ಮುಂಬೈನ ಶಕ್ತಿ ಮಿಲ್ ಗ್ಯಾಂಗ್ರೇಪ್ ಆರೋಪಿಗಳಿಗೆ ಈ ಹಿಂದೆ ವಿಧಿಸಲಾಗಿದ್ದ ಮರಣದಂಡನೆಯನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿ, ಅದನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದೆ. ಅಲ್ಲದೆ, ಯಾವುದೇ ನ್ಯಾಯಾಲಯಗಳು ತೀರ್ಪ ನೀಡಲು ಸಾರ್ವಜನಿಕ ಪ್ರತಿಭಟನೆಗಳು, ಆಕ್ರೋಶಗಳು ಮಾರ್ಗದರ್ಶನ ನೀಡುವಂತಾಗಬಾರದು ಎಂದು ತಿಳಿಸಿದೆ. ಶಕ್ತಿ ಮಿಲ್ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ಸಮಾಜದ ಆತ್ಮಸಾಕ್ಷಿಯನ್ನೇ ನಡುಗಿಸಿದೆ. ಅಂದು ರೇಪ್ಗೆ ಒಳಗಾದ ಯುವತಿ ಕೇವಲ ದೈಹಿಕವಾಗಿಯಲ್ಲದೆ, ಮಾನಸಿಕವಾಗಿಯೂ ತುಂಬ ಸಫರ್ ಆಗಿದ್ದಾಳೆ. ಇದು ಮಾನವ ಹಕ್ಕುಗಳ ಉಲ್ಲಂಘನೆ. ಅದೆಷ್ಟೋ ಜನರು ಪ್ರತಿಭಟನೆ ನಡೆಸಿದ್ದಾರೆ. ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಂದ ಮಾತ್ರಕ್ಕೆ ಸಾರ್ವಜನಿಕರ ಆಕ್ರೋಶ ಆಧರಿಸಿ ನ್ಯಾಯಾಲಯಗಳು ತೀರ್ಪು ನೀಡಬಾರದು ಎಂದು ಹೈಕೋರ್ಟ್ ಹೇಳಿದೆ.
ಕೋರ್ಟ್ನ ಈಗಿನ ತೀರ್ಪೇನು?
ಶಕ್ತಿ ಮಿಲ್ ಗ್ಯಾಂಗ್ರೇಪ್ನ ಆರೋಪಿಗಳಿಗೆ ಮರಣದಂಡನೆಯನ್ನು ರದ್ದುಗೊಳಿಸಿದ ನ್ಯಾಯಾಲಯ ಇದೀಗ ಜೀವಾವಧಿ ಶಿಕ್ಷೆ ವಿಧಿಸಿದೆ. ಜೀವನ ಪರ್ಯಂತ ಅವರು ಜೈಲಿನಲ್ಲಿಯೇ ಕಳೆಯಬೇಕು ಎಂದು ಹೇಳಿದೆ. ಹಾಗೇ, ಪೆರೋಲ್ ಅಥವಾ ಇನ್ಯಾವುದೇ ಕಾನೂನು ನಿಯಮಾನುಸಾರವೂ ಅವರು ಒಮ್ಮೆಯೂ ಹೊರಗೆ ಬರುವಂತಿಲ್ಲ. ಜಾಮೀನಿಗೆ ಅವಕಾಶವಿಲ್ಲ. ಯಾವ ಕಾರಣಕ್ಕೂ ಅವರು ಈ ಸಮಾಜದೊಟ್ಟಿಗೆ ಸೇರುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಏನಿದು ಶಕ್ತಿ ಮಿಲ್ ಗ್ಯಾಂಗ್ ರೇಪ್
2013ರಲ್ಲಿ ನಡೆದ ಗ್ಯಾಂಗ್ ರೇಪ್ ಇದು. ಮುಂಬೈನ ನಿಷ್ಕ್ರಿಯ ಶಕ್ತಿ ಮಿಲ್ ಫೋಟೋ ತೆಗೆದು ವರದಿ ಮಾಡುವುದಕ್ಕೋಸ್ಕರ 22ವರ್ಷದ ಮಹಿಳಾ ಫೋಟೋ ಜರ್ನಲಿಸ್ಟ್ವೊಬ್ಬರು ತನ್ನ ಪುರುಷ ಸಹೋದ್ಯೋಗಿಯೊಟ್ಟಿಗೆ ಅಲ್ಲಿಗೆ ತೆರಳಿದ್ದರು. ಆದರೆ ಅಲ್ಲಿ ಐದು ಮಂದಿ ಪುರುಷ ಉದ್ಯೋಗಿಯನ್ನು ಕಟ್ಟಿ ಹಾಕಿ ಯುವತಿಯನ್ನು ರೇಪ್ ಮಾಡಿದ್ದರು. ಈ ಐವರು ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನೂ ಆಗಿದ್ದ. ಆಗ ಆತನನ್ನು ರಿಮ್ಯಾಂಡ್ ಹೋಂಗೆ ಕಳಿಸಿ ಕೆಲವೇ ವರ್ಷಗಳ ನಂತರ ಬಿಡುಗಡೆ ಮಾಡಲಾಗಿತ್ತು. ಇನ್ನು 2014ರಲ್ಲಿ ಈ ಆರೋಪಿಗಳಿಗೆ ಟ್ರಯಲ್ ಕೋರ್ಟ್ ಮರಣದಂಡನೆ ವಿಧಿಸಿತ್ತು. ಅದನ್ನೀಗ ಹೈಕೋರ್ಟ್ ರದ್ದು ಮಾಡಿದೆ.
ಇದನ್ನೂ ಓದಿ: 200MP Smartphone: ಮೋಟೋ ಕಂಪನಿಯಿಂದ ಹೊಸ ಪ್ರಯೋಗ: ಬರುತ್ತಿದೆ 200MP ಕ್ಯಾಮೆರಾದ ಸ್ಮಾರ್ಟ್ಫೋನ್