ಖಾಸಗಿ ನೆಟ್ವರ್ಕ್ಗಳಿಗೆ ಪ್ರಬಲ ಪೈಪೋಟಿ ನೀಡುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL) ಸಂಸ್ಥೆ ತನ್ನ ಗ್ರಾಹಕರಿಗಾಗಿ ಆಕರ್ಷಕ ಯೋಜನೆಗಳನ್ನು ಜಾರಿಗೊಳಿಸಿದೆ. ಜನರು ಇಂಟರ್ನೆಟ್ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದು, ಮನರಂಜನೆಗೆ ಓಟಿಟಿ ವೇದಿಕೆಗಳನ್ನೇ ಅವಲಂಬಿಸುತ್ತಿರುವ ಕಾರಣ ಅವರನ್ನು ಸೆಳೆಯಲೆಂದೇ ಬಿಎಸ್ಎನ್ಎಲ್ ಸಿನಿಮಾ ಪ್ಲಸ್ (BSNL Cinema Plus) ಎಂಬ ವಿಶೇಷ ಓಟಿಟಿ ಯೋಜನೆಯನ್ನು ಚಾಲ್ತಿಗೆ ತಂದಿದೆ.
ನೂತನ ಯೋಜನೆಗಳಡಿಯಲ್ಲಿ SonyLIV, YuppTV, Voot Select, Zee5 ಅಪ್ಲಿಕೇಶನ್ಗಳನ್ನು ಬಳಕೆ ಮಾಡಬಹುದಾಗಿದೆ. ಗ್ರಾಹಕರು ಒಂದು ತಿಂಗಳಿಗೆ ₹199 ಪಾವತಿ ಮಾಡಬೇಕಿದ್ದು, ಯೋಜನೆಯು ಆರಂಭಿಕ 3 ತಿಂಗಳವರೆಗೆ ಮಾತ್ರ ಜಾರಿಯಲ್ಲಿರಲಿದೆ. ಬಿಎಸ್ಎನ್ಎಲ್ ಸಿನಿಮಾ ಪ್ಲಸ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರಿಗೆ 300ಕ್ಕೂ ಅಧಿಕ ಟಿವಿ ವಾಹಿನಿಗಳು, 8,000ಕ್ಕೂ ಅಧಿಕ ಸಿನಿಮಾಗಳು, 80 ಲೈವ್ ಟಿವಿ ವಾಹಿನಿಗಳು, ಒರಿಜಿನಲ್ ಟಿವಿ ಕಾರ್ಯಕ್ರಮಗಳು ವೀಕ್ಷಣೆಗೆ ಲಭ್ಯವಿರಲಿವೆ ಎಂದು ಬಿಎಸ್ಎನ್ಎಲ್ನ ಹಿರಿಯ ಅಧಿಕಾರಿ ನಾಗೆಲ್ಲಾ ತ್ರಿನಾಥ್ ಟ್ವೀಟ್ ಮಾಡಿದ್ದಾರೆ.
ಬಿಎಸ್ಎನ್ಎಲ್ ಸಿನಿಮಾ ಪ್ಲಸ್ ಯೋಜನೆ ಪಡೆಯುವುದು ಹೇಗೆ
ಈ ಯೋಜನೆಯನ್ನು ಪಡೆಯಲು BSNL ಗ್ರಾಹಕರು ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮೊಬೈಲ್ ನಂಬರ್, ಇಮೇಲ್ ಐಡಿ, ಹೆಸರು ಮತ್ತು ಪ್ರದೇಶವನ್ನು ನಮೂದಿಸಬೇಕಿದೆ. ನಂತರ ಬಿಎಸ್ಎನ್ಎಲ್ ಸಿನಿಮಾ ಪ್ಲಸ್ ಯೋಜನೆಯನ್ನು ಪಡೆದು ಸೌಲಭ್ಯಗಳನ್ನು ಅನುಭವಿಸಬಹುದಾಗಿದೆ.
ಹಾಟ್ಸ್ಟಾರ್ನೊಂದಿಗೂ ಕೈ ಜೋಡಿಸಿದ ಬಿಎಸ್ಎನ್ಎಲ್
ಬಿಎಸ್ಎನ್ಎಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಬಿಎಸ್ಎನ್ಎಲ್ ಸೂಪರ್ಸ್ಟಾರ್ ಎಂಬ ಹೊಸ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯಲ್ಲಿ 500ಜಿಬಿ ಡೇಟಾ ನೀಡಲಾಗುತ್ತಿದ್ದು, ಹಾಟ್ಸ್ಟಾರ್ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಕೂಡ ಸಿಗಲಿದೆ. ಈ ಯೋಜನೆಯನ್ನು ಪಡೆಯಲು ಪ್ರೀಪೇಯ್ಡ್ ಗ್ರಾಹಕರು ತಿಂಗಳಿಗೆ ₹949 ಪಾವತಿಸಬೇಕಿದ್ದು, ಅನಿಯಮಿತ ಕರೆ ಹಾಗೂ 50 Mbps ವೇಗದಲ್ಲಿ ಡೇಟಾ ಸಿಗಲಿದೆ.
ಈ ಯೋಜನೆಗಳನ್ನು ಪಡೆಯಲು ಗ್ರಾಹಕರು ತಮ್ಮ STD ಕೋಡ್ಗಳ ಜೊತೆಗೆ ದೂರವಾಣಿ ಸಂಖ್ಯೆಯನ್ನು ಹಾಕಿ ಓಟಿಪಿ ನಮೂದಿಸಬೇಕಿದೆ. ಖಾಸಗಿ ಸಂಸ್ಥೆಗಳ ಪೈಪೋಟಿ ಜೋರಾಗುತ್ತಿರುವ ಸಂದರ್ಭದಲ್ಲೇ ಮತ್ತೆ ಮುನ್ನೆಲೆಗೆ ಬರಲು ಬಿಎಸ್ಎನ್ಎಲ್ ಈ ಮಾರ್ಗವನ್ನು ಅನುಸರಿಸುತ್ತಿರುವಂತೆ ಕಾಣುತ್ತಿದೆ.
Budget 2021 | ಬೆಂಗಳೂರು ಮೆಟ್ರೋಗೆ ಭರ್ಜರಿ ಕೊಡುಗೆ: 58.19 ಕಿಮೀ ವಿಸ್ತರಣೆಗೆ ₹ 14 ಸಾವಿರ ಕೋಟಿ ಅನುದಾನ