ಮದುವೆಯೆಂದರೆ ಅದೊಂದು ವಿಶೇಷ ಸಂದರ್ಭ. ಯಾವುದೋ ಒಬ್ಬ ಹುಡುಗನಾಗಲಿ, ಹುಡುಗಿಯಾಗಲಿ ಅವರ ವಿವಾಹದ ಬಗ್ಗೆ ವಿಧವಿಧವಾದ ಕನಸು ಕಂಡಿರುತ್ತಾರೆ. ಹಾಗೇ ವಿವಿಧ ಯೋಜನೆಗಳನ್ನೂ ರೂಪಿಸಿಕೊಂಡಿರುತ್ತಾರೆ. ಹಾಗೇ ಮದುವೆಯಂದು ವಧು-ವರರಿಬ್ಬರೂ ಸಹಜವಾಗಿಯೇ ತುಂಬ ಖುಷಿಯಿಂದ, ಉದ್ವೇಗದಿಂದ ಇರುತ್ತಾರೆ. ಆದರೆ ಈಗೊಂದು ಜೋಡಿಯ ಮದುವೆಯ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ವಧು ಎಕ್ಸೈಟ್ ಆದ ರೀತಿಯನ್ನು ನೋಡಿ, ನೆಟ್ಟಿಗರು ವಾವ್ ಎಂದಿದ್ದಾರೆ.
ಇದು ಒಂದು ಮುಸ್ಲಿಂ ಜೋಡಿಯ ಮದುವೆ ಎಂಬುದು ಅಲ್ಲಿನ ಸಂಪ್ರದಾಯ ನೋಡಿದಾಗ ತಿಳಿಯುತ್ತದೆ. ಸುತ್ತಲೂ ಜನರು ಕುಳಿತಿರುತ್ತಾರೆ. ಮಧ್ಯೆ ವಧು-ವರರು ಕುಳಿತಿರುತ್ತಾರೆ. ವರ ಅದೇನೋ ಪಠಣ ಮಾಡುತ್ತಿರುತ್ತಾರೆ. ಅದಾದ ಬಳಿಕ qubool hai ಎನ್ನುತ್ತಾರೆ. ಅಂದರೆ ಸಮ್ಮತಿ ಇದೆ ಎಂದರ್ಥ. ಅಂದರೆ ಮದುವೆಯ ದಿನ ನಡೆಯುವ ಒಂದು ಸಂಪ್ರದಾಯ. ವಧು-ವರರನ್ನು ಅಕ್ಕಪಕ್ಕ ಕೂರಿಸಿಕೊಂಡು ವಧುವಿನ ಕಡೆಯವರು ವರನ ಬಳಿ ತಮ್ಮ ಮನೆಯ ಹುಡುಗಿಯನ್ನು ನಿಮಗೆ ಒಪ್ಪಿಸುತ್ತಿದ್ದೇವೆ.. ನೀವು ಸ್ವೀಕರಿಸಿ ಅಂದರೆ ಒಪ್ಪಿಕೊಳ್ಳಿ ಎಂದು ಪ್ರಸ್ತಾಪ ಇಡುತ್ತಾರೆ. ಅದಕ್ಕೆ ಪ್ರತಿಯಾಗಿ ವರ ಸಮ್ಮತಿ ಇದೆ..ಸ್ವೀಕರಿಸಿದ್ದೇನೆ ಎಂಬ ಅರ್ಥದಲ್ಲಿ qubool hai ಎಂದು ಹೇಳುತ್ತಾರೆ. ಇದು ಇಸ್ಲಾಂನಲ್ಲಿ ಇದು ತುಂಬ ಮುಖ್ಯ ಕೂಡ. ಹಾಗೇ ಈ ಮದುವೆಯಲ್ಲೂ ಇದೇ ಕಾರ್ಯಕ್ರಮ ನಡೆಯುತ್ತಿತ್ತು. ವರನ ಬಾಯಿಂದ qubool hai ಎಂಬ ಶಬ್ದ ಬರುತ್ತಿದ್ದಂತೆ ಪಕ್ಕದಲ್ಲಿ ಅಲಂಕೃತಳಾಗಿ ಕುಳಿತಿದ್ದ ವಧು ಫುಲ್ ಖುಷಿಯಿಂದ ಕೈಗಳನ್ನು ಮೇಲೆತ್ತಿ ಕೂಗಿದ್ದಾಳೆ. ಅಷ್ಟಕ್ಕೂ ಸುಮ್ಮನಾದೆ ಪಕ್ಕದಲ್ಲಿ ಇದ್ದ ವರನನ್ನು ಅಪ್ಪಿಹಿಡಿದು ಚುಂಬಿಸಲೂ ಮುಂದಾಗಿದ್ದಾಳೆ. ಅದನ್ನು ನೋಡಿ ಸುತ್ತಲೂ ಕುಳಿತ ಅತಿಥಿಗಳು ಸಿಕ್ಕಾಪಟೆ ನಕ್ಕಿದ್ದಾರೆ.
ತಾನು ಒಮ್ಮೆಲೇ ಉದ್ವೇಗಗೊಂಡ ಬಗ್ಗೆ ತಿಳಿದು ನಾಚಿಕೆಪಟ್ಟುಕೊಂಡಳಾದರೂ ಸುತ್ತಲೂ ಇದ್ದವರು ಫುಲ್ ಚಿಯರ್ ಮಾಡಿದಾಗ ಖುಷಿಯಿಂದ ತನ್ನ ಭಾವನೆಯನ್ನು ವ್ಯಕ್ತಪಡಿಸಿದ್ದಾಳೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, 15 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇನ್ನು ವಿಡಿಯೋಕ್ಕೆ Happiest wife ever ಎಂಬ ಕ್ಯಾಪ್ಷನ್ ಕೂಡ ನೀಡಲಾಗಿದೆ.
ನೆಟ್ಟಿಗರಂತೂ ತಮಾಷೆಯುಕ್ತ ಕಾಮೆಂಟ್ಗಳನ್ನು ಹಾಕಿದ್ದಾರೆ. ಇದು ತುಂಬ ಮುದ್ದಾದ ಪ್ರತಿಕ್ರಿಯೆ ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು ಪತಿಯ ರಕ್ತ ಹೀರಲು ಲೈಸೆನ್ಸ್ ಸಿಕ್ಕಿದ್ದಕ್ಕೆ ಇಷ್ಟು ಖುಷಿಯಾ ಎಂದು ಕಾಲೆಳೆದಿದ್ದಾರೆ.
ಇದನ್ನೂ ಓದಿ: ರಾಧೆ ಸಿನಿಮಾ ಕಳಪೆ ಎಂದ ನಟನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಲ್ಮಾನ್ ಖಾನ್
ಈ ವ್ಯವಸ್ಥೆಯನ್ನು ಬದಲಾಯಿಸಬೇಕು.. 2 ಹೆಣ್ಣು ಮಕ್ಕಳ ತಂದೆಯಾಗಿ ನನಗೆ ಆತಂಕ ಶುರುವಾಗಿದೆ; ಕ್ರಿಕೆಟಿಗ ಆರ್. ಅಶ್ವಿನ್