AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ಸಾವಿರ ಕೋಟಿ ರೂ. ಮೌಲ್ಯದ 56 ಏರ್ ಬಸ್ C295MW ವಿಮಾನ ಖರೀದಿ ಅಧಿಕೃತಗೊಳಿಸಿದ ಭಾರತ

ಬೆಂಗಳೂರು: ಭಾರತೀಯ ವಾಯಪಡೆಯು (IAF) AVRO ಫ್ಲೀಟ್ ಬದಲಿಗೆ 20 ಸಾವಿರ ಕೋಟಿ ರೂ. ಮೌಲ್ಯದ 56 ಏರ್ ಬಸ್ C295MW ವಿಮಾನಗಳನ್ನು ಖರೀದಿಸುವುದನ್ನು ಭಾರತ ಅಧಿಕೃತಗೊಳಿಸಿದೆ. ಖಾಸಗಿ ಕ್ಷೇತ್ರದಲ್ಲಿ ಇದು ಮೊದಲ “ಮೇಕ್ ಇನ್ ಇಂಡಿಯಾ” ಏರೋಸ್ಪೇಸ್ ಕಾರ್ಯಕ್ರಮವಾಗಿದೆ. ಇದು ಸಂಪೂರ್ಣವಾಗಿ ಕೈಗಾರಿಕಾ ಪರಿಸರ ವ್ಯವಸ್ಥೆಯ ಪರಿಪೂರ್ಣವಾದ ಅಭಿವೃದ್ಧಿಯನ್ನು ಒಳಗೊಂಡಿದೆ. ಉತ್ಪಾದನೆಯಿಂದ ಜೋಡಣೆ, ಪರೀಕ್ಷೆ ಮತ್ತು ಅರ್ಹತೆ, ವಿಮಾನದ ಸಂಪೂರ್ಣ ಲೈಫ್​ಸೈಕಲ್ ವಿತರಣೆ ಹಾಗೂ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಈ ಒಪ್ಪಂದದ ಅಡಿ ಏರ್ ಬಸ್ ಸ್ಪೇನ್​ನಲ್ಲಿರುವ […]

20 ಸಾವಿರ ಕೋಟಿ ರೂ. ಮೌಲ್ಯದ 56 ಏರ್ ಬಸ್ C295MW ವಿಮಾನ ಖರೀದಿ ಅಧಿಕೃತಗೊಳಿಸಿದ ಭಾರತ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Sep 24, 2021 | 2:31 PM

Share

ಬೆಂಗಳೂರು: ಭಾರತೀಯ ವಾಯಪಡೆಯು (IAF) AVRO ಫ್ಲೀಟ್ ಬದಲಿಗೆ 20 ಸಾವಿರ ಕೋಟಿ ರೂ. ಮೌಲ್ಯದ 56 ಏರ್ ಬಸ್ C295MW ವಿಮಾನಗಳನ್ನು ಖರೀದಿಸುವುದನ್ನು ಭಾರತ ಅಧಿಕೃತಗೊಳಿಸಿದೆ. ಖಾಸಗಿ ಕ್ಷೇತ್ರದಲ್ಲಿ ಇದು ಮೊದಲ “ಮೇಕ್ ಇನ್ ಇಂಡಿಯಾ” ಏರೋಸ್ಪೇಸ್ ಕಾರ್ಯಕ್ರಮವಾಗಿದೆ. ಇದು ಸಂಪೂರ್ಣವಾಗಿ ಕೈಗಾರಿಕಾ ಪರಿಸರ ವ್ಯವಸ್ಥೆಯ ಪರಿಪೂರ್ಣವಾದ ಅಭಿವೃದ್ಧಿಯನ್ನು ಒಳಗೊಂಡಿದೆ. ಉತ್ಪಾದನೆಯಿಂದ ಜೋಡಣೆ, ಪರೀಕ್ಷೆ ಮತ್ತು ಅರ್ಹತೆ, ವಿಮಾನದ ಸಂಪೂರ್ಣ ಲೈಫ್​ಸೈಕಲ್ ವಿತರಣೆ ಹಾಗೂ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಈ ಒಪ್ಪಂದದ ಅಡಿ ಏರ್ ಬಸ್ ಸ್ಪೇನ್​ನಲ್ಲಿರುವ ಸೆವಿಲ್ಲೆಯ ತನ್ನ ಅಂತಿಮ ಜೋಡಣೆ ಮಾರ್ಗದ ಮೂಲಕ ಹಾರಾಟಕ್ಕೆ ಸಿದ್ಧವಾಗಿರುವ 16 ವಿಮಾನಗಳನ್ನು ಪೂರೈಕೆ ಮಾಡಲಿದೆ. ಆ ನಂತರದ 40 ವಿಮಾನಗಳನ್ನು ಭಾರತದಲ್ಲಿನ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ನಲ್ಲಿ ಉತ್ಪಾದನೆ ಮತ್ತು ಜೋಡಣೆ ಮಾಡಿ, ವಿತರಣೆ ಮಾಡಲಾಗುತ್ತದೆ. ಎರಡೂ ಕಂಪೆನಿಗಳ ಮಧ್ಯೆ ಮಾಡಿಕೊಂಡಿರುವ ಕೈಗಾರಿಕಾ ಪಾಲುದಾರಿಕೆ ಪ್ರಕಾರ ಈ ಪ್ರಕ್ರಿಯೆ ನಡೆಯಲಿದೆ.

ಒಪ್ಪಂದ ಜಾರಿಗೆ ಬಂದ ದಿನದಿಂದ 4 ವರ್ಷಗಳ ಅವಧಿಯಲ್ಲಿ ಮೊದಲ 16 ವಿಮಾನಗಳು ವಿತರಣೆ ಮಾಡಲಾಗುತ್ತದೆ. ಎಲ್ಲ ಐಎಎಫ್ C295MW ವಿಮಾನಗಳನ್ನು ದೇಶೀಯವಾಗಿ ತಯಾರಿಸುವ ಎಲೆಕ್ಟ್ರಾನಿಕ್ ವಾರ್ ಫೇರ್ ಸೂಟ್​ನೊಂದಿಗೆ ಸುಸಜ್ಜಿತಗೊಳಿಸಿ, ಹಸ್ತಾಂತರ ಮಾಡಲಾಗುತ್ತದೆ. ಈ ಬಗ್ಗೆ ಮಾತನಾಡಿದ ಏರ್ ಬಸ್ ಡಿಫೆನ್ಸ್ ಅಂಡ್ ಸ್ಪೇಸ್ ಸಿಇಒ ಮೈಕೆಲ್ ಶೋಲ್ಹಾರ್ನ್, “ಮುಂದಿನ 10 ವರ್ಷಗಳಲ್ಲಿ ಭಾರತದ ಏರೋಸ್ಪೇಸ್ ಎಕೋ ಸಿಸ್ಟಮ್​ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಈ ಒಪ್ಪಂದವು ಬೆಂಬಲ ನೀಡುತ್ತದೆ. ಇದರ ಜೊತೆಗೆ ಈ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಬರುವಂತೆ ಮಾಡುತ್ತದೆ ಹಾಗೂ 15,000 ಅತ್ಯುತ್ತಮ ಕೌಶಲಭರಿತ ನೇರ ಉದ್ಯೋಗಗಳು ಹಾಗೂ 10,000ದಷ್ಟು ಪರೋಕ್ಷ ಉದ್ಯೋಗಗಳನ್ನು ಸೃಜಿಸುತ್ತದೆ. C295MW ಈ ವಿಭಾಗದ ಮುಂಚೂಣಿಯಲ್ಲಿರುವುದು ಮತ್ತೊಮ್ಮೆ ಸಾಬೀತಾಗಿದೆ ಮತ್ತು ಭಾರತವನ್ನು ಹೊಸ ಆಪರೇಟರ್ ಆಗಿ ಸೇರಿದ ನಂತರ, ಈ ಪ್ರಕಾರವು ತನ್ನ ಹೆಜ್ಜೆ ಗುರುತುಗಳನ್ನು ಮತ್ತಷ್ಟು ವಿಸ್ತರಣೆ ಮಾಡುತ್ತದೆ. ಇದು ಕೇವಲ ಕಾರ್ಯಾಚರಣೆಯ ಅಂಶಗಳ ಮೇಲೆ ಮಾತ್ರವಲ್ಲದೇ ತನ್ನದೇ ಕೈಗಾರಿಕಾ ಮತ್ತು ತಾಂತ್ರಿಕ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ,” ಎಂದು ಅವರು ಹೇಳಿದ್ದಾರೆ.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್)ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕರನ್ ಸಿಂಗ್ ಅವರು ಮಾತನಾಡಿ, ಇದು ಟಾಟಾಗೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಭಾರತೀಯ ಸೇನಾ ಉತ್ಪಾದನಾ ಕ್ಷೇತ್ರದಲ್ಲಿ ಒಂದು ಹೊಸ ಮೈಲುಗಲ್ಲಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಖಾಸಗಿ ಕಂಪೆನಿಯೊಂದು ಸ್ವದೇಶದಲ್ಲಿಯೇ ಸಂಪೂರ್ಣವಾಗಿ ವಿಮಾನವನ್ನು ತಯಾರಿಸುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಈ ಪ್ರಯತ್ನವು ಭಾರತದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಸಂಕೀರ್ಣವಾದ ಪ್ಲಾಟ್ ಫಾರ್ಮ್​ಗಳನ್ನು ಸೃಷ್ಟಿಸಲು ರಕ್ಷಣಾ ಉತ್ಪಾದಕ ಸಂಸ್ಥೆಯಾಗಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಗೆ ಹೆಮ್ಮೆ ಎನಿಸುತ್ತಿದೆ ಎಂದು ತಿಳಿಸಿದ್ದಾರೆ.

“ಮೇಕ್ ಇನ್ ಇಂಡಿಯಾ” ಭಾರತದಲ್ಲಿ ಏರ್ ಬಸ್ ಕಾರ್ಯತಂತ್ರದ ಹೃದಯಭಾಗದಂತಿದೆ, ಕಂಪೆನಿಯು ತನ್ನ ಜಾಗತಿಕ ಉತ್ಪನ್ನ ಬಂಡವಾಳಕ್ಕೆ ದೇಶದ ಕೊಡುಗೆಯನ್ನು ನಿರಂತರವಾಗಿ ಹೆಚ್ಚಿಸುತ್ತದೆ. C295MW ಕಾರ್ಯಕ್ರಮವು ಏರ್ ಬಸ್ ತನ್ನ ಸಂಪೂರ್ಣವಾದ ವಿಶ್ವದರ್ಜೆಯ ವಿಮಾನ ತಯಾರಿಕೆ ಮತ್ತು ಸೇವೆಗಳನ್ನು ನಮ್ಮ ಕೈಗಾರಿಕಾ ಪಾಲುದಾರರ ಸಹಯೋಗದೊಂದಿಗೆ ಭಾರತಕ್ಕೆ ತರುವುದನ್ನು ಎದುರು ನೋಡುತ್ತದೆ. ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಹೊರತಾಗಿ ಟಾಟಾ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಭಾರತ್ ಡೈನಾಮಿಕ್ ಲಿಮಿಟೆಡ್​ನಂತಹ ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಘಟಕಗಳಾಗಿವೆ.

ಏರ್ ಬಸ್ ಕುರಿತು ಸುರಕ್ಷಿತ ಮತ್ತು ಏಕೀಕೃತವಾದ ಜಗತ್ತಿಗಾಗಿ ಸುಸ್ಥಿರವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದರಲ್ಲಿ ಏರ್ ಬಸ್ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಏರೋಸ್ಪೇಸ್, ರಕ್ಷಣೆ ಮತ್ತು ಸಂಬಂಧಿತ ಸೇವೆಗಳಲ್ಲಿ ಸಮರ್ಥ ಮತ್ತು ತಾಂತ್ರಿಕವಾಗಿ ಸುಧಾರಿತ ಸಲ್ಯೂಷನ್​ಗಳನ್ನು ಒದಗಿಸುವತ್ತ ಕಂಪೆನಿಯು ನಿರಂತರವಾಗಿ ಹೊಸತನವನ್ನು ನೀಡುತ್ತಾ ಬಂದಿದೆ. ವಾಣಿಜ್ಯ ವಿಮಾನ ಕ್ಷೇತ್ರದಲ್ಲಿ ಏರ್ ಬಸ್ ಅತ್ಯಾಧುನಿಕ ಮತ್ತು ಇಂಧನ ಕ್ಷಮತೆಯ ವಿಮಾನಗಳನ್ನು ಮತ್ತು ಸಂಬಂಧಿತ ಸೇವೆಗಳನ್ನು ನೀಡುತ್ತಿದೆ. ಏರ್ ಬಸ್ ರಕ್ಷಣೆ ಮತ್ತು ಭದ್ರತೆ ವಿಭಾಗದಲ್ಲಿ ಯೂರೋಪಿನ ನಾಯಕನೆನಿಸಿದೆ ಮತ್ತು ವಿಶ್ವದಲ್ಲಿ ಏರೋಸ್ಪೇಸ್ ವ್ಯವಹಾರಗಳಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಹೆಲಿಕಾಪ್ಟರ್ ವಿಭಾಗದಲ್ಲಿ ಏರ್ ಬಸ್ ಜಗತ್ತಿನಾದ್ಯಂತ ಅತ್ಯಂತ ದಕ್ಷತೆಯ ನಾಗರಿಕ ಮತ್ತು ಮಿಲಿಟರಿ ರೋಟೋಕ್ರಾಫ್ಟ್ ಸಲ್ಯೂಷನ್​ಗಳು ಮತ್ತು ಸೇವೆಗಳನ್ನು ನೀಡುತ್ತಿದೆ.

ಇದನ್ನೂ ಓದಿ: Tata- Airbus Deal: ಇದೇ ಮೊದಲ ಬಾರಿಗೆ ಖಾಸಗಿ ವಲಯದ ಟಾಟಾ- ಏರ್​ಬಸ್​ಗೆ ಮಿಲಿಟರಿ ವೈಮಾನಿಕ ಡೀಲ್

(Airbus- Tata Aerospace Deal Officially Finalised By Government Of India)

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್