ಮುಂಬೈ: ಮುಂಬೈ ಪೊಲೀಸರ ಪ್ರಕಾರ, ಮುಂಬೈನ ಪ್ರಸಿದ್ಧ ಹೋಟೆಲ್‌ಗೆ ಬಾಂಬ್ ಬೆದರಿಕೆಯ ಕರೆ ಬಂದಿದೆ. ಅಪರಿಚಿತ ಕರೆ ಮಾಡಿದ್ದು ಹೋಟೆಲ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ ಎಂದು ಬೆದರಿಕೆ ಕರೆಯನ್ನು ಮಾಡಿದ್ದಾರೆ. ಇದರ ಜೊತೆಗೆ 5 ಕೋಟಿ ರೂ.ಗೆ ಬೇಡಿಕೆಯನ್ನು ಇಟ್ಟಿದ್ದಾರೆ. ಐಪಿಸಿ ಸೆಕ್ಷನ್ 336 ಮತ್ತು 507 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದಕ್ಕೂ ಮೊದಲು ಆಗಸ್ಟ್ 19 ರಂದು ಮುಂಬೈ ಪೊಲೀಸರಿಗೆ ನವೆಂಬರ್ 26, 2008 ರಂದು ಸಂಭವಿಸಿದ ರೀತಿಯ ಭಯೋತ್ಪಾದಕ ಕೃತ್ಯವನ್ನು ನಡೆಸುವುದಾಗಿ ಬೆದರಿಕೆಯ ವಾಟ್ಸಾಪ್ ಸಂದೇಶವೊಂದು ಬಂದಿತ್ತು. ಈ ಘಟನೆಯ ನಂತರ ಎಕೆ-47 ರೈಫಲ್‌ಗಳನ್ನು ಹೊಂದಿರುವ ದೋಣಿ ತೇಲುತ್ತಿರುವುದನ್ನು ಪತ್ತೆಹಚ್ಚಲಾಯಿತು. ಮಹಾರಾಷ್ಟ್ರದ ರಾಯ್‌ಗಢ್ ಜಿಲ್ಲೆ, ರಾಜ್ಯದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಗರದ ಭದ್ರತೆ ಮತ್ತು ಜಾಗೃತಿಯನ್ನು ಕಾಪಾಡಿಕೊಳ್ಳಲು “ಸಾಗರ್ ಕವಚ” ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈ ಪೊಲೀಸರು ತಕ್ಷಣವೇ ಕ್ರೈಂ ಬ್ರಾಂಚ್‌ನ ಮೂರು ತಂಡಗಳನ್ನು ರಚಿಸಿದರು ಮತ್ತು ತನಿಖೆಗಾಗಿ ಇತರ ರಾಜ್ಯ ಮತ್ತು ಕೇಂದ್ರೀಯ ಸಂಸ್ಥೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ನಗರ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಹೇಳಿದ್ದಾರೆ.
Published On - 3:09 pm, Tue, 23 August 22