ಪಂಜಾಬ್‌ನ ಅಮೃತಸರದ ಇಸ್ಲಾಮಾಬಾದ್ ಪೊಲೀಸ್ ಠಾಣೆ ಬಳಿ ಇಂದು ಮುಂಜಾನೆ ಭಾರೀ ಸ್ಫೋಟದ ಸದ್ದು ಕೇಳಿದೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಸ್ಫೋಟದ ಸದ್ದು ಕೇಳಿಬಂದಿದ್ದು, ಆ ಭಾಗದ ಜನರು ಭಯಭೀತರಾಗಿದ್ದರು ಎಂದು ಹೇಳಲಾಗುತ್ತಿದೆ. ನಮಗೂ ಸದ್ದು ಕೇಳಿದೆ, ಆದರೆ ಪೊಲೀಸ್ ಠಾಣೆಯಲ್ಲಿ ಯಾವುದೇ ಸ್ಫೋಟ ಸಂಭವಿಸಿಲ್ಲ ಎಂದು ಇಸ್ಲಾಮಾಬಾದ್ ಪೊಲೀಸ್ ಠಾಣಾಧಿಕಾರಿ ಜಸ್ಬೀರ್ ಸಿಂಗ್ ಹೇಳಿದ್ದಾರೆ.
ಗ್ಯಾಂಗ್ಸ್ಟರ್ ಜೀವನ್ ಫೌಜಿ ಈ ಸ್ಫೋಟದ ಹೊಣೆ ಹೊತ್ತಿದ್ದಾನೆ. 3 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸ್ಫೋಟದ ರಭಸಕ್ಕೆ ಮನೆಯೊಳಗಿನ ಗೋಡೆಯ ಮೇಲಿನ ಫೋಟೊ ಕೆಳಗೆ ಬಿದ್ದಿದೆ. ಇದಕ್ಕೂ ಮುನ್ನ ಅಮೃತಸರದ ಮಜಿತಾ ಪೊಲೀಸ್ ಠಾಣೆಯೊಳಗೆ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿತ್ತು.
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಪೊಲೀಸ್ ಠಾಣೆಯ ಕಿಟಕಿ ಗಾಜುಗಳು ಒಡೆದಿವೆ. ಈ ಸ್ಫೋಟದ ನಂತರ, ಪ್ರದೇಶದಲ್ಲಿ ಭೀತಿ ಹರಡಿತು. ಪೊಲೀಸ್ ಠಾಣೆ ಗೇಟ್ ಬಳಿಯ ತೆರೆದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯ ನಂತರ ಪೊಲೀಸ್ ಠಾಣೆಯ ಗೇಟ್‌ಗಳನ್ನು ಮುಚ್ಚಲಾಗಿತ್ತು.
ಮತ್ತಷ್ಟು ಓದಿ: Viral Video: ಏಕಾಏಕಿ ಫುಟ್ಪಾತ್ನಲ್ಲಿ ಸ್ಫೋಟ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಪೊಲೀಸ್ ಠಾಣೆಯೊಳಗೆ ಯಾವುದೇ ಸ್ಫೋಟ ಸಂಭವಿಸಿಲ್ಲ, ಆದರೆ ನಾವು ತನಿಖೆ ನಡೆಸುತ್ತಿದ್ದೇವೆ. ಇಂದು ಬೆಳಗ್ಗೆ ಸ್ಫೋಟದ ಸದ್ದು ಖಚಿತವಾಗಿ ಕೇಳಿ ಬಂದಿದೆ. ಇಂತಹ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 10 ಜನರನ್ನು ಯುಎಪಿಎ ಅಡಿಯಲ್ಲಿ ಬಂಧಿಸುವ ಮೂಲಕ ನಾವು ಇತ್ತೀಚೆಗೆ ಮಾಡ್ಯೂಲ್ ಅನ್ನು ಭೇದಿಸಿದ್ದೇವೆ.
1984ರಲ್ಲಿ ಬಳಸಿದ ಡೆಡ್ ಡ್ರಾಪ್ ಮಾದರಿಯಲ್ಲೇ ಖಲಿಸ್ತಾನಿ ಭಯೋತ್ಪಾದಕರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ವರದಿಯೊಂದು ಎಚ್ಚರಿಸಿದ್ದು ನಂತರ ಕೇಂದ್ರ ಭದ್ರತಾ ಏಜೆನ್ಸಿಗಳು ಅಲರ್ಟ್ ಆಗಿದ್ದವು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ