Cryptocurrency: ಕ್ರಿಪ್ಟೋ ಕರೆನ್ಸಿ ತೊಳಲಾಟದಲ್ಲಿ ಭಾರತ ಸರ್ಕಾರ; ಮನ್ನಣೆ ನೀಡಿ, ನಿಯಂತ್ರಣ ಮಾಡುವ ಉದ್ದೇಶ ಇದೆ!

2019ರ ಜುಲೈನಲ್ಲಿ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಮಿತಿಯೊಂದು ಎಲ್ಲ ಖಾಸಗಿ ಡಿಜಿಟಲ್ ಕರೆನ್ಸಿಗಳನ್ನು ಸಂಪೂರ್ಣ ನಿಷೇಧಿಸಬೇಕು. ಕ್ರಿಪ್ಟೋ ಕರೆನ್ಸಿಯ ವ್ಯವಹಾರದಲ್ಲಿ ತೊಡಗಿದವರ ಮೇಲೆ 25 ಕೋಟಿ ರೂಪಾಯಿವರೆಗೂ ದಂಡ ವಿಧಿಸಬೇಕು. ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಬೇಕೆಂದು ಹೇಳಿತ್ತು. ಆದರೆ, ಈಗ ಕ್ರಿಪ್ಟೋ ಕರೆನ್ಸಿ ಅಥವಾ ಡಿಜಿಟಲ್ ಕರೆನ್ಸಿ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಬದಲಾಗಿದೆ! ಏನದು?

Cryptocurrency: ಕ್ರಿಪ್ಟೋ ಕರೆನ್ಸಿ ತೊಳಲಾಟದಲ್ಲಿ ಭಾರತ ಸರ್ಕಾರ; ಮನ್ನಣೆ ನೀಡಿ, ನಿಯಂತ್ರಣ ಮಾಡುವ ಉದ್ದೇಶ ಇದೆ!
Cryptocurrency: ಕ್ರಿಪ್ಟೋ ಕರೆನ್ಸಿ ತೊಳಲಾಟದಲ್ಲಿ ಭಾರತ ಸರ್ಕಾರ; ಮನ್ನಣೆ ನೀಡಿ, ನಿಯಂತ್ರಣ ಮಾಡುವ ಉದ್ದೇಶ ಇದೆ!
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Nov 09, 2021 | 11:23 AM

ದೆಹಲಿ: ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಅಥವಾ ಕರೆನ್ಸಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಸೂದೆಯನ್ನು ಸಿದ್ದಪಡಿಸಿ, ಮುಂದಿನ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ದತೆ ನಡೆಸಿದೆ. ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಯನ್ನ ಸಂಪೂರ್ಣವಾಗಿ ನಿಷೇಧಿಸುವ ಉದ್ದೇಶ ಇಲ್ಲ. ಜೊತೆಗೆ ನಿಯಂತ್ರಣ ಮಾಡದೆಯೂ ಬಿಡಲು ಸಾಧ್ಯವಿಲ್ಲ. ಹೀಗಾಗಿ ಯಾವ ಮಾರ್ಗ ಅನುಸರಿಸಬೇಕು ಎನ್ನುವ ಬಗ್ಗೆ ಈಗ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ತಾಳುತ್ತಿದೆ. ಕ್ರಿಪ್ಟೋಕರೆನ್ಸಿ ವಿಷಯದಲ್ಲಿ ಭಾರತ ಸರ್ಕಾರವು ಮಧ್ಯಮ ಮಾರ್ಗ ಅನುಸರಿಸಲು ನಿರ್ಧರಿಸಿದೆ. ಕ್ರಿಪ್ಟೋ ಕರೆನ್ಸಿಗಳನ್ನು ಸಂಪೂರ್ಣ ನಿಷೇಧ ಮಾಡಲು ಸಾಧ್ಯವಿಲ್ಲ (middle path). ಜೊತೆಗೆ ಅನಿಯಂತ್ರಿತವಾಗಿ ಕ್ರಿಪ್ಟೋಕರೆನ್ಸಿ ಚಲಾವಣೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ಕ್ರಿಪ್ಟೋ ಕರೆನ್ಸಿ (cryptocurrency) ವಿಷಯದಲ್ಲಿ ಮಧ್ಯಮ ಮಾರ್ಗ ಅನುಸರಿಸಿ, ಕಾಯಿದೆ ಸಿದ್ದಪಡಿಸಲು ಕೇಂದ್ರ ಸರ್ಕಾರ ಒಲವು ತೋರಿದೆ. ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ (winter session of Parliament) ಕ್ರಿಪ್ಟೋ ಕರೆನ್ಸಿ ನಿಯಂತ್ರಣದ ಬಗ್ಗೆ ಮಸೂದೆ ಸಿದ್ದಪಡಿಸಿ, ಮಸೂದೆಯನ್ನು ಸಂಸತ್ತಿನ ಎರಡು ಸದನಗಳಲ್ಲೂ ಮಂಡಿಸಲಿದೆ.

ಭಾರತೀಯರು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಈ ಹಂತದಲ್ಲಿ ಕ್ರಿಪ್ಟೋಕರೆನ್ಸಿ ಮೇಲೆ ಸಂಪೂರ್ಣ ನಿಷೇಧ ಹೇರುವುದು ಸಾಧುವಲ್ಲ ಎಂಬುದು ಕೇಂದ್ರ ಸರ್ಕಾರದ ಅಭಿಪ್ರಾಯ. ಆದರೇ, ಅನಿಯಂತ್ರಿತವಾಗಿ ಕಾನೂನಿನ ಮಾನ್ಯತೆ ಇಲ್ಲದೇ ಇರುವ ಕ್ರಿಪ್ಟೋ ಕರೆನ್ಸಿಗಳ ಚಲಾವಣೆಗೆ ಅವಕಾಶ ಕೊಡಲು ಸಾಧ್ಯವೂ ಇಲ್ಲ.

ಹೀಗಾಗಿ ಈ ಎರಡರ ಮಧ್ಯೆ ಸಮತೋಲದ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಸದ್ಯದಲ್ಲೇ ಕ್ರಿಪ್ಟೋ ಕರೆನ್ಸಿಯ ಬಗ್ಗೆ ಕೇಂದ್ರ ಸರ್ಕಾರವು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಮಧ್ಯಮ ಮಾರ್ಗವನ್ನು ಅನುಸರಿಸುವ ಮೂಲಕ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ಎಲ್ಲರ ಹಿತಾಸಕ್ತಿ ರಕ್ಷಿಸುವ ಕೆಲಸವನ್ನು ಮಾಡಲಾಗುತ್ತೆ.

ಕ್ರಿಪ್ಟೋ ಕರೆನ್ಸಿಯ ಸಾಧಕ, ಭಾಧಕಗಳು, ಬೇರೆ ದೇಶಗಳು ಕ್ರಿಪ್ಟೋ ಕರೆನ್ಸಿ ನಿಯಂತ್ರಣಕ್ಕೆ ಅನುಸರಿಸುತ್ತಿರುವ ಕ್ರಮಗಳು, ಡಿಜಿಟಲ್ ಕರೆನ್ಸಿಯಲ್ಲಿ ಭಾರತೀಯರು ಮಾಡಿರುವ ಹೂಡಿಕೆಗಳು, ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಆರ್‌ಬಿಐ ದೃಷ್ಟಿಕೋನದ ಬಗ್ಗೆ ಹಣಕಾಸು ಇಲಾಖೆಯ ಅಧಿಕಾರಿಗಳು, ಹಣಕಾಸು ಸ್ಥಾಯಿ ಸಮಿತಿಯ ಸದಸ್ಯರ ಮುಂದೆ ವಿಸ್ತೃತ ಪ್ರಸಂಟೇಷನ್ ಅನ್ನು ಇತ್ತೀಚೆಗೆ ನೀಡಲಾಗಿದೆ.

ಡಿಜಿಟಲ್ ಕರೆನ್ಸಿಗಳ ಮೇಲೆ ತೆರಿಗೆ ವಿಧಿಸುವ ಬಗ್ಗೆ ಸದ್ಯದಲ್ಲೇ ಮತ್ತೊಂದು ಪ್ರಸಂಟೇಷನ್ ಅನ್ನು ಸಹ ನೀಡಲಾಗುತ್ತೆ. ಕ್ರಿಪ್ಟೋ ಕರೆನ್ಸಿ ಅಥವಾ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಾಡುವ ಮಸೂದೆಯ ಬಗ್ಗೆ ಕಾನೂನು ಇಲಾಖೆಯು ತನ್ನ ಒಪ್ಪಿಗೆ ನೀಡಿದ ಬಳಿಕ ಕೇಂದ್ರದ ಕ್ಯಾಬಿನೆಟ್ ಗೆ ಅನುಮೋದನೆಗಾಗಿ ರವಾನೆ ಮಾಡಲಾಗುತ್ತೆ.

ಕ್ರಿಪ್ಟೋ ಕರೆನ್ಸಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಸೂದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ರೀತಿಯಲ್ಲಿ ಸಿದ್ದಪಡಿಸಬೇಕು. ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಮಸೂದೆಯನ್ನು ಸಿದ್ದಪಡಿಸಬೇಕು ಎಂಬ ಅಭಿಪ್ರಾಯ ಕೇಂದ್ರ ಸರ್ಕಾರದಲ್ಲಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಈ ಮೊದಲು ಸಿದ್ದಪಡಿಸಿದ್ದ ಮಸೂದೆಯು ಈ ವಿಷಯಗಳ ಬಗ್ಗೆ ಸರಿಯಾಗಿ ಗಮನ ಕೊಟ್ಟಿರಲಿಲ್ಲ.

ಕೇಂದ್ರ ಸರ್ಕಾರವು ಕಳೆದ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನದ ವೇಳೆಯೇ ಕ್ರಿಪ್ಟೋ ಕರೆನ್ಸಿ ಮತ್ತು ನಿಯಂತ್ರಣ, ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆ, 2021 ಅನ್ನು ಮಂಡಿಸಲು ಸಿದ್ದತೆ ನಡೆಸಿತ್ತು. ಸಂಸತ್ ನಲ್ಲಿ ಮಂಡನೆಯಾಗಬೇಕಾದ ಮಸೂದೆಗಳ ಪಟ್ಟಿಯಲ್ಲೂ ಈ ಮಸೂದೆ ಇತ್ತು. ಆದರೇ, ಇನ್ನೂ ಹೆಚ್ಚಿನ ಸಮಾಲೋಚನೆ ನಡೆಸುವ ಉದ್ದೇಶದಿಂದ ಮಸೂದೆಯನ್ನು ಮಂಡಿಸಲು ಮುಂದಾಗಲಿಲ್ಲ. ಬಳಿಕ ಅಂತರ್ ಇಲಾಖೆಯ ತಂಡವನ್ನು ರಚಿಸಿ, ಮಸೂದೆಯನ್ನು ಪರಿಶೀಲಿಸಲು ಸೂಚಿಸಲಾಗಿತ್ತು.

ಇನ್ನು ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಾನು ಈಗಾಗಲೇ ಹೇಳಿದ್ದೇನೆ, ನಾವು ಕ್ರಿಪ್ಟೋ ಕರೆನ್ಸಿಗಳಿಗೆ ನಾವು ಇಲ್ಲ ಎಂದು ಹೇಳುವುದಿಲ್ಲ. ಆದರೆ, ತಂತ್ರಜ್ಞಾನವು ಹೇಗೆ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅವಕಾಶ ನೀಡುತ್ತೆ ಎಂಬುದನ್ನು ನಾವು ನೋಡಬೇಕು ಎಂದು ಹೇಳಿದ್ದರು.

2019ರ ಜುಲೈನಲ್ಲಿ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಮಿತಿಯೊಂದು ಎಲ್ಲ ಖಾಸಗಿ ಡಿಜಿಟಲ್ ಕರೆನ್ಸಿಗಳನ್ನು ಸಂಪೂರ್ಣ ನಿಷೇಧಿಸಬೇಕು. ಕ್ರಿಪ್ಟೋ ಕರೆನ್ಸಿಯ ವ್ಯವಹಾರದಲ್ಲಿ ತೊಡಗಿದವರ ಮೇಲೆ 25 ಕೋಟಿ ರೂಪಾಯಿವರೆಗೂ ದಂಡ ವಿಧಿಸಬೇಕು. ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಬೇಕೆಂದು ಹೇಳಿತ್ತು. ಆದರೆ, ಈಗ ಕ್ರಿಪ್ಟೋ ಕರೆನ್ಸಿ ಅಥವಾ ಡಿಜಿಟಲ್ ಕರೆನ್ಸಿ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಬದಲಾಗಿದ್ದು, ಕ್ರಿಪ್ಟೋ ಕರೆನ್ಸಿಗೆ ಕಾನೂನಿನ ಮಾನ್ಯತೆ, ಮನ್ನಣೆಯನ್ನು ನೀಡಿ, ನಿಯಂತ್ರಣ ಮಾಡುವ ಉದ್ದೇಶವನ್ನು ಹೊಂದಿದೆ.

Aso Read: Bitcoin: ಬಿಟ್​ಕಾಯಿನ್ ಮೌಲ್ಯ 67 ಸಾವಿರ ಡಾಲರ್​ನೊಂದಿಗೆ ಸಾರ್ವಕಾಲಿಕ ಗರಿಷ್ಠ; ಡಿಸೆಂಬರ್ ಹೊತ್ತಿಗೆ 1 ಲಕ್ಷ ಡಾಲರ್ ಸಾಧ್ಯತೆ Aso Read: Cryptocurrency Mining: ಕ್ರಿಪ್ಟೋಕರೆನ್ಸಿ ಮೈನಿಂಗ್​ಗೆ ದೇಶಾದ್ಯಂತ ನಿರ್ಬಂಧ ಹೇರುವುದಾಗಿ ಹೇಳಿದ ಚೀನಾದ ಕೇಂದ್ರ ಬ್ಯಾಂಕ್

(cryptocurrency where does india stand does it chose middle path in winter session of Parliament)

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ