾಣದ ನಡುವೆಯೇ ಇದೀಗ ಉತ್ತರಾಖಂಡ್​ ಸರ್ಕಾರ ವಾಯುಮಾಲಿನ್ಯ ನಿಯಂತ್ರಣದ ಸಲುವಾಗಿ ಹೊಸ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ. ಉತ್ತರಾಖಂಡ್​ ಸರ್ಕಾರ ತನ್ನ ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್ ಬಸ್​ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿದೆ.

ಉತ್ತರಾಖಂಡ್​ನಲ್ಲಿ ನಾಳೆಯಿಂದ ಎಲೆಕ್ಟ್ರಿಕ್ ಬಸ್​ ಸೇವೆ ಆರಂಭವಾಗಲಿದ್ದು ನಗರದಲ್ಲಿ ಈ ಸೇವೆಗೆ ಚಾಲನೆ ನೀಡಲಾಗುವುದು. ಉತ್ತರಾಖಂಡ್ ಸಾರಿಗೆ ಸಂಸ್ಥೆ ಈ ಯೋಜನೆಯಡಿ 30 ಎಲೆಕ್ಟ್ರಿಕ್ ಬಸ್​ಗಳನ್ನು ರಸ್ತೆಗೆ ಇಳಿಸಲು ನಿರ್ಧರಿಸಿದೆ. ಉತ್ತರಾಖಂಡ್​ ಸಿಎಂ ತ್ರಿವೇಂದ್ರ ಸಿಂಗ್ ರಾವತ್  ಎಲೆಕ್ಟ್ರಿಕ್ ಬಸ್​ಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಮೇಘಾ ಇಂಜಿನಿಯರಿಂಗ್ ಸಂಸ್ಥೆಯು ಈ ಒಲೆಕ್ಟ್ರಾ ಗ್ರೀನ್​ಟೆಕ್ ಎಲೆಕ್ಟ್ರಿಕ್ ಬಸ್​ಗಳನ್ನು ಪೂರೈಸಿದೆ.

ಒಲೆಕ್ಟ್ರಾ K6, ಒಲೆಕ್ಟ್ರಾ K7 ಮತ್ತು ಒಲೆಕ್ಟ್ರಾ K9  ಎಂಬ ಮೂರು ಮಾದರಿಯ ಎಲೆಕ್ಟ್ರಿಕ್ ಬಸ್​ಗಳನ್ನು ಡೆಹ್ರಾಡೂನ್​ನಲ್ಲಿ ನಿಯೋಜಿಸಲಾಗುವುದು.  ಚಾಲಕನನ್ನು ಹೊರತುಪಡಿಸಿ ಈ ಬಸ್​ಗಳು ಕ್ರಮವಾಗಿ 22 , 31 ಮತ್ತು 39 ಸೀಟುಗಳನ್ನು ಹೊಂದಿವೆ. 2018ರಲ್ಲೇ ಪ್ರಾಯೋಗಿಕ ಸಂಚಾರ ನಡೆಸಿದ್ದ ಬಸ್​ಗಳು, ನಾಳೆಯಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ.

ಎಲೆಕ್ಟ್ರಿಕ್ ಬಸ್​ಗಳಲ್ಲಿದೆ ಹತ್ತಾರು ಸುರಕ್ಷತಾ ಸಾಧನ, ಸವಲತ್ತು ಅಂದ ಹಾಗೆ, ಬಸ್​ಗಳನ್ನು ಈ ಹಿಂದೆ  ಡೆಹ್ರಾಡೂನ್ ಮತ್ತು ಮಸ್ಸೂರಿಯ ನಡುವೆ ಪ್ರಾಯೋಗಿಕವಾಗಿ ಓಡಿಸಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಉತ್ತರಾಖಂಡ್​ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. 2018ರಲ್ಲಿ ಉತ್ತರಾಖಂಡ್ ಸಿಎಂ ಎಲೆಕ್ಟ್ರಾನಿಕ್ ಬಸ್​ಗಳ ಸೇವೆ ಆರಂಭಿಸುವ ನಿಟ್ಟಿನಲ್ಲಿ 700 ಕೋಟಿ ಮೊತ್ತದ ಯೋಜನೆಗೆ ಸಹಿ ಹಾಕಿದ್ದರು. ಈ ಎಲೆಕ್ಟ್ರಿಕ್ ಬಸ್​ಗಳಲ್ಲಿ ಸಿಸಿಟಿವಿ, ಜಿಪಿಎಸ್ ಹಾಗೂ ತುರ್ತು ಸಂದರ್ಭದಲ್ಲಿ ಸಹಾಯವಾಗುವ ವಿಶೇಷ ಪ್ಯಾನಿಕ್ ಬಟನ್ ಹೊಂದಿದೆ. ಜೊತೆಗೆ, ಏರ್ ಸಸ್ಪೆನ್ಶನ್ ಮುಂತಾದವುಗಳನ್ನು ಸಹ ಒಳಗೊಂಡಿವೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada