Budget 2021 | ಗಡಿ ಸಂಘರ್ಷದ ಆತಂಕ ನಡುವೆ ರಕ್ಷಣೆಗೆ ಸಿಕ್ಕಿದ್ದು ₹ 4.78 ಲಕ್ಷ ಕೋಟಿ ಅನುದಾನ

ಚೀನಾ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿ ರಕ್ಷಣೆಗೆ ಹೆಚ್ಚು ಆದ್ಯತೆ ಸಿಗಬೇಕು ಎಂಬ ಕೂಗು ಕೇಳಿಬಂದಿತ್ತು. ಈ ಒಟ್ಟಾರೆ ಅನುದಾನದಲ್ಲಿ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಪಾಲೆಷ್ಟು ಎಂಬ ಚಿತ್ರಣ ಇನ್ನಷ್ಟೇ ಸಿಗಬೇಕಿದೆ.

Budget 2021 | ಗಡಿ ಸಂಘರ್ಷದ ಆತಂಕ ನಡುವೆ ರಕ್ಷಣೆಗೆ ಸಿಕ್ಕಿದ್ದು ₹ 4.78 ಲಕ್ಷ ಕೋಟಿ ಅನುದಾನ
ಪ್ರಾತಿನಿಧಿಕ ಚಿತ್ರ
Edited By:

Updated on: Feb 01, 2021 | 6:09 PM

ದೆಹಲಿ: ಪೂರ್ವ ಲಡಾಖ್​ನಲ್ಲಿ ಚೀನಾ ಜತೆ ಭಾರತ ಗಡಿ ಸಂಘರ್ಷ ಎದುರಿಸುತ್ತಿರುವ ಈ ಹೊತ್ತಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸಕ್ತ ವರ್ಷದ ಬಜೆಟ್​ನಲ್ಲಿ ಒಟ್ಟು ₹ 4,78,195.62 ಕೋಟಿ ಅನುದಾನ ಘೋಷಿಸಿದ್ದಾರೆ. ಇದರಲ್ಲಿ ಪಿಂಚಣಿ ಹೊರತುಪಡಿಸಿದ ಮೊತ್ತ ₹ 3.62 ಲಕ್ಷ ಕೋಟಿ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ರಕ್ಷಣಾ ವೆಚ್ಚ ಶೇ 7.4ರಷ್ಟು ಹೆಚ್ಚಾಗಿದೆ.

ಶಸ್ತ್ರಾಸ್ತ್ರ ಮತ್ತು ಆಧುನೀಕರಣಕ್ಕಾಗಿ ಕಳೆದ ವರ್ಷ ₹ 1,13,734 ಕೋಟಿ ನೀಡಲಾಗಿತ್ತು. ಈ ಬಾರಿ ₹1,35,060 ಕೋಟಿ ಅನುದಾನ ನೀಡಲಾಗಿದೆ. ಈ ಮೊತ್ತವನ್ನು ಲೆಕ್ಕ ಹಾಕಿದರೆ ಶೇ 18ರಷ್ಟು ಅನುದಾನ ಏರಿಕೆ ಆಗಿರುವುದು ಮನವರಿಕೆಯಾಗುತ್ತದೆ. ರೈಫಲ್, ಕ್ಷಿಪಣಿ ಮತ್ತು ಭೂಸೇನೆಯ ಯುದ್ದೋಪಕರಣ ಖರೀದಿಗೆ ಇದರಿಂದ ಸಹಾಯವಾಗಲಿದೆ. ಕಳೆದ ವರ್ಷ ಸೇನೆಯನ್ನು ಆಧುನೀಕರಣ ಮಾಡಲು ₹ 20,776 ಕೋಟಿ ಹೆಚ್ಚುವರಿ ಅನುದಾನವನ್ನು ನೀಡಲಾಗಿತ್ತು.

ಚೀನಾ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿ ರಕ್ಷಣೆಗೆ ಹೆಚ್ಚು ಆದ್ಯತೆ ಸಿಗಬೇಕು ಎಂಬ ಕೂಗು ಕೇಳಿಬಂದಿತ್ತು. ಈ ಒಟ್ಟಾರೆ ಅನುದಾನದಲ್ಲಿ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಪಾಲೆಷ್ಟು ಎಂಬ ಚಿತ್ರಣ ಇನ್ನಷ್ಟೇ ಸಿಗಬೇಕಿದೆ.

ರಾಜನಾಥ್ ಸಿಂಗ್ ಟ್ವೀಟ್

ಈ ವರ್ಷದ ಬಜೆಟ್ ನಲ್ಲಿ ರಕ್ಷಣಾ ವಲಯಕ್ಕೆ ಒಟ್ಟು ₹4.78 ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ ₹ 1 .35 ಲಕ್ಷ ಕೋಟಿ ಬಂಡವಾಳ ವೆಚ್ಚ (capital expenditure). ಈ ಮಹತ್ವದ ನಿರ್ಧಾರಕ್ಕಾಗಿ ಪ್ರಧಾನಿ ಮತ್ತು ವಿತ್ತ ಸಚಿವರಿಗೆ ಧನ್ಯವಾದಗಳು. ರಕ್ಷಣಾ ವಲಯಕ್ಕೆ ಶೇ 19 ರಷ್ಟು ಹೆಚ್ಚು ಮೊತ್ತವು ಬಂಡವಾಳ ವೆಚ್ಚದಲ್ಲಿ ಲಭಿಸಿದ್ದು, ಕಳೆದ 15 ವರ್ಷದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಮೊತ್ತ ಲಭಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Budget 2021 | ಅತ್ತ ಪಾಕಿಸ್ತಾನ, ಇತ್ತ ಚೀನಾ; ಈ ಬಾರಿಯಾದರೂ ರಕ್ಷಣೆಗೆ ಸಿಗುತ್ತಾ ಬೇಕಿರುವಷ್ಟು ಅನುದಾನ

Budget 2021 | ಮಧ್ಯಮ ವರ್ಗದವರಿಗಿಲ್ಲ ರಿಲೀಫ್​: ಟ್ವಿಟರ್​ನಲ್ಲಿ ಸಖತ್​ ಟ್ರೋಲ್​

 

Published On - 5:30 pm, Mon, 1 February 21