Bomb Threat: ದೆಹಲಿ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ
ದೆಹಲಿ ಹೈಕೋರ್ಟ್‌ಗೆ ಇಂದು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ನ್ಯಾಯಮೂತರ್ಿಗಳು ಹಾಗೂ ವಕೀಲರು ಹಾಗೂ ಸಿಬ್ಬಂದಿಗಳನ್ನು ಆವರಣದಿಂದ ತಕ್ಷಣವೇ ಸ್ಥಳಾಂತರಿಸಲಾಗಿದೆ. ದೆಹಲಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸೇರಿದಂತೆ ಭದ್ರತಾ ಸಂಸ್ಥೆಗಳು ಸಂಪೂರ್ಣ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಪ್ರದೇಶವನ್ನು ಸುತ್ತುವರೆದಿವೆ. ಯಾವುದೇ ಸ್ಫೋಟಕ ಸಾಧನ ಇನ್ನೂ ಪತ್ತೆಯಾಗಿಲ್ಲವಾದರೂ, ದೆಹಲಿ ಹೈಕೋರ್ಟ್ ಅನ್ನು ನಿರ್ದಿಷ್ಟವಾಗಿ ಹೆಸರಿಸದೆ ಕೋರ್ಟ್ ಎಂದು ಮಾತ್ರ ಉಲ್ಲೇಖಿಸಿರುವ ಇ-ಮೇಲ್ ಭೀತಿಯನ್ನು ಉಂಟುಮಾಡಿದೆ.

ನವದೆಹಲಿ, ಸೆಪ್ಟೆಂಬರ್ 12: ದೆಹಲಿ ಹೈಕೋರ್ಟ್‌ಗೆ ಇಂದು ಇ–ಮೇಲ್ ಮೂಲಕ ಬಾಂಬ್ ಬೆದರಿಕೆ(Bomb Threat) ಬಂದಿದೆ. ನ್ಯಾಯಮೂತರ್ಿಗಳು ಹಾಗೂ ವಕೀಲರು ಹಾಗೂ ಸಿಬ್ಬಂದಿಗಳನ್ನು ಆವರಣದಿಂದ ತಕ್ಷಣವೇ ಸ್ಥಳಾಂತರಿಸಲಾಗಿದೆ. ದೆಹಲಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸೇರಿದಂತೆ ಭದ್ರತಾ ಸಂಸ್ಥೆಗಳು ಸಂಪೂರ್ಣ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಪ್ರದೇಶವನ್ನು ಸುತ್ತುವರೆದಿವೆ.
ಯಾವುದೇ ಸ್ಫೋಟಕ ಸಾಧನ ಇನ್ನೂ ಪತ್ತೆಯಾಗಿಲ್ಲವಾದರೂ, ದೆಹಲಿ ಹೈಕೋರ್ಟ್ ಅನ್ನು ನಿರ್ದಿಷ್ಟವಾಗಿ ಹೆಸರಿಸದೆ ಕೋರ್ಟ್ ಎಂದು ಮಾತ್ರ ಉಲ್ಲೇಖಿಸಿರುವ ಇ–ಮೇಲ್ ಭೀತಿಯನ್ನು ಉಂಟುಮಾಡಿದೆ.
ಮತ್ತು ನ್ಯಾಯಾಲಯದ ವಿಚಾರಣೆಗಳನ್ನು ಸ್ಥಗಿತಗೊಳಿಸಲಾಯಿತು. ಅಧಿಕಾರಿಗಳು ಬೆದರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಇ–ಮೇಲ್ನ ಮೂಲವನ್ನು ಪತ್ತೆಹಚ್ಚಲು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ.
#WATCH | Delhi | Delhi High Court receives a bomb threat via mail. Precautionary measures taken by the Delhi police and the court has been vacated. https://t.co/7mQhpAsLsU pic.twitter.com/IYOFFbna4n
— ANI (@ANI) September 12, 2025
ಇಮೇಲ್‌ನಲ್ಲಿ ಪಾಕಿಸ್ತಾನ ಮತ್ತು ತಮಿಳುನಾಡನ್ನು ಸಹ ಉಲ್ಲೇಖಿಸಲಾಗಿದೆ. ನ್ಯಾಯಾಲಯ ಮತ್ತು ಎಲ್ಲಾ ವಕೀಲರ ಕೊಠಡಿಗಳನ್ನು ತರಾತುರಿಯಲ್ಲಿ ಸ್ಥಳಾಂತರಿಸಲಾಯಿತು. ದೆಹಲಿ ಹೈಕೋರ್ಟ್‌ಗೆ ಕಳುಹಿಸಲಾದ ಬೆದರಿಕೆ ಇ-ಮೇಲ್ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಿವೆ. ನ್ಯಾಯಾಲಯದಲ್ಲಿ ಮಧ್ಯಾಹ್ನ 2.30ಗೆ ಮತ್ತೆ ವಿಚಾರಣೆ ಆರಂಭವಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




