ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರಿಂದ ಇನ್ಷೂರೆನ್ಸ್​ಗಾಗಿ ಅರ್ಜಿ ಸ್ವೀಕಾರ; ಆದರೆ ಹಿರಿಯರ ಬಗ್ಗೆ ಯಾಕಿಷ್ಟು ತಾತ್ಸಾರ?

ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರಿಂದ ಇನ್ಷೂರೆನ್ಸ್​ ಮೊತ್ತಕ್ಕೆ ಅರ್ಜಿ ಸ್ವೀಕರಿಸಲಾಗುತ್ತದೆ. ಆದರೆ ಹೀಗೆ ಹಿರಿಯರನ್ನು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಿಸುವುದು ಸರಿಯಲ್ಲ.

ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರಿಂದ ಇನ್ಷೂರೆನ್ಸ್​ಗಾಗಿ ಅರ್ಜಿ ಸ್ವೀಕಾರ; ಆದರೆ ಹಿರಿಯರ ಬಗ್ಗೆ ಯಾಕಿಷ್ಟು ತಾತ್ಸಾರ?
ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರು
Follow us
Srinivas Mata
|

Updated on: Sep 24, 2021 | 10:31 PM

“ಗುರು ರಾಘವೇಂದ್ರ ಕೋ ಆಪರೇಟಿವ್​ ಬ್ಯಾಂಕ್​ನಿಂದ ಠೇವಣಿ ಪಡೆಯುವಾಗ ಆಯಾ ಶಾಖೆಗಳಲ್ಲೇ ತೆಗೆದುಕೊಂಡರು. ಈಗ ಠೇವಣಿ ಮೇಲಿನ ಇನ್ಷೂರೆನ್ಸ್​ ಪಡೆಯುವುದಕ್ಕೆ ಅರ್ಜಿ ಕೊಡುವ ಸಲುವಾಗಿ ಎನ್​.ಆರ್​. ಕಾಲೋನಿಯಲ್ಲಿನ ಕೇಂದ್ರ ಕಚೇರಿಗೇ ಬರಬೇಕು. ಇಡೀ ದಿನ ಸಾಲುಗಟ್ಟಿ ಗ್ರಾಹಕರು ಹಾಗೇ ನಿಂತಿರುತ್ತಾರೆ. ಅಲ್ಲಿ ನಿಂತವರ ಪೈಕಿ ಬಹುಪಾಲು ಹಿರಿಯ ನಾಗರಿಕರೇ ಇದ್ದಾರೆ. ಕೊಟ್ಟ ಹಣ ವಾಪಸ್​ ಬರುತ್ತೋ ಇಲ್ಲವೋ ಅನ್ನೋ ಆತಂಕದಲ್ಲೇ ದಿನ ದೂಡಿದವರಿಗೆ ಈಗ ಅದನ್ನು ಪಡೆಯುವುದಕ್ಕಾದರೂ ಒಂದಿಷ್ಟು ಸರಳ ಮಾರ್ಗೋಪಾಯಗಳನ್ನು ಮಾಡಬಾರದಿತ್ತಾ? ಯಾರಾದರೂ ಸಂಬಂಧಪಟ್ಟವರು ಠೇವಣಿದಾರರ ಈ ಸಂಕಷ್ಟದ ಕಡೆಗೆ ಗಮನ ಹರಿಸುತ್ತಾರಾ ನೋಡಬೇಕು,” ಹೀಗೆ ಹೇಳಿ ಒಮ್ಮೆ ನಿಡುಸುಯ್ದುರು ಗುರು ರಾಘವೇಂದ್ರ ಬ್ಯಾಂಕ್​ನ ಠೇವಣಿದಾರರಲ್ಲಿ ಒಬ್ಬರಾದ ಸತೀಶ್ ಕಾರಂತ್.

ಅವರ ಕಾಳಜಿಯಲ್ಲಿ ನೂರಕ್ಕೆ ನೂರರಷ್ಟು ಸತ್ಯ ಇತ್ತು. ಗುರು ರಾಘವೇಂದ್ರ ಬ್ಯಾಂಕ್​ನಲ್ಲಿ ಹಣ ಇಟ್ಟಿದ್ದವರಿಂದ ಠೇವಣಿ ಮೇಲಿನ ಇನ್ಷೂರೆನ್ಸ್​ಗಾಗಿ ಅರ್ಜಿ ಪಡೆಯಲಾಗುತ್ತಿದೆ. ವಿದ್ಯಾರಣ್ಯಪುರ ಸೇರಿದಂತೆ ಬೆಂಗಳೂರಿನ ನಾನಾ ಕಡೆ ಶಾಖೆಗಳಿದ್ದ ಬ್ಯಾಂಕ್​ ಈಗ ಅಲ್ಲೆಲ್ಲೂ ಕಾರ್ಯ ನಿರ್ವಹಿಸುತ್ತಿಲ್ಲ. ಯಾರ್ಯಾರು ಬ್ಯಾಂಕ್​ನಲ್ಲಿ ಹಣ ಇಟ್ಟಿದ್ದರೋ ಅಂಥವರಿಗೆ 5 ಲಕ್ಷ ರೂಪಾಯಿಯೊಳಗೆ ಮೊತ್ತವನ್ನು (ಇನ್ಷೂರೆನ್ಸ್) ನೀಡಲಾಗುತ್ತದೆ. ಅದು ಕೂಡ ಡಿಐಸಿಜಿಸಿಯಿಂದ ಆ ಮೊತ್ತ ಸಿಗುತ್ತದೆ. ಅದಕ್ಕಾಗಿ ಠೇವಣಿದಾರರು ಬ್ಯಾಂಕ್​ಗೆ ತೆರಳಿ ಅರ್ಜಿ ಸಲ್ಲಿಸಬೇಕು. ಅಂದಹಾಗೆ ಗುರು ರಾಘವೇಂದ್ರ ಕೋ ಆಪರೇಟಿವ್​ ಬ್ಯಾಂಕ್​ನಲ್ಲಿ ಹಣ ಇಟ್ಟವರ ಪೈಕಿ ದೊಡ್ಡ ಸಂಖ್ಯೆಯಲ್ಲಿ ಇರುವವರು ಹಿರಿಯ ನಾಗರಿಕರು.

ಬೆಂಗಳೂರಿನ ಯಾವ್ಯಾವುದೋ ಮೂಲೆಯಿಂದ ಬಂದು ಬ್ಯಾಂಕ್​ನ ಮುಂದೆ ಸಾಲುಗಟ್ಟಿ ನಿಂತು, ಅರ್ಜಿ ಸಲ್ಲಿಸಬೇಕು. ಈಗಿನ ಕೊರೊನಾ ಸನ್ನಿವೇಶದಲ್ಲಿ ಬೇರೆ ಯಾವುದಾದರೂ ಪರ್ಯಾಯ ವ್ಯವಸ್ಥೆ ಮಾಡುವುದಕ್ಕೆ ಬ್ಯಾಂಕ್​ಗೆ ನೇಮಿಸಿರುವ ಆಡಳಿತಾಧಿಕಾರಿಯಿಂದ ಸಾಧ್ಯವೇ ಎಂದು ಆಲೋಚಿಸಬೇಕು. ಡಿಐಸಿಜಿಸಿಯಿಂದ ಇನ್ಷೂರೆನ್ಸ್​ ಸಿಗುತ್ತಿರುವುದೇ ದೊಡ್ಡ ಸಂಗತಿ ಎಂದು ಬಿಂಬಿಸುವ ಮೊದಲಿಗೆ ಅದನ್ನು ವಿತರಿಸುವುದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಲಿ. ರೀತಿ- ರಿವಾಜುಗಳು ಏನೇ ಇರಲಿ, ಹಿರಿಯರನ್ನು ಹಾಗೇ ಗಂಟೆಗಟ್ಟಲೆ ನಿಲ್ಲಿಸಿ, ಎಲ್ಲೆಲ್ಲಿಂದಲೋ ಬರುವಂತೆ ಮಾಡುವುದು ಎಷ್ಟು ಸರಿ?

ಇವತ್ತಿನ ಕೊರೊನಾ ಸನ್ನಿವೇಶ ಹಾಗೂ ಗ್ರಾಹಕರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಇರುವವರ ವಯಸ್ಸು ಮತ್ತಿತರ ಕಾರಣಗಳನ್ನು ಗಮನಿಸಿಯಾದರೂ ಸದ್ಯದ ಆಡಳಿತ ಮಂಡಳಿಯಿಂದ ಈ ಅರ್ಜಿ ಸ್ವೀಕಾರ ಕ್ರಮದಲ್ಲಿ ಬದಲಾವಣೆ ಆಗಲೇಬೇಕು. ತಮ್ಮ ಹಣ ಬರುತ್ತದೋ ಇಲ್ಲವೋ ಎಂದು ಈಗಾಗಲೇ ನೊಂದಿರುವರನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕಾಗಿರುವುದು ಕರ್ತವ್ಯ. ಬ್ಯಾಂಕ್​ಗೆ ಸಂಬಂಧಿಸಿದವರಾಗಲೀ ಆರ್​ಬಿಐನಿಂದಾಗಲೀ ಈ ಬಗ್ಗೆ ಸೂಕ್ತ ಚಿಂತನೆ ನಡೆಯಬೇಕು. ಇನ್ಷೂರೆನ್ಸ್​ ಮೂಲಕ ಠೇವಣಿ ಹಣ ಮತ್ತು ಬಡ್ಡಿ ಬರುವುದು ಸಂತೋಷದ ವಿಚಾರವೇ. ಆದರೆ ಹೀಗೆ ಗಂಟೆಗಟ್ಟಲೆ ನಿಲ್ಲುವಂತೆ ಮಾಡುವುದು ಅಮಾನವೀಯ.

ಇದನ್ನೂ ಓದಿ: ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಶುಭಸುದ್ದಿ; ನವೆಂಬರ್​ ಒಳಗೆ ಠೇವಣಿ ಮೇಲಿನ ವಿಮಾ ಹಣ ಗ್ರಾಹಕರಿಗೆ ಲಭ್ಯ

TV9 Facebook Live: ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರು ಇನ್​ಕಮ್​ ಟ್ಯಾಕ್ಸ್​ ಸಮಸ್ಯೆ ಹೀಗೆ ಬಗೆಹರಿಸಿಕೊಳ್ಳಿ

(Guru Raghavendra Co Operative Bank Administrators Should Find Alternative Way To Accept Deposit Insurance Applications)

ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ