‘ನನ್ನ ಹೆಂಡತಿ ಫುಲ್ ಟೈಟ್ ಆದ್ಮೇಲೆ ತುಂಬಾ ಹೊಡೀತಾಳೆ ಸಾರ್.. ಪ್ಲೀಸ್ ನನ್ನನ್ನ ಕಾಪಾಡಿ!’
ಗಾಂಧಿನಗರ: ನನ್ನ ಹೆಂಡತಿ ಕಂಠ ಪೂರ್ತಿ ಕುಡಿದ ಮೇಲೆ ನನಗೆ ಚೆನ್ನಾಗಿ ಹೊಡೀತಾಳೆ ಸಾರ್. ದಯವಿಟ್ಟು ನನ್ನನ್ನ ಕಾಪಾಡಿ ಅಂತಾ ಪತಿರಾಯನೊಬ್ಬ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿರುವ ಸ್ವಾರಸ್ಯಕರ ಪ್ರಸಂಗ ಗುಜರಾತ್ನ ಅಹ್ಮದಾಬಾದ್ನಲ್ಲಿ ಬೆಳಕಿಗೆ ಬಂದಿದೆ. ಹೌದು, 2018ರಲ್ಲಿ ವಿವಾಹವಾದ 29 ವರ್ಷದ ಯುವಕನೊಬ್ಬನ ಗೋಳಿನ ಕಥೆಯಿದು. ಹುಡುಗಿ ನೋಡೋಕೆ ಸುಂದರವಾಗಿದ್ದಳು ಅಂತಾ ಯುವಕ ಮರುಯೋಚಿಸದೆ ಆಕೆಯನ್ನು ವರಿಸಿದ್ದ. ಮದುವೆಯಾದ ಬಳಿಕ ಅತನಿಗೆ ಗೊತ್ತಾಯ್ತಂತೆ ಆಕೆಗೆ ಕುಡಿತದ ಚಟವಿದೆ ಎಂದು. ಇದೀಗ, ನನ್ನ ಪತ್ನಿ ಮದ್ಯದ […]
ಗಾಂಧಿನಗರ: ನನ್ನ ಹೆಂಡತಿ ಕಂಠ ಪೂರ್ತಿ ಕುಡಿದ ಮೇಲೆ ನನಗೆ ಚೆನ್ನಾಗಿ ಹೊಡೀತಾಳೆ ಸಾರ್. ದಯವಿಟ್ಟು ನನ್ನನ್ನ ಕಾಪಾಡಿ ಅಂತಾ ಪತಿರಾಯನೊಬ್ಬ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿರುವ ಸ್ವಾರಸ್ಯಕರ ಪ್ರಸಂಗ ಗುಜರಾತ್ನ ಅಹ್ಮದಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಹೌದು, 2018ರಲ್ಲಿ ವಿವಾಹವಾದ 29 ವರ್ಷದ ಯುವಕನೊಬ್ಬನ ಗೋಳಿನ ಕಥೆಯಿದು. ಹುಡುಗಿ ನೋಡೋಕೆ ಸುಂದರವಾಗಿದ್ದಳು ಅಂತಾ ಯುವಕ ಮರುಯೋಚಿಸದೆ ಆಕೆಯನ್ನು ವರಿಸಿದ್ದ. ಮದುವೆಯಾದ ಬಳಿಕ ಅತನಿಗೆ ಗೊತ್ತಾಯ್ತಂತೆ ಆಕೆಗೆ ಕುಡಿತದ ಚಟವಿದೆ ಎಂದು.
ಇದೀಗ, ನನ್ನ ಪತ್ನಿ ಮದ್ಯದ ಅಮಲಿನಲ್ಲಿ ನನಗೆ ಹಾಗೂ ನನ್ನ ಕುಟುಂಬಸ್ಥರಿಗೆ ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳ ನೀಡುತ್ತಾಳೆ ಅಂತಾ ಪತಿ ಮಹಾಶಯ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿದ್ದಾನೆ. ಅಷ್ಟೇ ಅಲ್ಲ, ತನಗೆ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಖಾಕಿ ಪಡೆ ಬಳಿ ಮೊರೆಯಿಟ್ಟಿದ್ದಾನಂತೆ.