5 ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ₹340 ಕೋಟಿ ಖರ್ಚು ಮಾಡಿದ ಬಿಜೆಪಿ, ಕಾಂಗ್ರೆಸ್​​ ವ್ಯಯಿಸಿದ್ದು ₹194 ಕೋಟಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 22, 2022 | 9:17 PM

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷಗಳು ತಮ್ಮ ಚುನಾವಣಾ ವೆಚ್ಚದ ವರದಿಗಳನ್ನು ಚುನಾವಣಾ ಆಯೋಗದ ಮುಂದೆ ನಿಗದಿತ ಕಾಲಮಿತಿಯಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ.

5 ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ₹340 ಕೋಟಿ ಖರ್ಚು ಮಾಡಿದ ಬಿಜೆಪಿ, ಕಾಂಗ್ರೆಸ್​​ ವ್ಯಯಿಸಿದ್ದು ₹194 ಕೋಟಿ
ಸಂಗ್ರಹ ಚಿತ್ರ
Follow us on

ದೆಹಲಿ: ಈ ವರ್ಷದ ಆರಂಭದಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (BJP) ₹ 340 ಕೋಟಿ ಖರ್ಚು ಮಾಡಿದ್ದರೆ, ಕಾಂಗ್ರೆಸ್ (Congress) ಈ ರಾಜ್ಯಗಳಲ್ಲಿ ತನ್ನ ಪ್ರಚಾರಕ್ಕಾಗಿ ₹ 194 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದೆ ಎಂದು ಎರಡೂ ಪಕ್ಷಗಳ ಚುನಾವಣಾ ವೆಚ್ಚದ ವರದಿಗಳು ತಿಳಿಸಿವೆ.ಬಿಜೆಪಿ ಸಲ್ಲಿಸಿದ ವರದಿಯ ಪ್ರಕಾರ ಮತ್ತು ಚುನಾವಣಾ ಆಯೋಗವು ಸಾರ್ವಜನಿಕ ಡೊಮೇನ್‌ನಲ್ಲಿ ಇರಿಸಿರುವ ಮಾಹಿತಿ ಪ್ರಕಾರ ಈ ವರ್ಷದ ಆರಂಭದಲ್ಲಿ ನಡೆದ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಗಳಿಗಾಗಿ ಪಕ್ಷವು ತನ್ನ ಪ್ರಚಾರಕ್ಕಾಗಿ ₹ 340 ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಉತ್ತರ ಪ್ರದೇಶದಲ್ಲಿ ₹ 221 ಕೋಟಿ, ಮಣಿಪುರದಲ್ಲಿ ₹ 23 ಕೋಟಿ, ಉತ್ತರಾಖಂಡದಲ್ಲಿ ₹ 43.67 ಕೋಟಿ, ಪಂಜಾಬ್‌ನಲ್ಲಿ ₹ 36 ಕೋಟಿ ಮತ್ತು ಗೋವಾದಲ್ಲಿ ₹ 19 ಕೋಟಿಗೂ ಹೆಚ್ಚು ಖರ್ಚು ಮಾಡಿದೆ ಎಂದು ಬಿಜೆಪಿಯ ಖರ್ಚುವೆಚ್ಚಗಳ ವರದಿ ತೋರಿಸಿದೆ.ಕಾಂಗ್ರೆಸ್ ಸಲ್ಲಿಸಿದ ವರದಿಯ ಪ್ರಕಾರ, ಐದು ರಾಜ್ಯಗಳಲ್ಲಿ ಪ್ರಚಾರ ಮತ್ತು ಸಂಬಂಧಿತ ವೆಚ್ಚಗಳಿಗಾಗಿ ₹ 194 ಕೋಟಿಗೂ ಹೆಚ್ಚು ಖರ್ಚು ಮಾಡಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳು ಮಾನ್ಯತೆ ಪಡೆದಿವೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷಗಳು ತಮ್ಮ ಚುನಾವಣಾ ವೆಚ್ಚದ ವರದಿಗಳನ್ನು ಚುನಾವಣಾ ಆಯೋಗದ ಮುಂದೆ ನಿಗದಿತ ಕಾಲಮಿತಿಯಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ.