ಬಹುಮಹಡಿ ಕಟ್ಟಡ ಕುಸಿತ, 8 ಜನರ ದುರ್ಮರಣ!

|

Updated on: Sep 21, 2020 | 7:58 AM

3 ಅಂತಸ್ತಿನ ಬಹುಮಹಡಿ ಕಟ್ಟಡ ಕುಸಿದು 8 ಜನ ಮೃತಪಟ್ಟಿರುವ ದುರಂತ ಮಹಾರಾಷ್ಟ್ರದ ಭಿವಂಡಿಯಲ್ಲಿ ಸಂಭವಿಸಿದೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ರಕ್ಷಣಾ ಕಾರ್ಯಗಳನ್ನು ನಡೆಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮಗುವನ್ನು ಜೀವಂತವಾಗಿ ರಕ್ಷಿಸುವಲ್ಲಿ ಯಾಸ್ವಿಯಾಗಿದೆ. ಆರಂಭಿಕ ಮಾಹಿತಿಯಂತೆ ನಗರದ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಮುಂಜಾನೆ ಕಟ್ಟಡ ಕುಸಿದ ವೇಳೆ ಸ್ಥಳೀಯರು 20 ಜನರನ್ನು ರಕ್ಷಿಸಿದ್ದಾರೆ. #WATCH Maharashtra: Rescue operation by NDRF (National […]

ಬಹುಮಹಡಿ ಕಟ್ಟಡ ಕುಸಿತ, 8 ಜನರ ದುರ್ಮರಣ!
Follow us on

3 ಅಂತಸ್ತಿನ ಬಹುಮಹಡಿ ಕಟ್ಟಡ ಕುಸಿದು 8 ಜನ ಮೃತಪಟ್ಟಿರುವ ದುರಂತ ಮಹಾರಾಷ್ಟ್ರದ ಭಿವಂಡಿಯಲ್ಲಿ ಸಂಭವಿಸಿದೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ರಕ್ಷಣಾ ಕಾರ್ಯಗಳನ್ನು ನಡೆಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮಗುವನ್ನು ಜೀವಂತವಾಗಿ ರಕ್ಷಿಸುವಲ್ಲಿ ಯಾಸ್ವಿಯಾಗಿದೆ. ಆರಂಭಿಕ ಮಾಹಿತಿಯಂತೆ ನಗರದ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಮುಂಜಾನೆ ಕಟ್ಟಡ ಕುಸಿದ ವೇಳೆ ಸ್ಥಳೀಯರು 20 ಜನರನ್ನು ರಕ್ಷಿಸಿದ್ದಾರೆ.