200MP Smartphone: ಮೋಟೋ ಕಂಪನಿಯಿಂದ ಹೊಸ ಪ್ರಯೋಗ: ಬರುತ್ತಿದೆ 200MP ಕ್ಯಾಮೆರಾದ ಸ್ಮಾರ್ಟ್​ಫೋನ್

Motorola 200-Megapixel Smartphone: ಸ್ಯಾಮ್‌ಸಂಗ್ ತನ್ನ ಹೊಸ 200MP ISOCELL ಕ್ಯಾಮೆರಾ ಸೆನ್ಸಾರ್‌ ಅನ್ನು ಸೆಪ್ಟೆಂಬರ್‌ನಲ್ಲಿ ಪರಿಚಯಿಸಿತ್ತು. ಆದರೆ ಈ ಸೆನ್ಸಾರ್‌ ಅನ್ನು ಈಗ ಯಾವುದೇ ಸ್ಮಾರ್ಟ್‌ಫೋನ್ ಕಂಪನಿಯು ಬಳಸಿಲ್ಲ. ಇದೀಗ ಮೋಟೋರೊಲಾ ಕಂಪನಿ ಈ ಸ್ಯಾಮ್‌ಸಂಗ್‌ನ 200MP ISOCELL ಕ್ಯಾಮೆರಾ ಸೆನ್ಸಾರ್‌ ಬಳಸುವ ಮೊದಲ  ಕಂಪನಿಯಾಗಲಿದೆ.

200MP Smartphone: ಮೋಟೋ ಕಂಪನಿಯಿಂದ ಹೊಸ ಪ್ರಯೋಗ: ಬರುತ್ತಿದೆ 200MP ಕ್ಯಾಮೆರಾದ ಸ್ಮಾರ್ಟ್​ಫೋನ್
Motorola 200MP Phone
Follow us
TV9 Web
| Updated By: Vinay Bhat

Updated on: Nov 25, 2021 | 1:59 PM

ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಮೋಟೋರೊಲಾ (Motorola) ಕಂಪನಿ ಈಗೀಗ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು (Smartphone) ಪರಿಚಯಿಸಿ ಭದ್ರವಾಗಿ ನೆಲೆಯೂರಲು ಪ್ರಯತ್ನ ಪಡುತ್ತಿದೆ. ಹೆಚ್ಚಾಗಿ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ಗಳಿಂದಲೇ ಭರ್ಜರಿ ಸುದ್ದಿಯಲ್ಲಿರುವ ಮೋಟೋ (Moto) ಕಂಪನಿ ಇದೀಗ ಮತ್ತೊಂದು ಹೊಸತನಕ್ಕೆ ಹೆಜ್ಜೆ ಹಾಕಿದೆ. ಮುಂದಿನ ವರ್ಷ ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಲು ಮೋಟೋ ಈಗಿನಿಂದಲೇ ತಯಾರಿಯೊಂದನ್ನು ನಡೆಸುತ್ತಿದೆ. ವಿಶೇಷ ಎಂದರೆ ಈ ಫೋನ್ ಬರೋಬ್ಬರಿ 200 ಮೆಗಾಫಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಒಳಗೊಂಡಿರಲಿದೆಯಂತೆ (Motorola 200-Megapixel Smartphone). ಈ ಫೋನ್ ಆದಾಗಲೇ ಟೆಕ್ ಪ್ರಿಯರಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ. ಕ್ಯಾಮೆರಾ ಜೊತೆಗೆ ಇನ್ನಷ್ಟು ಆಕರ್ಷಕ ಫೀಚರ್​ಗಳು ಈ ಫೋನ್​ನಲ್ಲಿ ಇರಲಿದೆಯಂತೆ.

ಸ್ಯಾಮ್‌ಸಂಗ್ ತನ್ನ ಹೊಸ 200MP ISOCELL ಕ್ಯಾಮೆರಾ ಸೆನ್ಸಾರ್‌ ಅನ್ನು ಸೆಪ್ಟೆಂಬರ್‌ನಲ್ಲಿ ಪರಿಚಯಿಸಿತ್ತು. ಆದರೆ ಈ ಸೆನ್ಸಾರ್‌ ಅನ್ನು ಈಗ ಯಾವುದೇ ಸ್ಮಾರ್ಟ್‌ಫೋನ್ ಕಂಪನಿಯು ಬಳಸಿಲ್ಲ. ಇದೀಗ ಮೋಟೋರೊಲಾ ಕಂಪನಿ ಈ ಸ್ಯಾಮ್‌ಸಂಗ್‌ನ 200MP ISOCELL ಕ್ಯಾಮೆರಾ ಸೆನ್ಸಾರ್‌ ಬಳಸುವ ಮೊದಲ  ಕಂಪನಿಯಾಗಲಿದೆ.

ಟಿಪ್‌ಸ್ಟರ್ ಐಸ್ ಯೂನಿವರ್ಸ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, 200MP ಕ್ಯಾಮೆರಾ ಹೊಂದಿರುವ ಈ ಮೋಟೋರೊಲಾ ಸ್ಮಾರ್ಟ್‌ಫೋನ್‌ 2022ರ ಮಧ್ಯಭಾಗದಲ್ಲಿ ಬಿಡುಗಡಯಾಗುವ ಸಾದ್ಯತೆ ಇದೆ. ಇದಾದ ಬಳಿಕ ಶವೋಮಿ ಮತ್ತು ಸ್ಯಾಮ್‌ಸಂಗ್‌ ಕೂಡ 200MP ಕ್ಯಾಮೆರಾ ಫೋನ್‌ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಶವೋಮಿಗಿಂತ ಮುಂಚಿತವಾಗಿ ಮೋಟೋರೊಲಾ 200MP ಕ್ಯಾಮೆರಾ ಸ್ಮಾರ್ಟ್​ಫೋನ್ ತಯಾರು ಮಾಡುತ್ತಿದೆ.

ಈಗೀಗ ಮೋಟೋರೊಲ ಕಂಪೆನ ತಾನು ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್​ಫೋನ್​ಗಳಲ್ಲಿ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಕೆಲ ತಿಂಗಳ ಹಿಂದೆಯಷ್ಟೆ ಭಾರತದಲ್ಲಿ ಮೋಟೋರೊಲಾ ಎಡ್ಜ್ 20 ಪ್ರೋ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿತ್ತು. ಇದು 108ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಬಲಿಷ್ಠ ಪ್ರೊಸೆಸರ್ ಕೂಡ ಅಳವಡಿಸಲಾಗಿತ್ತು.

Amazon: ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್​ನಲ್ಲಿ ಶವೋಮಿ, ಒನ್​ಪ್ಲಸ್​, ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್

(Motorola is tipped to be the first manufacturer to deploy Samsungs 200-megapixel camera sensor on its smartphone)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ