Cryptocurrency Mining: ಕ್ರಿಪ್ಟೋಕರೆನ್ಸಿ ಮೈನಿಂಗ್ಗೆ ದೇಶಾದ್ಯಂತ ನಿರ್ಬಂಧ ಹೇರುವುದಾಗಿ ಹೇಳಿದ ಚೀನಾದ ಕೇಂದ್ರ ಬ್ಯಾಂಕ್
ಚೀನಾದ ಕೇಂದ್ರ ಬ್ಯಾಂಕ್ನಿಂದ ದೇಶದ್ಯಾಂತ ಕ್ರಿಪ್ಟೋಕರೆನ್ಸಿ ಮೈನಿಂಗ್ ನಿಷೇಧಿಸುವುದಾಗಿ ಘೋಷಣೆ ಮಾಡಲಾಗಿದೆ.
ಬಿಟ್ ಕಾಯಿನ್ ಮತ್ತು ಇತರ ವರ್ಚುವಲ್ ಕರೆನ್ಸಿಗಳ ವ್ಯಾಪಾರದಲ್ಲಿ “ಕಾನೂನುಬಾಹಿರ” ಚಟುವಟಿಕೆಯನ್ನು ಬುಡ ಸಮೇತ ಕಿತ್ತೊಗೆಯುವ ನಿಟ್ಟಿನಲ್ಲಿ ಕ್ರಿಪ್ಟೋ ಕರೆನ್ಸಿ ಮೈನಿಂಗ್ ಮೇಲೆ ದೇಶಾದ್ಯಂತ ನಿಷೇಧವನ್ನು ಹೊರಡಿಸುವುದಾಗಿ ಹೇಳಿತ್ತು. ಚೀನಾವು ಕ್ರಿಪ್ಟೋಕರೆನ್ಸಿ ವಹಿವಾಟಿನ ಮೇಲೆ ಶುಕ್ರವಾರ ಕಠಿಣ ಕ್ರಮವನ್ನು ತೀವ್ರಗೊಳಿಸಿದೆ. ಚೀನಾದ ರಾಜ್ಯ ಮಂಡಳಿ ಅಥವಾ ಸಂಪುಟವು ಆರ್ಥಿಕ ಅಪಾಯವನ್ನು ತಪ್ಪಿಸುವ ಪ್ರಯತ್ನಗಳ ಭಾಗವಾಗಿ ಬಿಟ್ ಕಾಯಿನ್ ಮೈನಿಂಗ್ ಮತ್ತು ವಹಿವಾಟನ್ನು ನಿಗ್ರಹಿಸಲು ಮೇ ತಿಂಗಳಲ್ಲಿ ಮಾತು ನೀಡಿತು. ಕೇಂದ್ರೀಯ ಬ್ಯಾಂಕ್ ಸೇರಿದಂತೆ ಬ್ಯಾಂಕಿಂಗ್, ಸೆಕ್ಯೂರಿಟೀಸ್ ಮತ್ತು ವಿದೇಶಿ ವಿನಿಮಯ ನಿಯಂತ್ರಕರು ಸೇರಿದಂತೆ ಹತ್ತು ಚೀನೀ ಸರ್ಕಾರಿ ಸಂಸ್ಥೆಗಳು ಜಂಟಿ ಹೇಳಿಕೆಯಲ್ಲಿ ಕ್ರಿಪ್ಟೋಕರೆನ್ಸಿಗಳ ಸಟ್ಟಾ ವಹಿವಾಟಿನ ಮೇಲೆ “ಹೆಚ್ಚಿನ-ಒತ್ತಡ” ಹಾಕುವ ದಮನ ಕಾರ್ಯವನ್ನು ಮಾಡುವುದಾಗಿ ಹೇಳಿದ್ದವು.
ಸಾಂಪ್ರದಾಯಿಕ ಕರೆನ್ಸಿಗಳಂತೆ ಕ್ರಿಪ್ಟೋಕರೆನ್ಸಿಗಳು ಮಾರುಕಟ್ಟೆಯಲ್ಲಿ ಚಲಾವಣೆ ಆಗಬಾರದು ಮತ್ತು ಸಾಗರೋತ್ತರ ವಿನಿಮಯಗಳು ಇಂಟರ್ನೆಟ್ ಮೂಲಕ ಮುಖ್ಯ ಹೂಡಿಕೆದಾರರಿಗೆ ಸೇವೆಗಳನ್ನು ಒದಗಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (PBOC) ಹೇಳಿದೆ.
ಹಣಕಾಸು ಸಂಸ್ಥೆಗಳು, ಪಾವತಿ ಕಂಪೆನಿಗಳು ಮತ್ತು ಇಂಟರ್ನೆಟ್ ಸಂಸ್ಥೆಗಳು ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಅನ್ನು ಸುಗಮಗೊಳಿಸದಂತೆ PBOC ನಿರ್ಬಂಧಿಸಿದೆ. ಜನರ ಆಸ್ತಿಗಳನ್ನು ರಕ್ಷಿಸಲು ಮತ್ತು ಆರ್ಥಿಕ, ಹಣಕಾಸು ಮತ್ತು ಸಾಮಾಜಿಕ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಸರ್ಕಾರವು “ವಾಸ್ತವ ಕರೆನ್ಸಿ ಸಟ್ಟಾ ಮತ್ತು ಸಂಬಂಧಿತ ಹಣಕಾಸು ಚಟುವಟಿಕೆಗಳು ಮತ್ತು ದುರ್ನಡತೆಯನ್ನು ದೃಢವಾಗಿ ನಿಗ್ರಹಿಸುತ್ತದೆ,” ಎಂದು ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಅಭಿವೃದ್ಧಿ ಮತ್ತು ಸುಧಾರಣಾ ಆಯೋಗವು ಕ್ರಿಪ್ಟೋಕರೆನ್ಸಿ ಗಣಿಗಾರಿಕೆಯ ಮೇಲೆ ರಾಷ್ಟ್ರವ್ಯಾಪಿ ಕಾರ್ಯಾಚರಣೆ ಆರಂಭಿಸುತ್ತಿದೆ ಎಂದು ಹೇಳಿದೆ. ಹಿಂದಿನ ನಿರ್ಬಂಧಗಳನ್ನು ಸ್ಥಳೀಯ ಸರ್ಕಾರಗಳು ಹೊರಡಿಸಿವೆ. PBOCಯ ಪ್ರಕಟಣೆಯ ನಂತರ ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿಯಾದ ಬಿಟ್‌ಕಾಯಿನ್ ಸುಮಾರು ಶೇ 5ರಷ್ಟು ಕಡಿಮೆ ಆಯಿತು ಮತ್ತು ಆ ಘೋಷಣೆಗೂ ಮುನ್ನ ಶೇ 1ರಷ್ಟು ಕಡಿಮೆ ಆಗಿತ್ತು.
ಇದನ್ನೂ ಓದಿ: Bitcoin Price Today: ಎವರ್ಗ್ರ್ಯಾಂಡ್ ಹೊಡೆತಕ್ಕೆ ಬಿಟ್‌ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯೇ ಥಂಡಾ ಥಂಡಾ
(China Central Bank Announced Nationwide Cryptocurrency Mining Ban)