Viral News: ಬೇಗ ಅಪಘಾತ ಮಾಡಿ; ಸಿಕ್ಕಾಪಟ್ಟೆ ಟ್ರೋಲ್ ಆಯ್ತು ಮಂಗಳೂರು- ಮಡಿಕೇರಿ ಹೆದ್ದಾರಿಯ ಬೋರ್ಡ್
ಕೆಲವೊಮ್ಮೆ ಅನುವಾದ ಭಾರೀ ಅವಘಡಕ್ಕೆ ಕಾರಣವಾಗುತ್ತದೆ. ಗೂಗಲ್ ಟ್ರಾನ್ಸ್ಲೇಟ್ ಮಾಡುವುದರಿಂದ ಆ ವಾಕ್ಯ ಅಭಾಸವಾಗಿರುವ ಅದೆಷ್ಟೋ ಉದಾಹರಣೆಗಳು ಇವೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದ ಮಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ಸೈನ್ಬೋರ್ಡ್ ಒಂದು ಭಾರೀ ವೈರಲ್ ಆಗಿದೆ. ಇದನ್ನು ಎಕ್ಸ್‌ನಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಮಂಗಳೂರು: ಕರ್ನಾಟಕ ರಾಜ್ಯದ ಮಂಗಳೂರು ಹೆದ್ದಾರಿಯಲ್ಲಿ ಅವಸರವೇ ಅಪಘಾತಕ್ಕೆ ಕಾರಣ ಎಂಬ ಎಚ್ಚರಿಕೆಯ ಬೋರ್ಡ್ ಹಾಕಲಾಗಿದೆ. ಅದರ ಕೆಳಗೆ ಇಂಗ್ಲಿಷ್‌ನಲ್ಲಿ ಅನುವಾದ ಮಾಡಿರುವ ಸಾಲುಗಳನ್ನು ಕೂಡ ಹಾಕಲಾಗಿದ್ದು, ಗೂಗಲ್ ಟ್ರಾನ್ಸಲೇಟ್ ಮಾಡಿರುವ ಭೂಪರು ಈ ಕನ್ನಡದ ವಾಕ್ಯವನ್ನು Urgent make an Accident (ತುರ್ತಾಗಿ ಅಪಘಾತ ಮಾಡಿ) ಎಂದು ಅನುವಾದಿಸಿದ್ದಾರೆ. ಈ ಬೋರ್ಡ್ನ ಫೋಟೋ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಭಾರೀ ಟ್ರೋಲ್ ಆಗುತ್ತಿದೆ.
ಮಂಗಳೂರು ಹೆದ್ದಾರಿಯಲ್ಲಿನ ಈ ಬೋರ್ಡ್ನ ಫೋಟೋವನ್ನು ಎಕ್ಸ್‌ನಲ್ಲಿ ಕೊಡಗು ಕನೆಕ್ಟ್ ಪೇಜ್ ಪೋಸ್ಟ್ ಮಾಡಿದೆ. ಈ ಪೋಸ್ಟನ್ನು ನೂರಾರು ಜನರು ರೀಟ್ವೀಟ್ ಮಾಡಿದ್ದು, ವೈರಲ್ ಆಗಿದೆ.
‘ಕೊಡಗು ಕನೆಕ್ಟ್’ ಹೆಸರಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಸೈನ್‌ಬೋರ್ಡ್‌ನ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೈನ್‌ಬೋರ್ಡ್‌ನ ಕನ್ನಡ ಬರಹದ ಇಂಗ್ಲಿಷ್ ಅನುವಾದವನ್ನು “ತುರ್ತಾಗಿ ಅಪಘಾತ ಮಾಡಿ” ಎಂದು ಬರೆಯಲಾಗಿದೆ. ಇದನ್ನು ಇಂಗ್ಲಿಷ್‌ನಲ್ಲಿ Overspeeding is the reason for Accidents ಎಂದು ಬರೆಯುವ ಬದಲು Urgent make an Accident ಎಂದು ಅನುವಾದಿಸಲಾಗಿದೆ.
ಇದನ್ನೂ ಓದಿ: Viral Video: ಕೇದಾರನಾಥ ದೇಗುಲದ ಬಳಿ ಭಾರೀ ಹಿಮಪಾತ; ಭಯಾನಕ ವಿಡಿಯೋ ವೈರಲ್
ಕರ್ನಾಟಕ ಹೆದ್ದಾರಿಯಲ್ಲಿನ ಎಚ್ಚರಿಕೆ ಫಲಕ ಅಂತರ್ಜಾಲದಲ್ಲಿ ಟ್ರೋಲ್ ಆಗಿದ್ದು, ‘ತಪ್ಪಾಗಿ ಅನುವಾದಿಸಲಾದ ಈ ಬೋರ್ಡನ್ನು ಇನ್ನೂ ಸರಿ ಮಾಡಿಲ್ಲವೇ?’ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.
Lost in translation.
Location: Near Sampaje. Along Madikeri to Mangaluru National Highway 275. @NHAI_Official pic.twitter.com/i2k7NLQdaL
— Kodagu Connect (@KodaguConnect) July 2, 2024
ಕರ್ನಾಟಕದ ಮಂಗಳೂರು-ಕೊಡಗು ಸಮೀಪದ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಈ ತುರ್ತು ಸೂಚನಾ ಫಲಕ ಅಂತರ್ಜಾಲದ ಗಮನ ಸೆಳೆದಿದೆ.
This is hilarious. Wont the authorities be responsible to atleast inspect what is written in these sign boards? Dont you have any representatives of @NHAI_Official regionally. More over it displays that it is the Govt of Karnataka cautioning drivers.
— Raghunandan S V (@coachraghu1) July 3, 2024
ಇಂಗ್ಲಿಷ್‌ನಲ್ಲಿ ಸೈನ್ ಬೋರ್ಡ್‌ಗಳನ್ನು ಭಾಷಾಂತರಿಸುವ ಸರ್ಕಾರದ ಪ್ರಯತ್ನವನ್ನು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.
Thank god! be happy that they didnt translated kannada using google translator lol
— warmbirdss28 (@PruthviPrasad02) July 2, 2024
ಈ ಬೋರ್ಡನ್ನು ವಿಮಾ ಏಜೆಂಟ್‌ಗಳಿಗೆ ಟ್ಯಾಗ್ ಮಾಡಿ. ಅವರು ಈ ಬೋರ್ಡನ್ನು ಬೇಗನೆ ಸರಿಪಡಿಸುತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
Even I saw this few months back… This shows RTO department are actually not concerned about safety of people… They just want to finish their job given to them and show some work done to govt and people… #RoadSafety @NHAI_Official #NH275 @CMofKarnataka https://t.co/FKM4zsJUg7
— ಆದರ್ಶ ಕಶ್ಯಪ (@adarshkm50) July 2, 2024
ಇದನ್ನೂ ಓದಿ: Shocking Video: ಪಿಕ್ನಿಕ್ ಹೋದ ಒಂದೇ ಕುಟುಂಬದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಈ ಬೋರ್ಡ್ ನೋಡಿದ ಚಾಲಕರು ಕನ್ನಡದ ವಾಕ್ಯವನ್ನು ಫಾಲೋ ಮಾಡಬೇಕೋ ಅಥವಾ ಇಂಗ್ಲಿಷ್ ವಾಕ್ಯವನ್ನು ಫಾಲೋ ಮಾಡಬೇಕೋ ಎಂದು ಗೊಂದಲಕ್ಕೆ ಒಳಗಾಗುವುದು ಗ್ಯಾರಂಟಿ ಎಂದು ಇನ್ನು ಕೆಲವರು ಪೋಸ್ಟ್ ಮಾಡಿದ್ದಾರೆ.
Do they check translation before printing? https://t.co/r6xnBRpyef
— varsha padhye (@PadhyeVarsha) July 3, 2024
ಈ ಬೋರ್ಡ್ ಮಂಗಳೂರು- ಕೊಡಗು ಹೆದ್ದಾರಿಯಲ್ಲಿ ಕಂಡುಬಂದಿದೆ. ಸುಳ್ಯದ ಬಳಿಯ ಸಂಪಾಜೆ ಹತ್ತಿರ ಮಡಿಕೇರಿ ಘಾಟ್ ಆರಂಭವಾಗುವುದಕ್ಕೂ ಮುನ್ನ ಈ ಬೋರ್ಡ್ ಹಾಕಲಾಗಿದೆ. ಮಡಿಕೇರಿಯಿಂದ ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈ ಬೋರ್ಡ್ ಇದೆ. ಕೊಡಗು ಕನೆಕ್ಟ್ ಪೋಸ್ಟ್ ಮಾಡಿರುವ ಈ ಫೋಟೋಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕೃತ ಪೇಜನ್ನು ಸಹ ಟ್ಯಾಗ್ ಮಾಡಲಾಗಿದೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Wed, 3 July 24