Viral Video: ಮದುವೆಯಾಗಲು ಸತಾಯಿಸಿದ ಬಾಯ್‌ಫ್ರೆಂಡ್‌, ಕೋಪದಲ್ಲಿ ಆತನ ಮರ್ಮಾಂಗ ಕತ್ತರಿಸಿ ಹಾಕಿದ ವೈದ್ಯೆ

ಪ್ರೀತಿ ನಿರಾಕರಣೆ ಮಾಡಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಂತಹ, ಕೊಲೆಗಳು ನಡೆದಂತಹ ಘಟನೆಗಳು ನಡೆದಿವೆ. ಇದೀಗ ಪ್ರೀತಿಯ ವಿಷಯಕ್ಕೆ ಸಂಬಂಧಿಸಿದ ಅಂತಹದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಬಹು ಸಮಯದಿಂದ ಪರಸ್ಪರ ಪ್ರೀತಿಸಿ ಇದೀಗ ಮದುವೆಯಾಗಲು ಸತಾಯಿಸುತ್ತಿದ್ದಾನೆಂದು ಲೇಡಿ ಡಾಕ್ಟರ್‌ ಒಬ್ಬರು ಕೋಪದಲ್ಲಿ ತನ್ನ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾರೆ. ಈ ಕುರಿತ ಸುದ್ದಿ ಇದೀಗ ವೈರಲ್‌ ಆಗುತ್ತಿದೆ.

Viral Video: ಮದುವೆಯಾಗಲು ಸತಾಯಿಸಿದ ಬಾಯ್‌ಫ್ರೆಂಡ್‌, ಕೋಪದಲ್ಲಿ ಆತನ ಮರ್ಮಾಂಗ ಕತ್ತರಿಸಿ ಹಾಕಿದ ವೈದ್ಯೆ
ವೈರಲ್ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 03, 2024 | 6:14 PM

ಪ್ರೀತಿ ನಿರಾಕರಿಸಿದಳೆಂದು ಪಾಗಲ್‌ ಪ್ರೇಮಿಗಳು ತಮ್ಮ ಪ್ರಿಯತಮೆಯ ಮೇಲೆ ಹಲ್ಲೆ ನಡೆಸಿದಂತಹ, ಆಸಿಡ್‌ ಎರಚಿದಂತಹ ಅಮಾನವೀಯ ಘಟನೆಗಳ ಸುದ್ದಿಗಳು, ಮದುವೆಗೆ ನಿರಾಕರಿಸಿದ್ದಕ್ಕಾಗಿ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಂತಹ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಇದೀಗ ಅಂತಹದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಬಹು ಸಮಯದಿಂದ ಪರಸ್ಪರ ಪ್ರೀತಿಸಿ ಇದೀಗ ಮದುವೆಯಾಗಲು ಒಪ್ಪುತ್ತಿಲ್ಲ ಎಂದು ಲೇಡಿ ಡಾಕ್ಟರ್‌ ಒಬ್ಬರು ಕೋಪದಲ್ಲಿ ತನ್ನ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾರೆ. ಈ ಕುರಿತ ಸುದ್ದಿ ಇದೀಗ ವೈರಲ್‌ ಆಗುತ್ತಿದೆ.

ಬಿಹಾರಾದ ಸರನ್‌ ಜಿಲ್ಲೆಯ ಮಧುರಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಇಲ್ಲಿನ ಸ್ಥಳೀಯ ಆಸ್ಪತ್ರೆಯ ವೈದ್ಯೆ ಅಭಿಲಾಷಾ(26) ಮತ್ತು ಮಧುರಾದ 12 ನೇ ವಾರ್ಡ್‌ನ ಕೌನ್ಸಿಲರ್‌ ವೇದ್‌ ಪ್ರಕಾಶ್‌(30) ಬಹುಕಾಲದಿಂದ ಪ್ರೀತಿಸುತ್ತಿದ್ದು, ಲಿವ್‌ ಇನ್‌ ರಿಲೇಷನ್‌ನಲ್ಲಿದ್ದರು. ಆದರೆ ಇದೀಗ ಪ್ರಿಯಕರ ವೇದ್‌ ಮದುವೆಯಾಗಲು ಸತಾಯಿಸುತ್ತಿದ್ದು, ಇದರಿಂದ ಕೋಪಗೊಂಡ ಲೇಡಿ ಡಾಕ್ಟರ್‌ ಆತನ ಗುಪ್ತಾಂಗವನ್ನೇ ಕತ್ತರಿಸಿದ್ದಾರೆ. ಮನೆಯಲ್ಲಿ ಕೌನ್ಸಿಲರ್‌ ನೋವಿನಿಂದ ನರಳುವ ಸದ್ದು ಕೇಳಿ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿದ್ದು, ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಬೆಡ್‌ರೂಮ್‌ನಲ್ಲಿ ನರಳುತ್ತಾ ಮಲಗಿದ್ದ ವೇದ್‌ ಪ್ರಕಾಶ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ನಾನೇ ಪ್ರಿಯಕರನ ಮರ್ಮಾಂಗವನ್ನು ಚಾಕುವಿನಿಂದ ಕತ್ತರಿಸಿದ್ದು ಎಂದು ಮಹಿಳಾ ವೈದ್ಯೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ದೀರ್ಘ ಕಾಲದಿಂದ ನಾವಿಬ್ಬರು ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದು, ನನ್ನನ್ನೇ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧವನ್ನೂ ಬೆಳೆಸಿದ್ದ. ಆದರೀಗ ಆತ ಮದುವೆಗೆ ನಿರಾಕರಿಸಿದ್ದು, ಇದರಿಂದ ಕೋಪಗೊಂಡ ನಾನು ಆತನನ್ನು ಮನೆಗೆ ಕರೆಸಿ ಆತನ ಗುಪ್ತಾಂಗವನ್ನು ಕತ್ತರಿಸಿದೆ ಎಂದು ವೈದ್ಯೆ ಅಭಿಲಾಷ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಇದೀಗ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಎಫ್.ಐ.ಆರ್‌ ದಾಖಲಿಸಿಕೊಂಡು ಆಕೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಆಕ್ಟಿಂಗ್‌ ಬಿಟ್ಟು ಜ್ಯೂಸ್‌ ಅಂಗಡಿ ಇಟ್ರಾ ಹೃತಿಕ್‌ ರೋಷನ್‌?

ಆಕಾಶ್‌ ಅಶೋಕ್‌ ಗುಪ್ತಾ (peepoye_) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಕೌನ್ಸಿಲರ್‌ ವೇದ್‌ ಪ್ರಕಾಶ್‌ ನೋವಿನಿಂದ ನರಳುತ್ತಾ ಬೆಡ್‌ ಮೇಲೆ ಮಲಗಿರುವ ದೃಶ್ಯವನ್ನು ಕಾಣಬಹುದು. ವೈದ್ಯೆ ಅಭಿಲಾಷ ಜೋರಾಗಿ ಅಳುತ್ತಾ ಮದುವೆಗೆ ನಿರಾಕರಿಸಿದ್ದಕ್ಕಾಗಿ ನಾನು ಹೀಗೆ ಮಾಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 19 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಸುದ್ದಿ ನೆಟ್ಟಿಗರಿಗೆ ಶಾಕ್‌ ನೀಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್