ಬ್ರಾಹ್ಮಣ(Brahmin)ರು ಭಾರತದವರಲ್ಲ ರಷ್ಯಾದಿಂದ ಬಂದವರು ಎಂದು ಆರ್ಜೆಡಿ ನಾಯಕ ಯದುವಂಶ ಕುಮಾರ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಿರ್ಮಲಿ ಜಿಲ್ಲೆಯಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಬ್ಬ ಬ್ರಾಹ್ಮಣನೂ ಭಾರತಕ್ಕೆ ಸೇರಿದವರಲ್ಲ ಎಂದು ಹೇಳಿದ್ದು, ಅವರೆಲ್ಲರೂ ರಷ್ಯಾ ಇತರೆ ದೇಶಗಳಿಂದ ಬಂದವರು, ಅವರನ್ನು ಅಲ್ಲಿಂದ ಗಡಿ ಪಾರು ಮಾಡಲಾಗಿತ್ತು ನಂತರ ಅವರೆಲ್ಲರೂ ಭಾರತಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ನಮ್ಮನ್ನೆಲ್ಲಾ ಒಡೆದು ನಾವು ಹೊಡೆದಾಡುವಂತೆ ಮಾಡುತ್ತಿದ್ದಾರೆ, ನಮ್ಮ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ಅವರನ್ನು ಇಲ್ಲಿಂದ ಓಡಿಸಬೇಕು ಎಂದು ಖಾರವಾಗಿ ನುಡಿದಿದ್ದಾರೆ.
ಮತ್ತಷ್ಟು ಓದಿ: Ayodhya: ದೇವಸ್ಥಾನದ ಅರ್ಚಕ ಆತ್ಮಹತ್ಯೆ, ಪೊಲೀಸರ ವಿರುದ್ಧ ಗಂಭೀರ ಆರೋಪ
ಯದುವಂಶ ಕುಮಾರ್ ಹೇಳಿಕೆಗೆ ಬಿಜೆಪಿ ತರಾಟೆ
ಬ್ರಾಹ್ಮಣರು ನಮ್ಮ ದೇಶದ ನಿವಾಸಿಗಳು, ಬ್ರಾಹ್ಮಣರು ನಮಗೆ ಮೌಲ್ಯಗಳನ್ನು ಕಲಿಸುತ್ತಿದ್ದಾರೆ, ಆದರೆ ಆರ್ಜೆಡಿ ನಾಯಕರು ಅವರನ್ನು ಓಡಿಸುವ ಕುರಿತು ಮಾತನಾಡುತ್ತಿದ್ದಾರೆ, ಸಮಾಜದಲ್ಲಿ ದ್ವೇಷ ಹರಡುವ ಇಂಥವರನ್ನು ಮೊದಲು ಹೊರಹಾಕುವ ಅಗತ್ಯವಿದೆ ಎಂದು ಬಿಜೆಪಿ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ