ಭಾರತೀಯ ಜನತಾ ಪಕ್ಷದ (ಬಿಜೆಪಿ) ತಮಿಳುನಾಡು ಘಟಕ ಹೊಸ ಹೆಜ್ಜೆ ಇಡಲು ಹೊರಟಿದ್ದು, ಹಲವರಿಗೆ ಅಚ್ಚರಿ ಮೂಡಿಸಿದೆ. ಉಸ್ತುವಾರಿಯನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ವಹಿಸಲಾಗಿದೆ. ರಾಜ್ಯದಲ್ಲಿ ಟಿವಿ ಚಾನೆಲ್ ಆರಂಭಿಸಲು ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದು ಕೇರಳದಲ್ಲಿ ಪಕ್ಷದ ಮುಖವಾಣಿ ಎಂದು ಪರಿಗಣಿಸಲಾದ ಜನಂ ಟಿವಿಯ ವಿಸ್ತರಣೆಯಾಗಿದೆ. ಚಾನೆಲ್ ಆರಂಭಿಸಲು 15 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ, ರಾಜ್ಯದಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸಂಪನ್ಮೂಲಗಳನ್ನು ಬಳಸಿ ಸಂಗ್ರಹಿಸಲಾಗುವುದು. ಸದ್ಯ ಚಾನೆಲ್ ಆರಂಭದ ದಿನಾಂಕ ನಿರ್ಧಾರವಾಗಿಲ್ಲ.
ತಮಿಳು ಚಾನೆಲ್‌ಗೆ ಜನಂ ಟಿವಿ ಎಂದು ಹೆಸರಿಸಲಾಗುವುದು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಇದು ನಗರದ ಆಳ್ವಾರ್‌ಪೇಟೆಯಲ್ಲಿ ಸ್ಥಾಪನೆಯಾಗಲಿದ್ದು, ಆರಂಭಿಕ ವೆಚ್ಚ ಸುಮಾರು 15 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ನಾಯಕರು ಹೇಳಿದ್ದಾರೆ. ಬಿಜೆಪಿ ಚಾನೆಲ್ ಮೂಲಕ ತನ್ನ ರಾಜಕೀಯ ಧ್ಯೇಯೋದ್ದೇಶಗಳನ್ನು ಜನರ ಮನೆ ಮನೆಗೆ ತಲುಪಿಸಲು ಮುಂದಾಗಿದೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಯೋಜನೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಕೇರಳದಲ್ಲಿ, ಶಬರಿಮಲೆ ವಿವಾದದ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪ್ರಚಾರ ಪ್ರಯತ್ನಗಳಲ್ಲಿ ಜನಂ ಟಿವಿ ಪ್ರಮುಖ ಪಾತ್ರ ವಹಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ