ಬಿಜೆಪಿ ಕಿಸಾನ್​ ಮೋರ್ಚಾ ಅಧ್ಯಕ್ಷ ಮತ್ತವರ ಪತ್ನಿಯ ಹತ್ಯೆ; ಉಗ್ರರ ಗುಂಡಿಗೆ ಇಬ್ಬರೂ ಬಲಿ

| Updated By: Lakshmi Hegde

Updated on: Aug 09, 2021 | 5:58 PM

ಶುಕ್ರವಾರ ಜಮ್ಮು-ಕಾಶ್ಮೀರದ 11 ಸರ್ಕಾರಿ ಉದ್ಯೋಗಿಗಳು ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಡಿ ಅಮಾನತುಗೊಂಡಿದ್ದರು. ಇನ್ನೊಂದೆಡೆ ಜಮ್ಮು-ಕಾಶ್ಮಿರದಲ್ಲಿ ಇತ್ತೀಚೆಗೆ ಡ್ರೋನ್​ಗಳ ಹಾರಾಟ ಹೆಚ್ಚಾಗಿದೆ.

ಬಿಜೆಪಿ ಕಿಸಾನ್​ ಮೋರ್ಚಾ ಅಧ್ಯಕ್ಷ ಮತ್ತವರ ಪತ್ನಿಯ ಹತ್ಯೆ; ಉಗ್ರರ ಗುಂಡಿಗೆ ಇಬ್ಬರೂ ಬಲಿ
ಬಿಜೆಪಿ ನಾಯಕನ ಗುಂಡಿನ ದಾಳಿ ನಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸರು
Follow us on

ದೆಹಲಿ: ಜಮ್ಮು-ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ಬಿಜೆಪಿ ಕಿಸಾನ್​ ಮೋರ್ಚಾ ನಾಯಕ (BJP Kisan Morcha President) ಮತ್ತು ಅವರ ಪತ್ನಿಯನ್ನು ಇಂದು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಬಿಜೆಪಿಯ ಕುಲಗಾಂವ್​ನ ಕಿಸಾನ್​ ಮೋರ್ಚಾ ಅಧ್ಯಕ್ಷ ಗುಲಾಮ್​ ರಸೂಲ್​ ದಾರ್​ ಮತ್ತು ಅವರ ಪತ್ನಿಗೆ ಉಗ್ರರು ಗುಂಡು (Terror Attack) ಹೊಡೆದಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಗುಲಾಮ್​ ರಸೂಲ್ ದಾರ್​ ಮತ್ತವರ ಪತ್ನಿ ಇಬ್ಬರೂ ಬದುಕುಳಿಯಲಿಲ್ಲ ಎಂದು ಬಿಜೆಪಿ ನಾಯಕ ಅಲ್ತಾಫ್​ ಠಾಕೂರ್ ತಿಳಿಸಿದ್ದಾರೆ.

ಅನಂತ್​ನಾಗ್​ನ ಲಾಲ್​ಚೌಕ್​​ನಲ್ಲಿ ದುರ್ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  ಗುಲಾಮ್​ ರಸೂಲ್​ ದಾರ್ ದಂಪತಿ ಹತ್ಯೆಯನ್ನು ಬಿಜೆಪಿ ಖಂಡಿಸಿದ್ದು, ಇದೊಂದು ತುಂಬ ಭೀಕರವಾದ ಹತ್ಯೆ ಎಂದು ಹೇಳಿದೆ. ಹಾಗೇ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್​ ಅಬ್ದುಲ್ಲಾ ಅವರು ಈ ಹತ್ಯೆಯನ್ನು ಖಂಡಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳ (NIA) ಇತ್ತೀಚೆಗೆ ಅನಂತ್​ನಾಗ್​ನ ಹಲವು ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿತ್ತು. ಉಗ್ರಸಂಘಟನೆಗಳಿಗೆ ಧನಸಹಾಯ ನೀಡುತ್ತಿದ್ದಾರೆ ಎಂಬ ಆರೋಪದಡಿ ಈ ಶೋಧ ಕಾರ್ಯ ನಡೆದಿತ್ತು. ಅಷ್ಟೇ ಅಲ್ಲ, ಜು.10 ರಂದು ಇದೇ ಪ್ರಕರಣದಡಿ ಆರು ಮಂದಿಯನ್ನು ಬಂಧಿಸಿದೆ.

ಶುಕ್ರವಾರ ಜಮ್ಮು-ಕಾಶ್ಮೀರದ 11 ಸರ್ಕಾರಿ ಉದ್ಯೋಗಿಗಳು ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಡಿ ಅಮಾನತುಗೊಂಡಿದ್ದರು. ಇನ್ನೊಂದೆಡೆ ಜಮ್ಮು-ಕಾಶ್ಮಿರದಲ್ಲಿ ಇತ್ತೀಚೆಗೆ ಡ್ರೋನ್​ಗಳ ಹಾರಾಟ ಹೆಚ್ಚಾಗಿದೆ. ಜೂನ್​ನಲ್ಲಿ ಜಮ್ಮುವಿನ ವಾಯುನೆಲೆ ಮೇಲೆ ಎರಡು ಸ್ಫೋಟಗೊಂಡ ಬೆನ್ನಲ್ಲೇ ಪದೇಪದೆ ಡ್ರೋನ್​ ಹಾರಾಡುತ್ತಿದೆ.

ಇದನ್ನೂ ಓದಿ: Health Tips: ಈ ನಾಲ್ಕು ಬಗೆಯ ಅಕ್ಕಿಗಳಲ್ಲಿದೆ ಆರೋಗ್ಯ ಪ್ರಯೋಜನಗಳು

ಟೋಕಿಯೊದಿಂದ ಭಾರತಕ್ಕೆ ವಾಪಸ್ಸಾದ ಒಲಂಪಿಕ್ಸ್ ಹೀರೋಗಳು; ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ