ಚಲಿಸುತ್ತಿದ್ದ ಬಸ್ನಿಂದ ಕೆಳಗೆ ಬಿದ್ದ ಮಹಿಳೆ, ಭಯಾನಕ ವಿಡಿಯೋ ಇಲ್ಲಿದೆ
ಚಲಿಸುತ್ತಿರುವ ಬಸ್ನಿಂದ ಮಹಿಳೆಯೊಬ್ಬರು ಬಿದ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ, ಅದೃಷ್ಟವಶಾತ್ ಅವರ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ಕೂಡಲೇ ಅವರನ್ನು ಸೇಲಂ ಆಸ್ಪತ್ರೆಗೆ ದಾಖಲಿಸಲಾಯಿತು, ಅವರು ಗಂಭೀರವಾಗಿ ಗಾಯಗೊಂಡಿದ್ದು, ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಸಾಮಾನ್ಯವಾಗಿ ಬಸ್ಗಳಲ್ಲಿ ಸೀಟುಗಳಿರುವುದಕ್ಕಿಂತ ಹೆಚ್ಚು ಮಂದಿ ಸಂಚರಿಸುತ್ತಾರೆ. ಸಾಕಷ್ಟು ಪ್ರಯಾಣಿಕರು ನಿಂತೇ ಪ್ರಯಾಣಿಸುತ್ತಾರೆ. ಕೆಲವು ಬಸ್ಗಳಲ್ಲಿ ಬಾಗಿಲು ತೆರೆದೇ ಇರುತ್ತದೆ, ಇನ್ನೂ ಕೆಲವು ಬಸ್ಗಳನ್ನು ಬಾಗಿಲುಗಳು ಅಷ್ಟು ಗಟ್ಟಿ ಇರುವುದಿಲ್ಲ. ಒಮ್ಮೆ ಒರಗಿದರೂ ಕೆಳಗೆ ಬೀಳುವಂತಿರುತ್ತೆ.
ತಮಿಳುನಾಡಿನ ನಾಮಕ್ಕಲ್ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಮಹಿಳೆಯೊಬ್ಬರು ಚಲಿಸುತ್ತಿರುವ ಬಸ್ನಿಂದ ಕೆಳಗೆ ಬಿದ್ದಿದ್ದಾರೆ. ಆ ಸಮಯದಲ್ಲಿ ಬಸ್ನ ವೇಗವೂ ಹೆಚ್ಚಿತ್ತು, ಈ ದೃಶ್ಯ ಖಾಸಗಿ ಬಸ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಾರದಾ ಎಂಬ ಮಹಿಳೆ ಬಟ್ಟೆ ಖರೀದಿಸಲು ಜೇಡರಪಾಳ್ಯಂನಿಂದ ಸೇಲಂಗೆ ತೆರಳಿದ್ದು, ಖಾಸಗಿ ಬಸ್ನಲ್ಲಿ ಮನೆಗೆ ಮರಳುತ್ತಿದ್ದರು. ಆಕೆ ಬಸ್ನಿಂದ ಸುಮಾರು 20 ಅಡಿ ದೂರದಲ್ಲಿ ಬಿದ್ದಿದ್ದಾಳೆ, ಗಾಬರಿಗೊಂಡ ಪ್ರಯಾಣಿಕರು ಕಂಡಕ್ಟರ್ಗೆ ಮಾಹಿತಿ ನೀಡಿ ಬಸ್ ನಿಲ್ಲಿಸಿದ್ದಾರೆ. ಪ್ರಯಾಣಿಕರು ಶಾರದಾಗೆ ಸಹಾಯ ಮಾಡಿದರು. ಚಿಕಿತ್ಸೆಗಾಗಿ ಸೇಲಂನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮತ್ತಷ್ಟು ಓದಿ: Viral News: ಬೇಗ ಅಪಘಾತ ಮಾಡಿ; ಸಿಕ್ಕಾಪಟ್ಟೆ ಟ್ರೋಲ್ ಆಯ್ತು ಮಂಗಳೂರು- ಮಡಿಕೇರಿ ಹೆದ್ದಾರಿಯ ಬೋರ್ಡ್
ಗಂಭೀರವಾಗಿ ಗಾಯಗೊಂಡಿದ್ದರೂ ಜೀವಕ್ಕೆ ಅಪಾಯವಿಲ್ಲ ಎಂಬುದು ತಿಳಿದುಬಂದಿದೆ. ಈ ವಿಡಿಯೋದಲ್ಲಿ ಹಲವು ಮಹಿಳೆಯರು ನಿಂತು ಪ್ರಯಾಣಿಸುತ್ತಿರುವುದು ಕಂಡು ಬಂದಿದೆ, ಅವರಲ್ಲಿ ಶಾರದಾ ಬಾಗಿಲ ಮುಂದೆಯೇ ನಿಂತಿದ್ದರು, ಬಾಗಿಲು ತೆರೆದಿತ್ತು, ಮಹಿಳೆಯರು ಮತ್ತು ಮಕ್ಕಳು ಬಸ್ಸಿನ ಮುಂಭಾಗದಲ್ಲಿ ನಿಂತಿದ್ದರೆ, ಪುರುಷರು ಹಿಂಭಾಗದಲ್ಲಿ ನಿಂತಿದ್ದರು.
ராசிபுரம் அருகே ஓடும் பஸ்ஸிலிருந்து தூக்கி வீசப்படும் பெண்ணின் பதபதைக்க வைக்கும் காட்சிகள்.#Rasipuram #namakkalnews #Namakkal #CCTVFootage #viralreels #accident #cctv #viral pic.twitter.com/uhzEQDrNya
— GOWRISANKAR B (@b_gowrisankar22) July 3, 2024
ಈ ವೇಳೆ ಶಾರದಾ ಪೋಲ್ ಹಿಡಿದು ನಿಂತಿದ್ದರು, ಬಸ್ ಕರ್ವಿಂಗ್ನಲ್ಲಿ ತಿರುಗಿದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ಜನರು ಬಸ್ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ವಿಡಿಯೋ ಎರಡನೇ ಭಾಗದಲ್ಲಿ ಶಾರದಾ ಎಷ್ಟು ವೇಗವಾಗಿ ಬಿದ್ದಿದ್ದಾಳೆಂಬುದನ್ನು ಕಾಣಬಹುದು. ಬಸ್ ನಿಂತ ತಕ್ಷಣ ಜನರು ಆಕೆಯ ಸಹಾಯಕ್ಕಾಗಿ ಓಡಿದರು, ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ