ಹೈದರಾಬಾದ್: ರಸ್ತೆಯಲ್ಲಿ ನೋಡ ನೋಡುತ್ತಲೇ ಹೊತ್ತಿ ಉರಿದ ಬಿಎಂಡಬ್ಲ್ಯೂ ಕಾರು

|

Updated on: Dec 28, 2023 | 1:06 PM

ಹೈದರಾಬಾದ್‌ನ ಮಿಂಟ್ ಕಾಂಪೌಂಡ್ ಬಳಿ ನಿಲ್ಲಿಸಿದ್ದ ಬಿಎಂಡಬ್ಲ್ಯೂ ಕಾರಿನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿತ್ತು. ಸ್ವಲ್ಪ ಸಮಯದಲ್ಲೇ ಬೆಂಕಿ ಇಡೀ ವಾಹನವನ್ನು ಆವರಿಸಿತ್ತು. ಆದರೆ, ಈ ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹೈದರಾಬಾದ್: ರಸ್ತೆಯಲ್ಲಿ ನೋಡ ನೋಡುತ್ತಲೇ ಹೊತ್ತಿ ಉರಿದ ಬಿಎಂಡಬ್ಲ್ಯೂ ಕಾರು
ಕಾರು
Follow us on

ಹೈದರಾಬಾದ್‌ನ ಮಿಂಟ್ ಕಾಂಪೌಂಡ್ ಬಳಿ ನಿಲ್ಲಿಸಿದ್ದ ಬಿಎಂಡಬ್ಲ್ಯೂ ಕಾರಿನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿತ್ತು. ಸ್ವಲ್ಪ ಸಮಯದಲ್ಲೇ ಬೆಂಕಿ ಇಡೀ ವಾಹನವನ್ನು ಆವರಿಸಿತ್ತು. ಆದರೆ, ಈ ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ (ಫೈರ್ ಇನ್ ಕಾರ್ ವಿಡಿಯೋ) ಕಾರು ಹೇಗೆ ಸಂಪೂರ್ಣವಾಗಿ ನಾಶವಾಯಿತು ಎಂಬುದನ್ನು ನೀವು ಇದರಲ್ಲಿ ನೋಡಬಹುದು. ಬೆಂಕಿ ತಗುಲಿದ ನಂತರ ಕೆಲವರು ನೀರಿನ ಪೈಪ್ ಮೂಲಕ ಬೆಂಕಿ ನಂದಿಸಲು ಯತ್ನಿಸುತ್ತಿರುವುದನ್ನು ಕಾಣಬಹುದು.

ಮತ್ತಷ್ಟು ಓದಿ: ನೆಲಮಂಗಲ: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ: ಓರ್ವ ವ್ಯಕ್ತಿ ಸಜೀವ ದಹನ

ಈ ಅಗ್ನಿ ಅವಘಡ ಮಿಂಟ್ ಕಾಂಪೌಂಡ್ ಬಳಿಯ ಖೈರತಾಬಾದ್‌ನಲ್ಲಿ ನಡೆದಿದೆ. ಗ್ರೇಟರ್ ಹೈದರಾಬಾದ್ ಕಾರ್ಪೊರೇಷನ್ (GHMC) ನೀರಿನ ಟ್ಯಾಂಕ್‌ನಿಂದ ಬೆಂಕಿಯನ್ನು ನಂದಿಸಲು ಪ್ರಯತ್ನ ನಡೆಸಿತ್ತು. ನಂತರ ನಮ್ಮ ತಂಡವು ಸ್ಥಳಕ್ಕೆ ತಲುಪಿ ವಾಹನದಲ್ಲಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ