ಶ್ರೀಲಂಕಾದ 1996ರ ವಿಶ್ವಕಪ್ ಹೀರೋಗಳ ಜೊತೆ ಮೋದಿ ಸಂವಾದ; ಪ್ರಧಾನಿಯ ಸರಳತನಕ್ಕೆ ಮಾರುಹೋದ ಕ್ರಿಕೆಟ್ ದಿಗ್ಗಜರು
ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಶ್ರೀಲಂಕಾದ 1996ರ ವಿಶ್ವಕಪ್ ಗೆದ್ದ ಹಿರಿಯ ಕ್ರಿಕೆಟಿಗರನ್ನು ಭೇಟಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೊಲಂಬೋದಲ್ಲಿ ಶ್ರೀಲಂಕನ್ ಕ್ರಿಕೆಟಿಗರಾದ ಸನತ್ ಜಯಸೂರ್ಯ, ಚಾಮಿಂಡಾ ವಾಸ್, ಅರವಿಂದ ಡಿ. ಸಿಲ್ವಾ, ಮಾರ್ವನ್ ಅಟಪಟ್ಟು ಮತ್ತು ಇತರ ಶ್ರೀಲಂಕಾದ ಕ್ರಿಕೆಟಿಗರೊಂದಿಗೆ ಸಂವಾದ ನಡೆಸಿದ್ದಾರೆ. ನಿನ್ನೆ ಸಂಜೆ ಬ್ಯಾಂಕಾಕ್ನಿಂದ ಪ್ರಧಾನಿ ಮೋದಿ ಶ್ರೀಲಂಕಾ ಪ್ರವಾಸಕ್ಕಾಗಿ ಕೊಲಂಬೋಗೆ ತಲುಪಿದ್ದರು.

ಕೊಲಂಬೊ, ಏಪ್ರಿಲ್ 5: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು 1996ರ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಕೆಲವು ಸದಸ್ಯರೊಂದಿಗೆ ಸಂವಾದ ನಡೆಸಿದರು. ಭಾರತದ ಪ್ರಧಾನಿ ಮೋದಿ ಎಕ್ಸ್ ನಲ್ಲಿ ಶ್ರೀಲಂಕಾದ ಕ್ರಿಕೆಟ್ ತಾರೆಗಳೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “1996ನೇ ವರ್ಷ ವಿಶ್ವಕಪ್ ಗೆದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಸದಸ್ಯರೊಂದಿಗೆ ಸಂವಹನ ನಡೆಸಲು ಸಂತೋಷವಾಯಿತು. ಈ ತಂಡವು ಅಸಂಖ್ಯಾತ ಕ್ರೀಡಾ ಪ್ರೇಮಿಗಳ ಕಲ್ಪನೆಯನ್ನು ಸೆರೆಹಿಡಿದಿದೆ!” ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.
ಮಾರ್ಚ್ 17ರಂದು ಲಾಹೋರ್‌ನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಅರ್ಜುನ ರಣತುಂಗ ನೇತೃತ್ವದ ತಂಡ ಆಸ್ಟ್ರೇಲಿಯಾವನ್ನು 7 ವಿಕೆಟ್‌ಗಳು ಮತ್ತು ಇನ್ನೂ 22 ಎಸೆತಗಳು ಬಾಕಿ ಇರುವಂತೆ ಸೋಲಿಸುವಲ್ಲಿ ಯಶಸ್ವಿಯಾಯಿತು. ಅರವಿಂದ ಡಿ ಸಿಲ್ವಾ ಅವರ ಅಜೇಯ 107 ರನ್‌ಗಳು, ಅಸಂಕ ಗುರುಸಿನ್ಹ ಅವರ 99 ಎಸೆತಗಳಲ್ಲಿ 65 ರನ್‌ಗಳು ಮತ್ತು ಅರ್ಜುನ ರಣತುಂಗ ಅವರ 37 ಎಸೆತಗಳಲ್ಲಿ 47 ರನ್‌ಗಳ ವೇಗದ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡವು ತಮ್ಮ ಮೊದಲ ಮತ್ತು ಏಕೈಕ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಯಿತು.
#WATCH | Prime Minister Narendra Modi interacts with Sri Lankan cricketers including Sanath Jayasuriya, Chaminda Vaas, Aravinda De Silva, Marvan Atapattu and others, in Colombo.
(Source: ANI/DD News) pic.twitter.com/KyqEi1unEG
— ANI (@ANI) April 5, 2025
ಇದನ್ನೂ ಓದಿ: ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ಮಿತ್ರ ವಿಭೂಷಣ ಪ್ರಶಸ್ತಿ ಪ್ರದಾನ
“ಇದು ಒಂದು ಉತ್ತಮ ಸಂವಾದವಾಗಿತ್ತು. ಈ ವೇಳೆ ನಾವು ಹಲವು ವಿಷಯಗಳನ್ನು ಚರ್ಚಿಸಿದ್ದೇವೆ ಮತ್ತು ಕ್ರಿಕೆಟ್ ಬಗ್ಗೆ ಮಾತನಾಡಿದ್ದೇವೆ. ಮೋದಿ ಅವರು ಹೇಗೆ ಅಧಿಕಾರ ವಹಿಸಿಕೊಂಡರು ಮತ್ತು ಅವರು ದೇಶವನ್ನು ಹೇಗೆ ಅಭಿವೃದ್ಧಿಪಡಿಸಿದರು ಎಂಬುದರ ಬಗ್ಗೆ ಮಾತನಾಡಿದ್ದು ನಮಗೂ ಒಂದು ಉತ್ತಮ ಅನುಭವವಾಗಿತ್ತು. ಪ್ರಧಾನಿ ಮೋದಿ ಅವರು ಭಾರತಕ್ಕಾಗಿ ಏನೆಲ್ಲ ಮಾಡಿದ್ದಾರೆಂಬುದನ್ನು ಅವರೇ ವಿವರಿಸಿದರು” ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಹೇಳಿದ್ದಾರೆ.
“It’s the first time I have seen a leader like him… it was fantastic … as the leader of a giant neighbour of Sri Lanka he has given lots of support to our country”, says Kumara Dharmasena a former cricketing legend known for his magic with bat and ball. @narendramodi pic.twitter.com/2T3JWQPc7s
— DD News (@DDNewslive) April 5, 2025
“ಪ್ರಧಾನಿ ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವುದು ನಮಗೆ ಒಂದು ದೊಡ್ಡ ಗೌರವ. ನಾವು ಕ್ರೀಡೆಗಳ ಬಗ್ಗೆ ಮತ್ತು 1996ರಲ್ಲಿ ನಾವು (ಶ್ರೀಲಂಕಾದವರು) ವಿಶ್ವಕಪ್ ಗೆದ್ದ ಬಗ್ಗೆ ಮಾತನಾಡಿದ್ದೇವೆ. ಪ್ರಧಾನಿ ಮೋದಿ ದಕ್ಷಿಣ ಏಷ್ಯಾದ ಅತ್ಯಂತ ಶಕ್ತಿಶಾಲಿ ನಾಯಕ, ಅವರ ಕ್ರಿಕೆಟ್ ಜ್ಞಾನ ತುಂಬಾ ಉತ್ತಮವಾಗಿದೆ” ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಚಾಮಿಂಡಾ ವಾಸ್ ಹೇಳಿದ್ದಾರೆ.
It was an extraordinary meeting PM Modi, a leader who has brought India to such heights…it was a dream come true”, says legendary Sri Lankan cricketer Marvan Atapattu after meeting PM @narendramodi @PMOIndia pic.twitter.com/hVBMyGGHNy
— DD News (@DDNewslive) April 5, 2025
ಇದನ್ನೂ ಓದಿ: ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರು, ಅವರ ದೋಣಿಗಳ ತಕ್ಷಣ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
Romesh Kaluwitharana,former Sri Lanka cricketer,acknowledges PM @narendramodi ‘s transformative leadership since taking office,benefiting Sri Lanka.He expresses gratitude to India for support during crises and financial aid in cricket tours. @PMOIndia pic.twitter.com/qalav9ruhK
— DD News (@DDNewslive) April 5, 2025
“ಪ್ರಧಾನಿ ಮೋದಿ ಭಾರತದಲ್ಲಿ ಅಧಿಕಾರಕ್ಕೆ ಬಂದ ನಂತರ ಅವರು ಬಹಳಷ್ಟು ವಿಷಯಗಳನ್ನು ಬದಲಾಯಿಸಿದರು. ಅವರು ಶ್ರೀಲಂಕಾಕ್ಕೂ ಬಹಳಷ್ಟು ಉತ್ತಮ ಕೆಲಸಗಳನ್ನು ಮಾಡಿದರು. ಬಿಕ್ಕಟ್ಟಿನ ಸಮಯದಲ್ಲಿ ಭಾರತ ಯಾವಾಗಲೂ ನಮ್ಮ ಜೊತೆ ನಿಂತಿದೆ” ಎಂದು ಶ್ರೀಲಂಕಾದ ಕ್ರಿಕೆಟಿಗ ಕೆ. ರೋಮೇಶ್ ಕಲುವಿತರಣ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ