ಭೋಪಾಲ್: ಬಿಜೆಪಿ ನಾಯಕರು ಅಯೋಧ್ಯೆ ಶ್ರೀರಾಮ ಮಂದಿರದ ಹೆಸರಲ್ಲಿ ದೇಣಿಗೆ ಸಂಗ್ರಹಿಸಿ, ಆ ಹಣದಲ್ಲಿ ಮದ್ಯ ಖರೀದಿ ಮಾಡಿ ಕುಡಿಯುತ್ತಿದ್ದಾರೆ ಎಂದು ಮಧ್ಯಪ್ರದೇಶದ ಜಬುವಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕಾಂತಿಲಾಲ್ ಭುರಿಯಾ ಆರೋಪಿಸಿದ್ದಾರೆ. ಈ ಮೂಲಕ ದೊಡ್ಡದಾದ ವಿವಾದವನ್ನು ಸೃಷ್ಟಿಸಿದ್ದಾರೆ.
ಬಿಜೆಪಿ ನಾಯಕರು ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ 2020ರಿಂದಲೂ ಕೋಟಿ ಕೋಟಿ ರೂಪಾಯಿ ಸಂಗ್ರಹ ಮಾಡಿದ್ದಾರೆ. ಆ ಹಣವೆಲ್ಲ ಎಲ್ಲಿ ಹೋಯಿತು? ಈ ನಾಯಕರು ಬೇರೇನೂ ಮಾಡುತ್ತಿಲ್ಲ. ಬೆಳಗ್ಗೆಯೆಲ್ಲ ಹಣ ಸಂಗ್ರಹ ಮಾಡಿ, ಅಂದೇ ರಾತ್ರಿ ಮದ್ಯ ಸೇವನೆ ಮಾಡುತ್ತಿದ್ದಾರೆ. ಈ ಮೂಲಕ ಹಣವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಷ್ಟ್ರಾದ್ಯಂತ ಸುತ್ತುವರಿದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡುವ ಜವಾಬ್ದಾರಿಯನ್ನು ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ ಸೇರಿ ಹಲವು ವಿಶ್ವಾಸಾರ್ಹ ಸಂಘಟನೆಗಳಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಹಿಸಿದೆ. ಇದೀಗ ಇವರ ಕೆಲಸದ ಬಗ್ಗೆ ಕಾಂಗ್ರೆಸ್ ಎಂಎಲ್ಎ ಅನುಮಾನ ವ್ಯಕ್ತಪಡಿಸಿದ್ದಾರೆ. ಎಲ್ಲವನ್ನೂ ಮದ್ಯಕ್ಕಾಗಿಯೇ ಖಾಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಭುರಿಯಾ ಹೇಳಿಕೆಗೆ, ಮಧ್ಯಪ್ರದೇಶ ಸಚಿವ ವಿಶ್ವಾಸ್ ಸಾರಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಯಾವತ್ತೂ ಶ್ರೀರಾಮನ ವಿರುದ್ಧವೇ ಮಾತನಾಡುತ್ತಿದೆ ಎಂದಿದ್ದಾರೆ. ಅಂದು ಸಂಗ್ರಹ ಮಾಡಿದ ಹಣವೆಲ್ಲ ಅಂದೇ ಶ್ರೀರಾಮ ಮಂದಿರದ ಬ್ಯಾಂಕ್ ಅಕೌಂಟ್ಗೆ ಹೋಗುತ್ತಿದೆ ಎಂದು ಮಧ್ಯಂತರ ಸ್ಪೀಕರ್ ರಾಮೇಶ್ವರ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ACB Raid ಟಿಪಿಒ ಜಯರಾಜ್ ಮನೆಯಲ್ಲಿ ಭಾರೀ ಆಸ್ತಿ ಪತ್ತೆ, ಕೇರಳದಲ್ಲಿರುವ ಪತ್ನಿಯ ಕ್ವಾರ್ಟರ್ಸ್ ಮೇಲೂ ದಾಳಿ