ಬಿಜೆಪಿ ಮುಖಂಡನ ಮೇಲೆ 5 ಬಾರಿ ಗುಂಡು ಹಾರಿಸಿದ ದುಷ್ಕರ್ಮಿಗಳು; ಅಜಯ್​ ಶರ್ಮಾ ಜೀವನ್ಮರಣ ಹೋರಾಟ

| Updated By: Lakshmi Hegde

Updated on: Nov 09, 2021 | 11:23 AM

ಅಜಯ್ ಶರ್ಮಾರಿಗೆ ಇನ್ನೂ 35 ವರ್ಷ. ಬಿಜೆಪಿ ಜಿಲ್ಲಾ ಕಿಸಾನ್​ ಮೋರ್ಚಾದ ಉಪಾಧ್ಯಕ್ಷರೂ ಹೌದು.  ಇವರು ಲೆಹ್ರಾ ಗ್ರಾಮದಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು.

ಬಿಜೆಪಿ ಮುಖಂಡನ ಮೇಲೆ 5 ಬಾರಿ ಗುಂಡು ಹಾರಿಸಿದ ದುಷ್ಕರ್ಮಿಗಳು; ಅಜಯ್​ ಶರ್ಮಾ ಜೀವನ್ಮರಣ ಹೋರಾಟ
ಸಾಂಕೇತಿಕ ಚಿತ್ರ
Follow us on

ಉತ್ತರ ಪ್ರದೇಶದ ಬಿಜೆಪಿ ನಾಯಕ ಅಜಯ್​ ಶರ್ಮಾ (BJP Leader Ajay Sharma) ಅವರ ಮೇಲೆ ನಿನ್ನೆ ಪ್ರಯಾಗ್​ರಾಜ್​​ನಲ್ಲಿ ಗುಂಡಿನ ದಾಳಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಯಾಗ್​ರಾಜ್​​ನ ಅವರ ಮನೆಯಲ್ಲಿ ಇದ್ದಾಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ.  ಫಾಫಮೌ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸರು ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅಜಯ್ ಶರ್ಮಾ ಮೇಲೆ ದುಷ್ಕರ್ಮಿಗಳು ಒಟ್ಟು 5 ಬಾರಿ ಗುಂಡು ಹಾರಿಸಿದ್ದು, ಇದರಿಂದಾಗಿ ಅವರ ತೋಳು ಮತ್ತು ಹೊಟ್ಟೆಗೆ ಗಂಭೀರವಾಗಿ ಗಾಯಗಳಾಗಿವೆ. ಸದ್ಯ ಸ್ವರೂಪ್​​ ರಾಣಿ ನೆಹರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ಅಜಯ್ ಶರ್ಮಾರಿಗೆ ಇನ್ನೂ 35 ವರ್ಷ. ಬಿಜೆಪಿ ಜಿಲ್ಲಾ ಕಿಸಾನ್​ ಮೋರ್ಚಾದ ಉಪಾಧ್ಯಕ್ಷರೂ ಹೌದು.  ಇವರು ಲೆಹ್ರಾ ಗ್ರಾಮದಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ನಿನ್ನೆ ಕೆಲಸದ ನಿಮಿತ್ತ ಮನೆಯಿಂದ ಹೊರಹೋಗಿದ್ದಾಗ ಸುಮಾರು ಆರು ಮಂದಿ ಅವರನ್ನು ಸುತ್ತುವರಿದು ಹಲ್ಲೆ ನಡೆಸಲು ಮುಂದಾಗಿದ್ದರು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಮನೆಯ ಬಳಿ ಬಂದರೂ ಬೆಂಬಿಡದ ದುಷ್ಕರ್ಮಿಗಳು ಒಟ್ಟು ಆರು ಬಾರಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ದಾಳಿಕೋರರು ಕಾರು ಮತ್ತು ಬೈಕ್​​ನಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಶಬ್ದ ಕೇಳದ ಅಕ್ಕಪಕ್ಕದ ಮನೆಯವರೆಲ್ಲ ಅಜಯ್​ ಶರ್ಮಾ ಮನೆಯ ಸಮೀಪ ಬಂದಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆಯನ್ನೂ ಶುರು ಮಾಡಿದ್ದಾರೆ. ಆದರೆ ಅಜಯ್​ ಶರ್ಮಾರ ಕುಟುಂಬ ಇನ್ನೂ ಯಾವುದೇ ದೂರು ನೀಡಿಲ್ಲ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.  ಕಳೆದ ತಿಂಗಳು ಪ್ರಯಾಗ್​ರಾಜ್​​ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಬಿಜೆಪಿ ನಾಯಕ ಅವಧೀಶ್​ ಮೌರ್ಯಾ ಅವರಿಗೆ ದುಷ್ಕರ್ಮಿಗಳು ಗುಂಡು ಹೊಡೆದಿದ್ದರು. ಹಳೇ ದ್ವೇಷದ ಕಾರಣಕ್ಕೆ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: Coronavirus cases in India: ದೇಶದಲ್ಲಿ 10,126 ಹೊಸ ಕೊವಿಡ್ ಪ್ರಕರಣ ಪತ್ತೆ, 332 ಮಂದಿ ಸಾವು

Published On - 11:22 am, Tue, 9 November 21