ಕಾಂಗ್ರೆಸ್ ಪ್ರಣಾಳಿಕೆ(Congress Manifesto) ವಿರುದ್ಧ ಸುಳ್ಳು ಹೇಳಿಕೆ ನೀಡಿದ ಆರೋಪದ ಮೇಲೆ ಗೋವಾದಲ್ಲಿ ಭಿಕುಮಾತ್ರೆ ಎಂಬ ವ್ಯಕ್ತಿಯೊಬ್ಬನನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ, ಬಿಜೆಪಿ ನಾಯಕರು ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಟ್ವೀಟ್ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಗೋವಾ ಮೂಲದ ವ್ಯಕ್ತಿಯನ್ನು ಶನಿವಾರ ಬಂಧಿಸಿದ್ದಾರೆ .
ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯನ್ನು ತಿರುಚಿ ಪೋಸ್ಟ್ ಮಾಡಲಾಗಿದೆ ಎನ್ನುವ ಆರೋಪ ಮಾಡಲಾಗಿದೆ.
ಭಿಕುಮಾತ್ರೆ ಖಾತೆಯ ಅಡಿಯಲ್ಲಿ, ಏಪ್ರಿಲ್ 22 ರಂದು ಟ್ವೀಟ್ ಮಾಡಿದ್ದರು. ಕಾಂಗ್ರೆಸ್ ಮ್ಯಾನಿಫೆಸ್ಟೋದಲ್ಲಿ ಮುಸ್ಲಿಂ ಎಂಬುದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ, ಇದು ಎಸ್ಸಿಇ/ಎಸ್ಟಿಗಳನ್ನೂ ಒಳಗೊಂಡಿದೆ ಎಂದು ವಾದಿಸುತ್ತಿರುವವರ ಮುಖಕ್ಕೆ ಇದನ್ನು ಎಸೆಯಿರಿ ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದರು, ಕಾಂಗ್ರೆಸ್ ಹಿಂದೂಗಳ ಸಂಪತ್ತನ್ನು ಕಸಿದುಕೊಳ್ಳಲು ಬಯಸುತ್ತಿದೆ ಎಂದು ಟ್ವೀಟ್ ಮಾಡಿ ಆಗಲೇ ಡಿಲೀಟ್ ಕೂಡ ಮಾಡಿದ್ದರು.
ಬೆಂಗಳೂರಿನ ನಿವಾಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತ ಜೆ ಸರವಣನ್ ಅವರು ಏಪ್ರಿಲ್ 29 ರಂದು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು. ಸೈಬರ್ ಕ್ರೈಂ ಪೊಲೀಸರು ಎಕ್ಸ್ ಬಳಕೆದಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66 (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮತ್ತಷ್ಟು ಓದಿ: ಧರ್ಮಾಧಾರಿತ ಮತಯಾಚನೆ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್ ಬುಕ್
ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನನ್ನ ತಂದೆಯನ್ನು ಬೆಂಗಳೂರು ಪೊಲೀಸರು ಇದ್ದಕ್ಕಿದ್ದಂತೆ ಬಂಧಿಸಿ ಕರೆದೊಯ್ದಿದ್ದಾರೆ, ಅವರನ್ನು ಬಿಡುಗಡೆ ಮಾಡಿ ಎಂದು ಮಗ ನಾಗೇಶ್ ನಾಯ್ಕ್ ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಎಕ್ಸ್‌ನಲ್ಲಿ, ಕರ್ನಾಟಕ ಪೊಲೀಸರು ಗೋವಾದಲ್ಲಿ ಭಿಕುಮಾತ್ರೆಯನ್ನು ಬಂಧಿಸಿದ್ದಾರೆ. ನಾವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಅವರು ಎಲ್ಲಾ ಕಾನೂನು ಬೆಂಬಲವನ್ನು ನೀಡುತ್ತೇವೆ, ಕಾಂಗ್ರೆಸ್ ಅರಾಜಕತೆಯನ್ನು ಹೊರಹಾಕಿದೆ ಎಂದು ಬರೆದಿದ್ದಾರೆ.
ತೇಜಸ್ವಿ ಟ್ವೀಟ್
This is blatant abuse of power by Karnataka Congress Govt.
We will fight this, both inside courts and outside. https://t.co/mCB8dkK1y5
— Tejasvi Surya (ಮೋದಿಯ ಪರಿವಾರ) (@Tejasvi_Surya) May 18, 2024
ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಪೋಸ್ಟ್ ಮಾಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಅಧಿಕಾರ ದುರ್ಬಳಕೆಯಾಗಿದೆ. ನಾವು ನ್ಯಾಯಾಲಯದ ಒಳಗೆ ಮತ್ತು ಹೊರಗೆ ಹೋರಾಡಲು ಸಿದ್ಧರಿದ್ದೇವೆ ಎಂದು ಬರೆದಿದ್ದಾರೆ.
ಸ್ಮೃತಿ ಇರಾನಿ ಟ್ವೀಟ್
Spoke to @Tejasvi_Surya re the case . Legal support has been assured. https://t.co/VgVamhnOiZ
— Smriti Z Irani (Modi Ka Parivar) (@smritiirani) May 18, 2024
ತೇಜಸ್ವಿ ಸೂರ್ಯ ಬಳಿ ಮಾತನಾಡಿದ್ದೇವೆ, ನಿಮಗೆ ಎಲ್ಲಾ ಕಾನೂನು ಬೆಂಬಲವನ್ನು ನೀಡುವ ಭರವಸೆ ನೀಡುತ್ತೇವೆ ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ. ಈ ವಿಚಾರವಾಗಿ ಭಿಕುಮಾತ್ರೆ ಪ್ರತಿಕ್ರಿಯೆ ನೀಡಿದ್ದು, ಸತ್ಯ ಹೇಳಿದ್ದಕ್ಕಾಗಿ ಕಾಂಗ್ರೆಸ್ಗೆ ಕೋಪ ಬಂದಿದೆ, ಸತ್ಯಕ್ಕಾಗಿ ಹೋರಾಡಲು ನಾನು ಸಿದ್ಧನಿದ್ದೇನೆ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:04 am, Sun, 19 May 24