ಸೈಫ್​ ಅಲಿಖಾನ್​ ಅಭಿನಯದ ತಾಂಡವ್​ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು; ಕ್ಷಮೆಗೆ ಒತ್ತಾಯ

| Updated By: ರಶ್ಮಿ ಕಲ್ಲಕಟ್ಟ

Updated on: Jan 17, 2021 | 6:49 PM

ತಾಂಡವ್​ ವೆಬ್​ ಸೀರಿಸ್​ಗೆ ನಿಷೇಧ ಹೇರುವಂತೆ ಒತ್ತಾಯಿಸಿ, ಬಿಜೆಪಿ ಸಂಸದ ಮನೋಜ್​ ಕೋಟಾಕ್​ ಅವರು, ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್​ಗೆ ಪತ್ರ ಬರೆದಿದ್ದಾರೆ. ಒಟಿಟಿ ಫ್ಲಾಟ್​ಫಾರಂ ನಿಯಂತ್ರಣಕ್ಕೆ ಪ್ರಾಧಿಕಾರ ರಚಿಸುವಂತೆ ಮನವಿ ಮಾಡಿದ್ದಾರೆ.

ಸೈಫ್​ ಅಲಿಖಾನ್​ ಅಭಿನಯದ ತಾಂಡವ್​ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು; ಕ್ಷಮೆಗೆ ಒತ್ತಾಯ
ತಾಂಡವ್​ ವೆಬ್​ಸೀರಿಸ್​ನ ಪೋಸ್ಟರ್​
Follow us on

ಇತ್ತೀಚೆಗಷ್ಟೇ ಅಮೇಜಾನ್​ ಪ್ರೈಮ್​ ವಿಡಿಯೊದಲ್ಲಿ ಬಿಡುಗಡೆಯಾಗಿರುವ, ನಟ ಸೈಫ್​ ಅಲಿಖಾನ್​ ಅಭಿನಯದ ‘ತಾಂಡವ್’​ ವೆಬ್​ ಸೀರಿಸ್​ ವಿರುದ್ಧ ಬಿಜೆಪಿ ನಾಯಕ ರಾಮ್​ ಕದಮ್ ಸೇರಿ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೆಬ್​ ಸರಣಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿದ್ದಾರೆ.

ಅದ್ಯಾಕೆ ಸದಾ ಯಾವುದಾದರೂ ಒಂದು ಸಿನಿಮಾ ಮತ್ತು ವೆಬ್​ ಸೀರಿಸ್​ ಮೂಲಕ ಹಿಂದೂ ದೇವರು, ದೇವತೆಗಳಿಗೆ ಪದೇಪದೆ ಅಗೌರವ ತೋರಲಾಗುತ್ತದೆ? ಈಗ ಅಂಥದ್ದೇ ಒಂದು ವೆಬ್​ ಸರಣಿಯಲ್ಲಿ ಸೈಫ್ ಅಲಿಖಾನ್​ ಪಾತ್ರ ನಿರ್ವಹಿಸಿ, ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟುಮಾಡಿದ್ದಾರೆ. ಈ ವೆಬ್​ ಸೀರಿಸ್​ನಲ್ಲಿ ಶಿವನನ್ನು ತುಂಬ ಹಗುರವಾಗಿ ಚಿತ್ರಿಸಲಾಗಿದೆ. ಈ ಭಾಗವನ್ನು ನಿರ್ದೇಶಕ ಅಲಿ ಅಬ್ಬಾಸ್​ ಜಾಫರ್​ ತೆಗೆದುಹಾಕಬೇಕು ಎಂದು ಕದಮ್​ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ ಇದರಲ್ಲಿ ಇರುವ ಎಲ್ಲರೂ ಕ್ಷಮೆ ಕೇಳಬೇಕು ಎಂದೂ ಒತ್ತಾಯಿಸಿದ್ದಾರೆ. ವೆಬ್​ ಸರಣಿಯ ಸ್ವರೂಪವನ್ನು ಬದಲಿಸುವವರೆಗೂ ನಾವು boycott Tandavನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

ಪೊಲೀಸರಿಗೆ ದೂರು
ಇನ್ನು ತಾಂಡವ್​ನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ರಾಮ್ ಕದಮ್​ ಇದರ ನಿರ್ಮಾಪಕರ ವಿರುದ್ಧ  ಘಾಟ್​​ಕೋಪಾರ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶೋನಲ್ಲಿರುವ ಪಾತ್ರಧಾರಿಗಳು, ನಿರ್ಮಾಪಕರು, ನಿರ್ದೇಶಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಸಚಿವರಿಗೆ ಪತ್ರ
ಇನ್ನು ತಾಂಡವ್​ ವೆಬ್​ ಸೀರಿಸ್​ಗೆ ನಿಷೇಧ ಹೇರುವಂತೆ ಒತ್ತಾಯಿಸಿ, ಬಿಜೆಪಿ ಸಂಸದ ಮನೋಜ್​ ಕೋಟಾಕ್​ ಅವರು, ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್​ಗೆ ಪತ್ರ ಬರೆದಿದ್ದಾರೆ. ಒಟಿಟಿ ಫ್ಲಾಟ್​ಫಾರಂ ನಿಯಂತ್ರಣಕ್ಕೆ ಪ್ರಾಧಿಕಾರ ರಚಿಸುವಂತೆ ಮನವಿ ಮಾಡಿದ್ದಾರೆ. ಆನ್​ಲೈನ್​ ಫ್ಲಾಟ್​ಫಾರಂಗಳಲ್ಲಿ ಸೆನ್ಸಾರ್​ಗೆ ಯಾವುದೇ ಪ್ರಾಧಿಕಾರ ಇಲ್ಲದ ಕಾರಣ, ಪದೇಪದೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುತ್ತಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂದು ಕೋಟಿ ಲಂಚಕ್ಕೆ ಬೇಡಿಕೆ ಆರೋಪ -CBIನಿಂದ ಇಬ್ಬರು ಹಿರಿಯ ರೈಲ್ವೆ ಅಧಿಕಾರಿಗಳ ಬಂಧನ