ಚಿಕ್ಕಬಳ್ಳಾಪುರ: ಲಾಂಗ್ನಿಂದ ಕೊಚ್ಚಿ ಜೆಡಿಎಸ್ ಮುಖಂಡನ ಬರ್ಬರ ಕೊಲೆ
ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿ ಜೆಡಿಎಸ್ ಮುಖಂಡನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ತಮ್ಮನಾಯಕನಹಳ್ಳಿ ಗೇಟ್ ಬಳಿ ಶುಕ್ರವಾರ ನಡೆದಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮತ್ತು ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರ, ಜನವರಿ 04: ಚಿಕ್ಕಬಳ್ಳಾಪುರದ (Chikkaballapur) ತಮ್ಮನಾಯಕನಹಳ್ಳಿ ಗೇಟ್ ಬಳಿ ಲಾಂಗ್ನಿಂದ ಕೊಚ್ಚಿ ಜೆಡಿಎಸ್ (JDS) ಮುಖಂಡನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಜೆಡಿಎಸ್ ಮುಖಂಡ, ತಮ್ಮನಾಯಕನಹಳ್ಳಿ ಗ್ರಾಮದ ವೆಂಕಟೇಶ್ ಕೊಲೆಯಾದ ದುರ್ದೈವಿ.
ವೆಂಕಟೇಶ್ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ತಮ್ಮನಾಯ್ಕನಹಳ್ಳಿ ಗೆಟ್ ಬಳಿ ಇದ್ದ ಮೆಡಿಕಲ್ ಶಾಪ್ನಿಂದ ಬೈಕ್ನಲ್ಲಿ ವಾಪಸ್ ಮನೆಗೆ ಹೊರಟಿದ್ದರು. ದಾರಿ ಮಧ್ಯೆ ವೆಂಕಟೇಶ್ನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಅವರ ಮೈ-ಕೈ, ಬೆನ್ನು ಮತ್ತು ಹೊಟ್ಟೆಗೆ ಹಿಗ್ಗಾ ಮುಗ್ಗಾ ಲಾಂಗ್ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ: ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಗಂಡು ಮಕ್ಕಳು ಸಾವು
ಇನ್ನೂ ವೆಂಕಟೇಶ ಜೆಡಿಎಸ್ನಲ್ಲಿ ಸಕ್ರಿಯರಾಗಿದ್ದರು. ಕೃಷಿಕರಾಗಿದ್ದ ವೆಂಕಟೇಶ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರಂತೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನೀಖೆ ಆರಂಭಿಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಕೊಲೆ ಹಂತಕರ ಜಾಡು ಪರಿಶೀಲನೆ ನಡೆಸಿದೆ. . ವಿಚಾರ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮತ್ತು ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂರು ದಿನಗಳ ಹಿಂದೆ ತಮ್ಮನಾಯ್ಕನಹಳ್ಳಿ ಗೆಟ್ ಬಳಿ ಇರುವ ಬಾರ್ ಹತ್ತಿರ ಕೆಲವರು ಕುಡಿದು ಗಲಾಟೆ ಮಾಡುತ್ತಿದ್ದರಂತೆ. ಆಗ ವೆಂಕಟೇಶ್ ಅವರಿಗೆ ಬೈಯ್ದು ಬುದ್ದಿವಾದ ಹೇಳಿದ್ದರು. ಆಗ ಪುಂಡರು ವೆಂಕಟೇಶ್ರ ಜೊತೆ ಗಲಾಟೆ ತೆಗೆಯಲು ಮುಂದಾಗಿದ್ದರಂತೆ. ಇದನ್ನು ಬಿಟ್ಟರೆ ವೆಂಕಟೇಶ್ ಅವರಿಗೆ ಯಾರು ವೈರಿಗಳು ಇರಲಿಲ್ಲ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 am, Sat, 4 January 25