‘ಮೆಲೋಡಿ’ ಯುಗಕ್ಕೆ ಮತ್ತೊಂದು ಗೆಲುವು: ಭಾರತ-ಇಟಲಿ ವಲಸೆ ಮತ್ತು ಚಲನಶೀಲ ಒಪ್ಪಂದಕ್ಕೆ ಕ್ಯಾಬಿನೆಟ್ ಅನುಮೋದನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಭಾರತ ಮತ್ತು ಇಟಲಿ ನಡುವಿನ ವಲಸೆ ಮತ್ತು ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಗೂ ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಪ್ರಸ್ತಾವನೆಯನ್ನು ಅನುಮೋದಿಸಿದೆ. ಇದು 'ಮೆಲೋಡಿ' ಯುಗದ ಗೆಲುವು. ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಯುಗ ಆರಂಭ ಎಂದು ಹೇಳಲಾಗಿದೆ.
ಭಾರತ ಮತ್ತು ಇಟಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಈ ಮೂಲಕ ಭಾರತದ ರಾಜತಾಂತ್ರಿಕತೆ ಮತ್ತಷ್ಟು ಬಲವರ್ಧನೆಯಾಗಲಿದೆ. ಇದು ‘ಮೆಲೋಡಿ’ (Melody) ಯುಗಕ್ಕೆ ಮತ್ತೊಂದು ಗೆಲುವು ಎಂದು ಹೇಳಲಾಗಿದೆ. ನೆನ್ನೆ (ಡಿ.27) ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಭಾರತ ಮತ್ತು ಇಟಲಿ ನಡುವಿನ ವಲಸೆ ಮತ್ತು ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಗೂ ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಪ್ರಸ್ತಾವನೆಯನ್ನು ಅನುಮೋದಿಸಿದೆ. ಇದು ‘ಮೆಲೋಡಿ’ ಯುಗದ ಗೆಲುವು. ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಯುಗ ಆರಂಭ ಎಂದು ಹೇಳಲಾಗಿದೆ.
ಈ ಒಪ್ಪಂದವು ಜನರ ಸಂಪರ್ಕವನ್ನು ಹೆಚ್ಚಿಸುತ್ತದೆ, ವಿದ್ಯಾರ್ಥಿಗಳು, ನುರಿತ ಕೆಲಸಗಾರರು, ವ್ಯಾಪಾರಸ್ಥರು ಮತ್ತು ಯುವ ವೃತ್ತಿಪರರ ಚಲನಶೀಲತೆಯನ್ನು ಉತ್ತೇಜಿಸುತ್ತದೆ. ಹಾಗೂ ಅನಿಯಮಿತ ವಲಸೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಹಕಾರವನ್ನು ಬಲಪಡಿಸುತ್ತದೆ ಎಂದು ಹೇಳಲಾಗಿದೆ. ವಲಸೆ ಮತ್ತು ಚಲನಶೀಲತೆಯ ಕುರಿತಾದ ಭಾರತ-ಇಟಲಿ ಒಪ್ಪಂದವು ಐದು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ. ಇದು ಯಾವುದೇ ಸರ್ಕಾರ ಬದಲಾವಣೆಯಾದರೂ ಮುಂದುವರಿಯುತ್ತದೆ ಎಂದು ಹೇಳಿದೆ. ಈಗಾಗಲೇ ಈ ಒಪ್ಪಂದ ಪ್ರಕಾರ ಅನೇಕ ವಿಚಾರಗಳನ್ನು ನವೀಕರಿಸಲಾಗಿದೆ. ಪ್ರಸ್ತುತ ಇಟಾಲಿಯನ್ ವೀಸಾ ಆಡಳಿತದಲ್ಲಿ ಪೋಸ್ಟ್-ಸ್ಟಡಿ ಅವಕಾಶಗಳು, ಇಂಟರ್ನ್‌ಶಿಪ್‌ಗಳು ಮತ್ತು ವೃತ್ತಿಪರ ತರಬೇತಿಗಾಗಿ ಕಾರ್ಯವಿಧಾನಗಳನ್ನು ಒಳಗೊಂಡಿದೆ.
ನವೆಂಬರ್ 2ರಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಇಟಲಿಯ ವಿದೇಶಾಂಗ ವ್ಯವಹಾರಗಳು ಹಾಗೂ ಅಂತರಾಷ್ಟ್ರೀಯ ಸಹಕಾರ ಸಚಿವ ಆಂಟೋನಿಯೊ ತಜಾನಿ ಇಟಲಿಯಲ್ಲಿ ಭೇಟಿಯಾದರು, ಈ ಸಂದರ್ಭದಲ್ಲಿ ಇಬ್ಬರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದೀಗ ಈ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಒಪ್ಪಂದವು ಏನನ್ನು ಒಳಗೊಂಡಿರುತ್ತದೆ?
ಇಟಲಿಯಲ್ಲಿ ಭಾರತೀಯರು ಶೈಕ್ಷಣಿಕ/ವೃತ್ತಿಪರ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಆರಂಭಿಕ ವೃತ್ತಿಪರ ಅನುಭವವನ್ನು ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳು 12 ತಿಂಗಳವರೆಗೆ ಇಟಲಿಯಲ್ಲಿ ತಾತ್ಕಾಲಿಕ ನಿವಾಸ ಹಾಗೂ ವೀಸಾವನ್ನು ಪಡೆಯಬಹುದು. ಇದರ ಜತೆಗೆ ವೃತ್ತಿಪರ ತರಬೇತಿ, ಪಠ್ಯೇತರ ಇಂಟರ್ನ್‌ಶಿಪ್‌ಗಳು ಮತ್ತು ಪಠ್ಯಕ್ರಮ ಇಂಟರ್ನ್‌ಶಿಪ್‌ಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಹೊಂದಿದೆ. ಇದು ಭಾರತೀಯ ವಿದ್ಯಾರ್ಥಿಗಳು/ತರಬೇತಿದಾರರು ಇಟಾಲಿಯನ್ ಕೌಶಲ್ಯ/ತರಬೇತಿ ಮಾನದಂಡಗಳಲ್ಲಿ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಇಟಲಿಯು 2023, 2024 ಮತ್ತು 2025 ಈ ವರ್ಷಗಳಿಗೆ ಅನುಸಾರವಾಗಿ 5,000, 6,000 ಮತ್ತು 7,000 ಸಕಾಲಿಕ (non-seasonal) ಭಾರತೀಯ ಕಾರ್ಮಿಕರ ಕೋಟಾವನ್ನು ಕಾಯ್ದಿರಿಸಿದೆ. ಹಾಗೂ 2023, 2024 ಮತ್ತು 2025 ಈ ವರ್ಷಗಳಿಗೆ ಅನುಸಾರವಾಗಿ 3,000, 4,000 ಮತ್ತು 5,000 ಕಾಲಿಕ (seasonal) ಭಾರತೀಯ ಕಾರ್ಮಿಕರ ಕೋಟಾವನ್ನು ಕಾಯ್ದಿರಿಸಿದೆ. ಇಟಲಿಯು 2023-2025 ರಿಂದ ಸಕಾಲಿಕ ಹಾಗೂ ಕಾಲಿಕ ಭಾರತೀಯ ಕಾರ್ಮಿಕರ ಕೋಟಾವನ್ನು ಹೆಚ್ಚಾಗಿ ಕಾಯ್ದಿರಿಸಿದೆ.
ಭಾರತ ಮತ್ತು ಇಟಲಿ ನಡುವಿನ ಚಲನಶೀಲತೆ ಒಪ್ಪಂದದ ಬಗ್ಗೆ ಜಂಟಿ ವರ್ಕಿಂಗ್ ಗ್ರೂಪ್ (JWG) ಅಡಿಯಲ್ಲಿ ಚರ್ಚಿಸಲಾಗಿದೆ. ಔಪಚಾರಿಕವಾಗಿ ಯೂತ್ ಮೊಬಿಲಿಟಿ ಮತ್ತು ಹೆಲ್ತ್‌ಕೇರ್ ಮತ್ತು ವೈದ್ಯಕೀಯ ಸೇವಾ ಕ್ಷೇತ್ರಗಳಲ್ಲಿ ಭಾರತೀಯ ಅರ್ಹ ವೃತ್ತಿಪರರ ನೇಮಕಾತಿಯ ಸುಗಮಗೊಳಿಸುವ ಕಾರಣ ಜಂಟಿ ವರ್ಕಿಂಗ್ ಗ್ರೂಪ್ ಅಡಿಯಲ್ಲಿ ಚರ್ಚಿಸಲಿದೆ ಎಂದು ಹೇಳಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಸೆಲ್ಫಿ ತೆಗೆದು ಉತ್ತಮ ಸ್ನೇಹಿತ ಎಂದು ಪೋಸ್ಟ್ ಮಾಡಿದ ಇಟಲಿ ಪ್ರಧಾನಿ ಮೆಲೋನಿ
‘ಮೆಲೋಡಿ’ ಅವಧಿಯಲ್ಲಿ ಭಾರತ-ಇಟಲಿ ಸಂಬಂಧಗಳು
ಭಾರತ ಮತ್ತು ಇಟಲಿಯ ಸಂಬಂಧ ಗಟ್ಟಿಯಾಗಿದೆ. ಅದರಲ್ಲೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭಾರತಕ್ಕೆ ಭೇಟಿ ನೀಡಿದ ನಂತರ ಈ ಸಂಬಂಧ ಮತ್ತಷ್ಟು ಹೆಚ್ಚಿದೆ. ಉಭಯ ನಾಯಕ ಭೇಟಿಯ ನಂತರ ಎರಡು ರಾಷ್ಟ್ರಗಳು ಅನೇಕ ಒಪ್ಪಂದಗಳನ್ನು ಹಾಗೂ ಹಲವು ಕಾರ್ಯತಂತ್ರಗಳನ್ನು ಹಾಕಿಕೊಂಡಿದೆ.
ಭಾರತದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಇಬ್ಬರು ನಾಯಕರು ಭೇಟಿ ಮಾಡಿದ್ದಾರೆ. ನಂತರ ದುಬೈನಲ್ಲಿ ನಡೆದ ಸಿಒಪಿ 28ರ ಶೃಂಗಸಭೆಯಲ್ಲಿ ಉಭಯ ನಾಯಕರು ಭೇಟಿಯಾಗಿದ್ದರು. ಇದರ ಜತೆಗೆ ಈ ಉಭಯ ನಾಯಕರು ರಾಜತಾಂತ್ರಿಕ ಸಂಬಂಧಕ್ಕೆ ಸಾಕ್ಷಿ ಎಂಬಂತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ಮೋದಿ ಜತೆಗೆ ತೆಗೆದ ಸೆಲ್ಫಿ ಕ್ಲಿಕ್ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಲ್ಲಿಯ ನಂತರ ಮೆಲೋಡಿ ಶೀರ್ಷಿಕೆ ಹೆಚ್ಚು ಪ್ರಚಲಿತಕ್ಕೆ ಬಂದಿತ್ತು. ಇನ್ನು ಇಂಧನ, ಮಾಧ್ಯಮ ಮತ್ತು ಹಣಕಾಸು ಮುಂತಾದ ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟು 15 ಒಪ್ಪಂದಕ್ಕೆ ಸಹಿ ಹಾಕಿದರು. ಮುಂದಿನ ದಿನಗಳಲ್ಲಿ ಇಂಧನ, ರಕ್ಷಣೆ, ಹೈಡ್ರೋಜನ್, ಐಟಿ, ಟೆಲಿಕಾಂ, ಸೆಮಿಕಂಡಕ್ಟರ್‌ಗಳು ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಭಾರತದೊಂದಿಗಿನ ತನ್ನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಮೆಲೋನಿ ಹೇಳಿದ್ದಾರೆ.
ವಿದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ