ಉತ್ತರ ಪ್ರದೇಶದ ಮಾಜಿ ಸಿಎಂ, ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ; ಶೀಘ್ರ ಗುಣಮುಖರಾಗಲು ಮೋದಿ ಪ್ರಾರ್ಥನೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 09, 2021 | 11:39 AM

Kalyan Singh: ಕಲ್ಯಾಣ್ ಸಿಂಗ್ ಜಿ ಶೀಘ್ರವಾಗಿ ಗುಣಮುಖರಾಗಬೇಕೆಂದು ಭಾರತದಾದ್ಯಂತ ಅಸಂಖ್ಯಾತ ಜನರು ಪ್ರಾರ್ಥಿಸುತ್ತಿದ್ದಾರೆ. ನಿನ್ನೆ ಜೆ.ಪಿ ನಡ್ಡಾ, ಯೋಗಿ ಆದಿತ್ಯನಾಥ ಮತ್ತು ಇತರರು ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋದರು. ನಾನು ಅವರ ಮೊಮ್ಮಗನೊಂದಿಗೆ ಮಾತನಾಡಿದ್ದೇನೆ ಮತ್ತು ಅವರ ಆರೋಗ್ಯದ ಬಗ್ಗೆ ವಿಚಾರಿಸಿದೆ ”ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಮಾಜಿ ಸಿಎಂ, ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ; ಶೀಘ್ರ ಗುಣಮುಖರಾಗಲು ಮೋದಿ ಪ್ರಾರ್ಥನೆ
ಆಸ್ಪತ್ರೆಯಲ್ಲಿ ಕಲ್ಯಾಣ್ ಸಿಂಗ್
Follow us on

ದೆಹಲಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಕಲ್ಯಾಣ್ ಸಿಂಗ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಕೊಂಚ  ಸುಧಾರಿಸಿದೆ. ಕಲ್ಯಾಣ್ ಸಿಂಗ್ ಅನಾರೋಗ್ಯದ ಬಗ್ಗೆ ಅವರ ಮೊಮ್ಮಗನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಚಾರಿಸಿದ್ದು, ಸಿಂಗ್ ಶೀಘ್ರ ಚೇತರಿಕೆಗಾಗಿ ದೇಶಾದ್ಯಂತ ಅಸಂಖ್ಯಾತ ಜನರು ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಿದರು.

ತೀವ್ರ ನಿಗಾ ಘಟಕಕ್ಕೆ ದಾಖಲಾದ 89 ವರ್ಷದ ಸಿಂಗ್ ಅವರನ್ನು ಭೇಟಿ ಮಾಡಲು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಇತರ ಬಿಜೆಪಿ ಮುಖಂಡರು ಗುರುವಾರ ಲಖನೌದಲ್ಲಿನ ಸಂಜಯ್ ಗಾಂಧಿ ಪಿಜಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿದ್ದರು. ಸಿಂಗ್ ಐಸಿಯುನಲ್ಲಿದ್ದಾರೆ.

ಕಲ್ಯಾಣ್ ಸಿಂಗ್ ಜಿ ಶೀಘ್ರವಾಗಿ ಗುಣಮುಖರಾಗಬೇಕೆಂದು ಭಾರತದಾದ್ಯಂತ ಅಸಂಖ್ಯಾತ ಜನರು ಪ್ರಾರ್ಥಿಸುತ್ತಿದ್ದಾರೆ. ನಿನ್ನೆ ಜೆ.ಪಿ ನಡ್ಡಾ, ಯೋಗಿ ಆದಿತ್ಯನಾಥ ಮತ್ತು ಇತರರು ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋದರು. ನಾನು ಅವರ ಮೊಮ್ಮಗನೊಂದಿಗೆ ಮಾತನಾಡಿದ್ದೇನೆ ಮತ್ತು ಅವರ ಆರೋಗ್ಯದ ಬಗ್ಗೆ ವಿಚಾರಿಸಿದೆ ”ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.


ಮತ್ತೊಂದು ಟ್ವೀಟ್‌ನಲ್ಲಿ ಪ್ರಧಾನಿ ಮೋದಿ ಅವರು, ಸಿಂಗ್ ಅವರೊಂದಿಗಿನ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡರು. ಜೆ.ಪಿ. ನಡ್ಡಾ ಅವರೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಕಲ್ಯಾಣ್ ಸಿಂಗ್ ಜಿ ನನ್ನನ್ನು ನೆನಪಿಸಿಕೊಂಡಿದ್ದಾರೆ ಎಂದು ತಿಳಿದಾಗ ಮನದುಂಬಿ ಬಂತು. ಕಲ್ಯಾಣ್ ಸಿಂಗ್ ಜಿ ಅವರೊಂದಿಗಿನ ನನ್ನ ಸಂವಾದದ ಬಗ್ಗೆ ನನಗೆ ಅನೇಕ ನೆನಪುಗಳಿವೆ. ಆ ಹಲವಾರು ನೆನಪುಗಳು ಮತ್ತೆ ಮರುಕಳಿಸಿತು. ಅವರೊಂದಿಗಿನ ಮಾತು ಯಾವಾಗಲೂ ಕಲಿಕೆಯ ಅನುಭವವಾಗಿದೆ, ”ಎಂದು ಅವರು ಹೇಳಿದರು.


ಸಿಂಗ್ ಅವರ ಸ್ಥಿತಿ “ಉತ್ತಮವಾಗಿದೆ” ಮತ್ತು ಅವರು ಸ್ವಲ್ಪ ಸುಧಾರಿಸುತ್ತಿದ್ದಾರೆ  ಎಂದು ಆಸ್ಪತ್ರೆ ಮೂಲಗಳು ಹೇಳಿವೆ. “ಕ್ರಿಟಿಕಲ್ ಕೇರ್ ಮೆಡಿಸಿನ್‌ನ (ಸಿಸಿಎಂ) ಐಸಿಯುನಲ್ಲಿ ದಾಖಲಾದ ಕಲ್ಯಾಣ್ ಸಿಂಗ್ ಅವರ ಸ್ಥಿತಿ ಉತ್ತಮವಾಗಿದೆ. ಅವರು ಹಿಮೋಡೈನಮಿಕ್ ಆಗಿ ಸ್ಥಿರವಾಗಿದ್ದಾರೆ. ಅವರೀಗ  ಸ್ಥಿರವಾದ ಸುಧಾರಣೆಯನ್ನು ತೋರಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ:  ಆಮ್ಲಜನಕ ಲಭ್ಯತೆ ಪರಿಶೀಲಿಸಲು ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ನರೇಂದ್ರ ಮೋದಿ

(BJP leader former Uttar Pradesh CM Kalyan Singh condition is better countless people praying for his speedy recovery  tweets PM Modi)

Published On - 11:35 am, Fri, 9 July 21