Haryana Bus Accident: ಹರ್ಯಾಣದ ಪಂಚಕುಲದ ಬಳಿ ಬಸ್​ ಪಲ್ಟಿ, 40 ಮಕ್ಕಳಿಗೆ ಗಂಭೀರ ಗಾಯ

|

Updated on: Jul 08, 2024 | 10:22 AM

ಚಾಲಕನ ನಿಯಂತ್ರಣ ತಪ್ಪಿ ಬಸ್​ ಪಲ್ಟಿಯಾದ ಪರಿಣಾಮ 40 ಮಕ್ಕಳು ಗಾಯಗೊಂಡಿರುವ ಘಟನೆ ಹರ್ಯಾಣದ ಪಂಚಕುಲದಲ್ಲಿ ನಡೆದಿದೆ. ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

Haryana Bus Accident: ಹರ್ಯಾಣದ ಪಂಚಕುಲದ ಬಳಿ ಬಸ್​ ಪಲ್ಟಿ, 40 ಮಕ್ಕಳಿಗೆ ಗಂಭೀರ ಗಾಯ
ವಿದ್ಯಾರ್ಥಿಗಳು
Follow us on

ಹರ್ಯಾಣದ ಪಂಚಕುಲದಲ್ಲಿ ಬಸ್​ ಪಲ್ಟಿಯಾಗಿ 40 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಪಿಂಜೋರ್ ಬಳಿ ಅಪಘಾತ ಸಂಭವಿಸಿದೆ, ಬಸ್‌ನಲ್ಲಿ 40 ಶಾಲಾ ಮಕ್ಕಳು ಮತ್ತು ಇತರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಚಂಡೀಗಢ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಹೇಗೆ ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈವರೆಗಿನ ತನಿಖೆಯಿಂದ ಬಸ್‌ನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದದ್ದು ಬೆಳಕಿಗೆ ಬಂದಿದೆ.

ವಾಸ್ತವವಾಗಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳು ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ದೇ ಕಾರಣಕ್ಕೆ ಬಸ್‌ನಲ್ಲಿ ಹೆಚ್ಚು ಪ್ರಯಾಣಿಕರಿದ್ದರು. ಚಾಲಕನಿಗೆ ಬಸ್ ನಿಯಂತ್ರಿಸಲು ಸಾಧ್ಯವಾಗದೆ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ.

ಮತ್ತಷ್ಟು ಓದಿ: ಕಲಬುರಗಿ: ಕಮಲಾಪುರ ಬಳಿ ಭೀಕರ ಅಪಘಾತ, ಮೂವರು ಸಾವು

ಪಿಂಜೋರ್ ಪಂಚಕುಲದ ಗುಡ್ಡಗಾಡು ಪ್ರದೇಶವಾಗಿದೆ. ಇಲ್ಲಿನ ರಸ್ತೆಗಳು ಅಂಕುಡೊಂಕಾಗಿವೆ. ರಸ್ತೆಯ ದುಸ್ಥಿತಿಯೂ ಅಪಘಾತಕ್ಕೆ ಕಾರಣವಾಗಿರಬಹುದು. ಪಿಂಜೋರ್ ನ ನೌಲತಾ ಗ್ರಾಮದ ಬಳಿ ಬಸ್ ಅಪಘಾತಕ್ಕೀಡಾಗಿದೆ.

ಬಸ್ ತುಂಬಿತ್ತು ಮತ್ತು ಸುಮಾರು 70 ಮಕ್ಕಳಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಗಾಯಾಳುಗಳನ್ನು ನಗರದ ಪಿಂಜೋರ್ ಆಸ್ಪತ್ರೆ ಮತ್ತು ಸೆಕ್ಟರ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ